ಬ್ರೇಕಿಂಗ್ ನ್ಯೂಸ್
– ಹೆಬ್ರಿ ಕಾಡಲ್ಲಿ ನಕ್ಸಲ್ ಎನ್ಕೌಂಟರ್!?
– ನಕ್ಸಲ್ ನಾಯಕ ವಿಕ್ರಮ್ ಗೌಡ ಗುಂಡೇಟಿಗೆ ಬಲಿ?
– ನಕ್ಸಲ್ – ಪೊಲೀಸ್ ಮುಖಾಮುಖಿ ಗುಂಡಿನ ಚಕಮಕಿ
– ಇನ್ನು ಅಧಿಕೃತ ಮಾಹಿತಿ ಹೊರ ಬಂದಿಲ್ಲ
NAMMUR EXPRESS NEWS
ಹೆಬ್ರಿ: ಹೆಬ್ರಿ ತಾಲೂಕಿನ ಕಬ್ಬಿನಾಲೆಯ ತಿಂಗಳೆಮಕ್ಕಿ ಪೀತ್’ಬೈಲು ಎಂಬಲ್ಲಿನ ದಟ್ಟಕಾಡಿನಲ್ಲಿ ಸೋಮವಾರ ತಡರಾತ್ರಿನಕ್ಸಲ್ ನಿಗ್ರಹ ಪಡೆ ಪೊಲೀಸರು ಹೊಂಚುಹಾಕಿ ಓರ್ವ ನಕ್ಸಲ್ ಮುಖಂಡನನ್ನು ಹೊಡೆದುರುಳಿಸಿದೆ ಎನ್ನುವ ಮಾಹಿತಿ ಲಭಿಸಿದೆ. ಆದರೆ ಅಧಿಕಾರಿ ಮೂಲಗಳು ಖಚಿತಪಡಿಸಿಲ್ಲ. ಎನ್’ಕೌಂಟರ್ ನಲ್ಲಿ ಮೋಸ್ಟ್ ವಾಂಟೆಡ್ ನಕ್ಸಲ್ ಹೆಬ್ರಿ ತಾಲೂಕಿನ ನಾಡಾಲು ಗ್ರಾಮದ ಕೂಡ್ಲು ವಿಕ್ರಮ್ ಗೌಡ ಹತ್ಯೆಯಾಗಿದೆ ಎನ್ನಲಾಗುತ್ತಿದೆ. ಹೆಬ್ರಿಯ ಸೀತಾಂಬೈಲು ಎಂಬಲ್ಲಿ ನಡೆದ ಶೂಟ್ ಔಟ್ ನಲ್ಲಿ ನಕ್ಸಲ್ ವಿಕ್ರಂ ಗೌಡ ಮೃತಪಟ್ಟಿದ್ದಾರೆ ಎನ್ನಲಾಗಿದೆ. ಸೋಮವಾರ ರಾತ್ರಿ ಹೊತ್ತಿನಲ್ಲಿ ಎಎನ್ಎಫ್ ತಂಡ ಕೂಂಬಿಂಗ್ ಮಾಡುತ್ತಿದ್ದ ವೇಳೆ ವೇಳೆ ವಿಕ್ರಂ ಗೌಡ ನೇತೃತ್ವದ ನಕ್ಸಲರ ತಂಡ ಮುಖಾಮುಖಿಯಾಗಿದೆ ಎನ್ನಲಾಗಿದೆ.
ಸೋಮವಾರ ರಾತ್ರಿ ನಕ್ಸಲರ ಓಡಾಟದ ಕುರಿತು ರಹಸ್ಯ ಖಚಿತ ಮಾಹಿತಿ ಪಡೆದ ಪೊಲೀಸ್ ಪಡೆ ಭಾರೀ ಶಸ್ತ್ರಾಸ್ತ್ರಗಳೊಂದಿಗೆ ಹೊಂಚುಹಾಕಿ ನಕ್ಸಲ್ ಬೇಟೆಯಾಡಿದೆ. ನಕ್ಸಲ್ ಎನ್ ಕೌಂಟರ್ ಕುರಿತು ತಡರಾತ್ರಿ ಮಾಧ್ಯಮಗಳಿಗೆ ವದಂತಿಯಾಗಿದ್ದರೂ, ಈ ಘಟನೆ ಕುರಿತು ಪೊಲೀಸ್ ಇಲಾಖೆ ಈವರೆಗೂ ಘಟನೆ ಕುರಿತು ಯಾವುದೇ ಪ್ರತಿಕ್ರಿಯೆ ನೀಡಿಲ್ಲ ಹಾಗೂ ಅಧಿಕೃತವಾಗಿ ಖಚಿತಪಡಿಸಿಲ್ಲ.
ಇತ್ತೀಚಿಗೆ ಕಾರ್ಕಳದ ಈದು, ಶೃಂಗೇರಿಯ ಬುಕ್ಕಡಿಬೈಲು, ಕೊಪ್ಪದ ಜಯಪುರ ಭಾಗದಲ್ಲಿ ನಕ್ಸಲ್ ಓಡಾಟದ ಬಗ್ಗೆ ವರದಿ ಆಗಿತ್ತು. ಇನ್ನು ಕೇರಳ ಭಾಗದಿಂದ ಕರಾವಳಿ ಹಾಗೂ ಮಲೆನಾಡು ಭಾಗಕ್ಕೆ ನಕ್ಸಲರು ಬಂದಿದ್ದಾರೆ ಎನ್ನಲಾಗಿತ್ತು.