ಕರಾವಳಿ ಟಾಪ್ ನ್ಯೂಸ್
– ಉಳ್ಳಾಲ: ಯುವತಿಯ ಮಾನಭಂಗಕ್ಕೆ ಯತ್ನ: ಬಾಲಕ ವಶಕ್ಕೆ
– ಉಡುಪಿ: 10 ತಿಂಗಳಲ್ಲಿ 228 ಕಳವು ಕೇಸ್
– ಮಂಗಳೂರು: ಕಾರಿಗೆ ಬೆಂಕಿ; ನಿರ್ವಹಣ ನಿರ್ಲಕ್ಷ್ಯ ಕಾರಣ?
NAMMUR EXPRESS NEWS
ಉಳ್ಳಾಲ: ಕೊಣಾಜೆ ಠಾಣಾ ವ್ಯಾಪ್ತಿಯ ಬೋಳಿಯಾರ್ ಗ್ರಾಮದ ಕಾಂಪಾಡಿ ಬಳಿ ಯುವತಿಯ ಮಾನಭಂಗಕ್ಕೆ ಯತ್ನಿಸಿದ ಆರೋಪಿ ಬಾಲಕನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಯುವತಿ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ತೆರಳುತ್ತಿದ್ದ ವೇಳೆ ಬಾಲಕ ಸ್ಕೂಟರ್ನಲ್ಲಿ ಬಂದು ಆಕೆಯ ದೇಹ ಸ್ಪರ್ಶಸಿ ಮಾನಭಂಗಕ್ಕೆ ಯತ್ನಿಸಿದ್ದ. ಈ ಸಂದರ್ಭ ಸ್ಥಳೀಯರು ಆಕೆಯನ್ನು ರಕ್ಷಿಸಿದ್ದಾರೆ. ಯುವತಿ ಕೆಥೋಲಿಕ್ ಸಭಾದ ಮುಖ್ಯಸ್ಥರಿಗೆ ಮಾಹಿತಿ ನೀಡಿದ್ದು, ಕೆಥೋಲಿಕ್ ಸಭಾ ಕೇಂದ್ರೀಯ ಅಧ್ಯಕ್ಷ ಆಲ್ವಿನ್ ಡಿ’ಸೋಜಾ ಪಾನೀರು, ಅಮ್ಮೆಂಬಳ ಚರ್ಚ್ ಪಾಲನ ಸಮಿತಿ ಉಪಾಧ್ಯಕ್ಷ ರೋಬರ್ಟ್ ಮತ್ತು ಕೆಥೋಲಿಕ್ ಸಭಾದ ಮುಖಂಡರು ಆಗಮಿಸಿ ಪರಿಸ್ಥಿತಿಯನ್ನು ಶಾಂತಗೊಳಿಸಿದ್ದಾರೆ.
ಸ್ಥಳೀಯರ ಸಹಕಾರದೊಂದಿಗೆ ಆರೋಪಿಯನ್ನು ಕೊಣಾಜೆ ಪೋಲೀಸರ ವಶಕ್ಕೆ ನೀಡಿದ್ದು, ಕೊಣಾಜೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
* ಉಡುಪಿ: 10 ತಿಂಗಳಲ್ಲಿ 228 ಕಳವು ಕೇಸ್
ಉಡುಪಿ: ಜಿಲ್ಲೆಯಲ್ಲಿ ಪ್ರಸ್ತುತ ಸಾಲಿನಲ್ಲಿ ಅತ್ಯಧಿಕ ಕಳ್ಳತನ ಪ್ರಕರಣಗಳು ವರದಿಯಾಗಿದ್ದು, ಬೆರಳೆಣಿಕೆ ಪ್ರಕರಣಗಳನ್ನಷ್ಟೇ ಪೊಲೀಸರು ಪತ್ತೆ ಹಚ್ಚಿದ್ದಾರೆ.
ಕಳೆದ ಎರಡು ವರ್ಷಕ್ಕೆ ಹೋಲಿಸಿದರೆ ಈ ವರ್ಷ ಕಳವು ಪ್ರಕರಣಗಳ ಸಂಖ್ಯೆ ವಿಪರೀತವಾಗಿದೆ. ಕೇವಲ 10 ತಿಂಗಳಲ್ಲೇ 228 ಪ್ರಕರಣಗಳು ದಾಖಲಾಗಿವೆ. ದುರಂತವೆಂದರೆ ಇವುಗಳಲ್ಲಿ ಹೆಚ್ಚಿನ ಪ್ರಕರಣಗಳು ಇನ್ನೂ ಪತ್ತೆಯಾಗಿಲ್ಲ!
ನಗರ ಠಾಣಾ ವ್ಯಾಪ್ತಿಯ ಅನತಿ ದೂರದಲ್ಲಿ ಕಂದಾಯ ಇಲಾಖೆಯ ಸಿ ದರ್ಜೆ ನೌಕರರ ವಸತಿ ಸಮುಚ್ಚಯದ ಆರು ಮನೆಗಳಲ್ಲಿ ಸೆ.29ರ ತಡರಾತ್ರಿ ಸರಣಿ ಕಳ್ಳತನ ನಡೆದಿತ್ತು. ಒಂದು ಮನೆಯಲ್ಲಿ ಸುಮಾರು 120 ಗ್ರಾಂ ಚಿನ್ನ, 20 ಸಾವಿರ ರೂ. ನಗದು, ಮತ್ತೂಂದು ಮನೆಯಲ್ಲಿ 20 ಸಾವಿರ ರೂ. ನಗದನ್ನು ಕಳ್ಳರು ದೋಚಿ ಪರಾರಿಯಾಗಿದ್ದರು. ಘಟನೆ ನಡೆದು 2 ತಿಂಗಳಾಗುತ್ತಿದ್ದರೂ ಪೊಲೀಸರಿಗೆ ಕಳ್ಳರ ಬಗ್ಗೆ ಒಂದೇ ಒಂದು ಕುರುಹು ಕೂಡ ಲಭ್ಯವಾಗಿಲ್ಲ. ಸಿಸಿಟಿವಿಯಲ್ಲಿಯೂ ಈ ಬಗ್ಗೆ ಯಾವುದೇ ಮಾಹಿತಿ ಪೊಲೀಸರಿಗೆ ಲಭಿಸಿಲ್ಲ ಎನ್ನಲಾಗಿದೆ.
* ಮಂಗಳೂರು: ಕಾರಿಗೆ ಬೆಂಕಿ; ನಿರ್ವಹಣ ನಿರ್ಲಕ್ಷ್ಯ ಕಾರಣ?
ಮಹಾನಗರ: ಕಾರುಗಳಲ್ಲಿ ಹಠಾತ್ ಬೆಂಕಿ ಕಾಣಿಸಿಕೊಳ್ಳುವ ಘಟನೆಗಳು ಆಗಿಂದಾಗ್ಗೆ ನಡೆಯುತ್ತಿದ್ದು ಆತಂಕ ಮೂಡಿಸಿವೆ. ಇಂತಹ ಘಟನೆಗಳಿಗೆ ಕಾರಿನ ನಿರ್ವಹಣೆಯಲ್ಲಿನ ನಿರ್ಲಕ್ಷ್ಯವೇ ಮುಖ್ಯ ಕಾರಣವೆನ್ನುವುದು ಮೆಕ್ಯಾನಿಕ್ಗಳ ಅಭಿಮತ.
ಕಾರುಗಳಲ್ಲಿ ಶಾರ್ಟ್ಸರ್ಕ್ನೂಟ್ನಿಂದಾಗಿ ಬೆಂಕಿ ಕಾಣಿಸಿಕೊಂಡು ಕ್ಷಣ ಮಾತ್ರದಲ್ಲಿಯೇ ಇಡೀ ಕಾರು ಹೊತ್ತಿ ಉರಿಯುತ್ತದೆ.
ಕಳೆದ ಕೆಲವೇ ದಿನಗಳ ಅಂತರದಲ್ಲಿ ಮಂಗಳೂರು ನಗರ ಹಾಗೂ ಹೊರವಲಯದ ವಿವಿಧೆಡೆ ಒಟ್ಟು 5 ಕಾರುಗಳು ಬೆಂಕಿಗೆ ಆಹುತಿಯಾಗಿವೆ. ಈ ಪೈಕಿ ಒಂದು ಕಾರಿನಲ್ಲಿ ಸಂಚರಿಸುತ್ತಿದ್ದಾಗಲೇ ಬೆಂಕಿ ಕಾಣಿಸಿಕೊಂಡರೆ, ಉಳಿದ ಮೂರು ಕಾರುಗಳು ಸಂಚರಿಸಿದ ಬಳಿಕ ನಿಲ್ಲಿಸಿದ ಕೆಲವೇ ಸಮಯದಲ್ಲಿ ಹೊತ್ತಿ ಉರಿದಿವೆ. ಎರಡು ವರ್ಷಗಳ ಹಿಂದೆ ಕೂಡ ಮಂಗಳೂರು ನಗರ ಸಹಿತ ಹಲವೆಡೆ ಇಂತಹ ಘಟನೆಗಳು ಸಂಭವಿಸಿದ್ದವು.