ತೀರ್ಥಹಳ್ಳಿ ಸುದ್ದಿಗಳು: ಎಲ್ಲೆಲ್ಲಿ ಏನೇನ್?
– ತೀರ್ಥಹಳ್ಳಿ ಸರ್ಕಾರಿ ಡಿಗ್ರಿ ಕಾಲೇಜಿನಲ್ಲಿ ಕನ್ನಡ ರಾಜ್ಯೋತ್ಸವ
– ಆರಗ ಕಾಲೇಜಲ್ಲಿ ರೋಟರಿಯಿಂದ ಕಾನೂನು ಅರಿವು
– ತೀರ್ಥಹಳ್ಳಿ ಕುವೆಂಪು ಶಾಲೆಯ ಮಕ್ಕಳ ಪ್ರವಾಸ
– ವಿವಿ ತಂಡಕ್ಕೆ ತುಂಗಾ ಕಾಲೇಜು ವಿದ್ಯಾರ್ಥಿನಿ ಪ್ರೀತಿ ಆಯ್ಕೆ
– ಸರ್ಕಾರಿ ಆಸ್ಪತ್ರೆ ಅಭಿವೃದ್ಧಿಗೆ ಕುರುವಳ್ಳಿ ನಾಗರಾಜ್ ಮನವಿ
ನ.22: ತೀರ್ಥಹಳ್ಳಿ ಸರ್ಕಾರಿ ಡಿಗ್ರಿ ಕಾಲೇಜಿನಲ್ಲಿ ಕಸಾಪದಿಂದ ಕನ್ನಡ ರಾಜ್ಯೋತ್ಸವ
ತೀರ್ಥಹಳ್ಳಿ: ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಬಾಳೇಬೈಲು, ತೀರ್ಥಹಳ್ಳಿ ಹಾಗೂ ಕನ್ನಡ ಸಾಹಿತ್ಯ ಪರಿಷತ್ತು ತಾಲೂಕು ಘಟಕ, ತೀರ್ಥ ಹಳ್ಳಿ ಇವುಗಳ ಸಂಯುಕ್ತಾಶ್ರಯದಲ್ಲಿ ನ.22ರಂದು ಶುಕ್ರವಾರ ಬೆಳಿಗ್ಗೆ 11 ಗಂಟೆಗೆ ಕಾಲೇಜು ಸಭಾಂಗಣದಲ್ಲಿ 69ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ಆಯೋಜಿಸಲಾಗಿದೆ. ಸ.ಪ್ರಕಾಲೇಜಿನ ಪ್ರಾಂಶುಪಾಲರಾದ ಡಾ. ಸೌಮ್ಯ ಕೆ.ಸಿ. ಇವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದು, ಕೊಪ್ಪ ತಾಲೂಕು 4 ಕನ್ನಡ ಸಾಹಿತ್ಯ ಪರಿಷತ್ತು ಮಾಜಿ ಅಧ್ಯಕ್ಷ ಹಾಗೂ ಕವಿಶೈಲ ಪತ್ರಿಕೆ ಸಂಪಾದಕ ಎಚ್. ಎಂ. ರವಿಕಾಂತ್ ಕನ್ನಡ ನಾಡು, ನುಡಿ ಮತ್ತು ಸಂಸ್ಕೃತಿ ಕುರಿತಂತೆ ವಿಶೇಷ ಉಪನ್ಯಾಸ ನೀಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಟಿ.ಕೆ.ರಮೇಶ್ ಶೆಟ್ಟಿ ಆಗಮಿಸಲಿದ್ದಾರೆ. ಐಕ್ಯೂಎಸಿ ಸಂಚಾಲಕ ಡಾ.ಗಣಪತಿ ಎಚ್. ಎ., ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥರಾದ ಲತಾ ಎಲ್.ಸಿ. ಮತ್ತು ಮಾರುತಿ, ಪ್ರಾಧ್ಯಾಪಕರು, ಕನ್ನಡ ವಿಭಾಗ ಇವರು ಉಪಸ್ಥಿತರಿರುತ್ತಾರೆ. ಈ ಕಾರ್ಯಕ್ರಮಕ್ಕೆ ಸರ್ವರನ್ನು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕನ್ನಡ ವಿಭಾಗದವರು ಮತ್ತು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನವರು ಆಹ್ವಾನಿಸಿದ್ದಾರೆ.
ವಿವಿ ತಂಡಕ್ಕೆ ತುಂಗಾ ಕಾಲೇಜು ವಿದ್ಯಾರ್ಥಿನಿ ಪ್ರೀತಿ ಆಯ್ಕೆ
ಮಂಗಳೂರು ವಿಶ್ವವಿದ್ಯಾಲಯದ ವ್ಯಾಪ್ತಿಯ ಆಳ್ವಾಸ್ ಕಾಲೇಜಿನಲ್ಲಿ ನಡೆಯುವ 2024-25 ನೇ ಸಾಲಿನ ಅಂತರ ವಿಶ್ವವಿದ್ಯಾಲಯದ ಗುಡ್ಡಗಾಡು ಓಟ ಸ್ಪರ್ಧೆಗೆ ಕುವೆಂಪು ವಿಶ್ವವಿದ್ಯಾಲಯದಿಂದ ಆಯ್ಕೆಯಾದ ವಿದ್ಯಾರ್ಥಿನಿಯರಿಗೆ ತುಂಗಾ ಕಾಲೇಜಿನಲ್ಲಿ ದಿನಾಂಕ:14.11.2024 ರಿಂದ ದಿನಾಂಕ:18.11.2024 ರ ವರೆಗೆ ತರಬೇತಿಯನ್ನು ದೈಹಿಕ ಶಿಕ್ಷಣ ನಿರ್ದೇಶಕರಾದ ಡಾ.ಸುಜನ್ ಜಿ ಬಿ ರವರ ನೇತೃತ್ವದಲ್ಲಿ ಕೈಗೊಳ್ಳಲಾಯಿತು. ಈ ಆಯ್ಕೆ ಪ್ರಕ್ರಿಯೆಯಲ್ಲಿ ತುಂಗಾ ಕಾಲೇಜಿನ ಎರಡನೇ ವರ್ಷದ ಬಿಎ ವಿದ್ಯಾರ್ಥಿನಿಯಾದ ಪ್ರೀತಿ ಅವರು ಕುವೆಂಪು ವಿಶ್ವವಿದ್ಯಾಲಯ ತಂಡಕ್ಕೆ ಆಯ್ಕೆಯಾಗಿರುತ್ತಾರೆ. ತುಂಗಾ ಮಹಾವಿದ್ಯಾಲಯದ ಆಡಳಿತ ಮಂಡಳಿ, ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ಅಭಿನಂದನೆ ಸಲ್ಲಿಸಿದ್ದಾರೆ.
ಸರ್ಕಾರಿ ಆಸ್ಪತ್ರೆ ಅಭಿವೃದ್ಧಿಗೆ ನಾಗರಾಜ್ ಪೂಜಾರಿ ಮನವಿ
ತೀರ್ಥಹಳ್ಳಿ ತಾಲ್ಲೂಕಿನ ಜಯಚಾಮರಾಜೇಂದ್ರ ಆಸ್ಪತ್ರೆ ಆವರಣದಲ್ಲಿ ಶವಗಾರದ ರಸ್ತೆಯಲ್ಲಿ ಮಟ್ಟುಗಳಾಗಿ ಬೆಳೆದಿರುವ ಗಿಡಗಳನ್ನು ತೆಗೆಸಿಕೊಡಿ ಎಂದು ಪಟ್ಟಣ ಪಂಚಾಯತಿ ಅಧ್ಯಕ್ಷರಾದ ರೆಹಮತ್ ಉಲ್ಲಾ ಆಸಾದಿ ಅವರಿಗೆ ಆರೋಗ್ಯ ರಕ್ಷಣಾ ಸಮಿತಿ ಜಯಚಾಮರಾಜೇಂದ್ರ ಆಸ್ಪತ್ರೆ ತೀರ್ಥಹಳ್ಳಿ ಇದರ ನಾಮ ನಿರ್ದೇಶಿತ ಸದಸ್ಯರು, ಯುವ ಮುಖಂಡರು ಆದ ನಾಗರಾಜ್ ಪೂಜಾರಿ ಮನವಿ ನೀಡಿದ್ದಾರೆ.
ಕೂಡಲೇ ಸ್ವಚ ಮಾಡಿಸಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡುತ್ತೇವೆ ಎಂದು ಆಸಾದಿ ಅವರು ಭರವಸೆ ನೀಡಿದರು.
ರೋಟರಿ ವತಿಯಿಂದ ಆರಗ ಕಾಲೇಜಲ್ಲಿ ಕಾನೂನು ಅರಿವು
ಅಪ್ರಾಪ್ತ ವಯಸ್ಸಿನಲ್ಲಿ ವಾಹನವನ್ನು ಓಡಿಸುವುದು ಅಪರಾಧ, ಕಾನೂನು ಹೇಗೆ ದಂಡವನ್ನು ವಿಧಿಸುತ್ತದೆ ಮತ್ತು ಪೋಷಕರಿಗೆ ಮತ್ತು ವಿಧ್ಯಾರ್ಥಿಗಳಿಗೆ ಕಾನೂನು ಅರಿವು ಗೊತ್ತಿರಬೇಕು ಎಂದು ಖ್ಯಾತ ವಕೀಲರಾದ ರೊ ಸಂಜಯ್ ಹೇಳಿದರು.
ತೀರ್ಥಹಳ್ಳಿ ಇವರು ಆರಗ ಸರ್ಕಾರಿ ಪಿ ಯು ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ” ಶಿಕ್ಷಣದೊಂದಿಗೆ ಕಾನೂನು ಅರಿವು” ಕಾರ್ಯಕ್ರಮದಲ್ಲಿ ಮಾತನಾಡಿದರು.
ರೊ ಶರಶ್ಚಂದ್ರ ಫೋಕ್ಸೋ ಕಾಯ್ದೆಯ ರೂಪ ರೇಶೆಗಳನ್ನು ಹಾಗೂ ಮಾದಕ ವಸ್ತು ಸೇವನೆ ಯ ವಿರುದ್ಧ ಇರುವ ಕಾನೂನುಗಳನ್ನು ತಿಳಿಸಿದರು.ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಕೇಳಿದ ಕೆಲವೊಂದು ಪ್ರಶ್ನೆಗಳಿಗೆ ಉತ್ತರಗಳನ್ನು ವಕೀಲರು ನೀಡಿದರು. ರೊ ಅನಿಲ್ ಕುಮಾರ್, ಅಧ್ಯಕ್ಷರು ರೋಟರಿ ಕ್ಲಬ್ ತೀರ್ಥಹಳ್ಳಿ ಇವರು ಮಾತನಾಡಿ ನಮ್ಮ ಸಂಸ್ಥೆಯ ಮುಖ್ಯ ಉದ್ದೇಶ ವಿದ್ಯಾರ್ಥಿಗಳು ಕಾನೂನಿನ ಜ್ಞಾನವನ್ನು ಹೊಂದಿರಬೇಕು ಹಾಗೂ ಎಲ್ಲಾ ಶಾಲಾ-ಕಾಲೇಜುಗಳಲ್ಲಿ ಈ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದೇವೆ ಎಂದು ತಿಳಿಸಿದರು. ಶ್ರೀ ವಸಂತ್ ಕುಮಾರ್ , ಪ್ರಾಚಾರ್ಯರು ಸರ್ಕಾರಿ ಪಿಯು ಕಾಲೇಜ್ ಆರಗ ರೊ ಕೆ ಪಿ ಎಸ್ ಸ್ವಾಮಿ, ವಲಯ ತರಬೇತಿದಾರ, ರೊ ಶಾಂತಕುಮಾರ್, ಅಧ್ಯಕ್ಷರು ಶಾಲಾ ಅಭಿವೃದ್ಧಿ ಸಮಿತಿ, ಸುಬ್ರಹ್ಮಣ್ಯ ಉಪ ಪ್ರಾಚಾರ್ಯರು ರೊ ಕೆ ಎಲ್ ಪೃಥ್ವಿ , ರೊ ಬಿ ವಿ ಶ್ರೀಧರ್ , ರೊ ಮುರಳಿ ಕೃಷ್ಣ ರೊ ಜ್ಯೋತಿ ದಿಲೀಪ್, ರೊ ವಾಣಿ ಗಣೇಶ್ ಇವರು ಉಪಸ್ಥಿತರಿದ್ದರು .
ತೀರ್ಥಹಳ್ಳಿ ಕುವೆಂಪು ಶಾಲೆಯ ಮಕ್ಕಳ ಪ್ರವಾಸ
ತೀರ್ಥಹಳ್ಳಿ ಪಟ್ಟಣದ ಕುವೆಂಪು ಶಾಲೆಯ ಮಕ್ಕಳು ಇತ್ತೀಚಿಗೆ ಚಿಣ್ಣರ ವನ ದರ್ಶನ ಕಾರ್ಯಕ್ರಮದಡಿ ಪ್ರವಾಸ ಮಾಡಿದರು. ನ. 19, 20ರಂದು ಎಲ್ಲಾ ಮಕ್ಕಳು ಪ್ರವಾಸ ತೆರಳಿದರು.