ಮ್ಯಾಮ್ಕೋಸ್ ಸಂಸ್ಥೆಯಲ್ಲಿ ನಡೆಯಲಿ ಪಾರದರ್ಶಕವಾಗಿ ವಹಿವಾಟು
* ಅನ್ಯಾಯ ಸರಿಪಡಿಸುವ ನಿಟ್ಟಿನಲ್ಲಿ ಸರಿಯಾದ ಕ್ರಮ ಅಗತ್ಯ – ಕಡ್ತೂರು ದಿನೇಶ್
* ರೈತರಿಗಾಗುತ್ತಿರುವ ಅನ್ಯಾಯ ಸರಿಪಡಿಸಿ: ಡಿಸಿಗೆ ವಿನಾಯಕ ತುಪ್ಪದಮನೆ ಮನವಿ
NAMMUR EXPRESS NEWS
ತೀರ್ಥಹಳ್ಳಿ: ಮ್ಯಾಮ್ಕೋಸ್ ಸಂಸ್ಥೆಯಲ್ಲಿ ಪಾರದರ್ಶಕವಾಗಿ ವಹಿವಾಟು, ವ್ಯಾಪಾರ ನಡೆಯಬೇಕು. ಅನ್ಯಾಯ ಸರಿಪಡಿಸುವ ನಿಟ್ಟಿನಲ್ಲಿ ಸರಿಯಾದ ಕ್ರಮ ಅಗತ್ಯ. ಮ್ಯಾಮ್ಕೋಸ್ ಅಲ್ಲಿ ಕ್ಷೇತ್ರವಾರು ಚುನಾವಣೆ ನಡೆಯದ ರೀತಿಯಲ್ಲಿ ನೋಡಿಕೊಳ್ಳುವುದು ಅಸಾಧ್ಯ. ಈ ಬಗ್ಗೆ ಸಹಕಾರ ಸಚಿವರಿಗೆ ಈ ಕ್ಷೇತ್ರದ ಬಗ್ಗೆ ವಿಶೇಷ ಕಾಳಜಿ ಮತ್ತು ಅಧಿಕಾರವಿದೆ ಎಂದು ಕೆಪಿಸಿಸಿ ಮಾಜಿ ಕಾರ್ಯದರ್ಶಿ ಕಡ್ತೂರು ದಿನೇಶ್ ಹೇಳಿದ್ದಾರೆ.
ತೀರ್ಥಹಳ್ಳಿ ಕಾಂಗ್ರೆಸ್ ಕಚೇರಿ ಗಾಂಧಿ ಭವನದಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಮ್ಯಾಮ್ಕೋಸ್ ಸಂಸ್ಥೆ ಕರ್ನಾಟಕ ಮಾತ್ರವಲ್ಲದೆ ಇಡೀ ಏಷ್ಯಾ ಖಂಡದಲ್ಲಿಯೇ ಅತ್ಯಂತ ಹೆಮ್ಮೆಯ ಸಹಕಾರ ಸಂಸ್ಥೆ ಎಂದರೆ ತಪ್ಪಾಗದು. 1983 ವರ್ಷದಲ್ಲಿ 400 ಜನ ಶೇರುದಾರರಿದ್ದ, ಈ ಸಂಸ್ಥೆಯಲ್ಲಿ 2024ರಲ್ಲಿ 31,000 ಜನ ಶೇರುದಾರರಿದ್ದಾರೆ. ಪ್ರತಿಯೊಂದು ಸಂಸ್ಥೆಯಲ್ಲಿ ಚುನಾವಣೆಯ ಕ್ಷೇತ್ರವಾರು ಮೂಲಕ ನಡೆಯುತ್ತದೆ ಅದೇ ರೀತಿ 31,000 ಷೇರುದಾರರಿರುವ ಈ ದೊಡ್ಡ ಸಂಸ್ಥೆಗೆ ಕ್ಷೇತ್ರವಾರು ಚುನಾವಣೆ ನಡೆಯಬೇಕು ಎಂದರು.
ಹೇಗಾದರೂ ಈ ಬಾರಿ ಕ್ಷೇತ್ರವಾರು ಚುನಾವಣೆ ನಡೆಯಬಾರದೆಂದು ಹಲವಾರು ಕುತಂತ್ರ ನಡೆಸಿದರೂ ಈ ಕಲ್ಪನೆಯಿಂದ ಹೊರಗೆ ಬರುವುದು ಉತ್ತಮ ಎಂದು ಹೇಳಿದರು.
ಮ್ಯಾಮ್ ಕೋಸ್ ಅಕ್ರಮ ವ್ಯವಹಾರ!?
ಮ್ಯಾಮ್ ಕೋಸ್ ಸಂಸ್ಥೆಯ ರೈತ ವಿರೋಧಿ ನಿರ್ಧಾರಗಳಿಂದ ಅಡಿಕೆ ಬೆಳಗಾರರಿಗೆ ಅನೇಕ ಕಷ್ಟನಷ್ಟಗಳು ಉಂಟಾಗಿದ್ದು, ಇತ್ತೀಚೆಗೆ ರೈತರುಗಳು ಸಂಸ್ಥೆಯಲ್ಲಿ ಮಾರಾಟಕ್ಕೆ ಇಟ್ಟಿರುವ ಸುಮಾರು 20,000 ಮೂಟೆ ಅಡಿಕೆಗಳನ್ನು ಸಂಸ್ಥೆಯು ಸರಿಯಾಗಿ ವ್ಯಾಪಾರ ವಹಿವಾಟು ನಡೆಸದ ಕಾರಣ ಹಿಂದಕ್ಕೆ ಪಡೆದಿರುತ್ತಾರೆ. ಇದರಲ್ಲಿ ತೀರ್ಥಹಳ್ಳಿ ಶಾಖೆಯೊಂದರಲ್ಲಿ 1,450 ಅಡಿಕೆ ಮೂಟೆಗಳನ್ನು ರೈತರು ವ್ಯಾಪಾರದಿಂದ ಹಿಂದಕ್ಕೆ ಪಡೆದಿರುತ್ತಾರೆ. ಮ್ಯಾಮ್ ಕೋಸ್ ಆಡಳಿತ ಮಂಡಳಿಯ ಸಮರ್ಪಕ ಆಡಳಿತವಿಲ್ಲದೆ ಈ ಬಗ್ಗೆ ವ್ಯಾಪಕ ಆಕ್ರೋಶಗಳು, ಸಾಮಾಜಿಕ ಜಾಲತಾಣಗಳು ಹಾಗೂ ಪತ್ರಿಕೆಗಳಲ್ಲಿ ಪ್ರಕಟವಾಗುತ್ತಿದ್ದು, ಈ ಸಂಸ್ಥೆಯು ತನ್ನ ನೈಜ ಉದ್ದೇಶದಿಂದ ವಿಮುಖ ದಿಕ್ಕಿಗೆ ಸಾಗುತ್ತಿದೆ ಎಂಬ ಅಭಿಪ್ರಾಯ ಪಟ್ಟಿದ್ದಾರೆ.
ಈ ಸಂಸ್ಥೆಯ ಮೇಲೆ ಅಪಾರ ಭರವಸೆ, ಗೌರವ ಇರುವ ಕಾರಣ ಈ ಗೌರವ ಇನ್ನಷ್ಟು ಹೆಚ್ಚಳವಾಗಬೇಕು ಜವಾಬ್ದಾರಿಯಿಂದ ಎಂದಿಗೂ ವಂಚಿತರಾಗದಿರಿ ಎಂದು ಹೇಳಿದ್ದಾರೆ.
ಮ್ಯಾಮ್ಕೋಸ್ ಸಂಸ್ಥೆಯಲ್ಲಿ ಜೂನ್ ತಿಂಗಳಿನಲ್ಲಿ ಮ್ಯಾಮ್ಕೋಸ್ ಸಂಸ್ಥೆಯೇ ಅಡಿಕೆ ಖರೀದಿ ಮಾಡಿದೆ. ಉಳಿದ ವ್ಯಾಪಾರಸ್ಥರು ಯಾಕೆ ಅಡಿಕೆ ಖರೀದಿಗೆ ಬಂದಿಲ್ಲ. ಇದರ ಒಳ ಮರ್ಮವೇನು, ಸ್ವತಃ ಸಂಸ್ಥೆಯೇ ನಾಟಕದ ವ್ಯಾಪಾರದಿಂದ ರೈತರು ಅಡಿಕೆ ವಾಪಾಸ್ಸು ತೆಗೆದುಕೊಂಡು ಹೋಗುವ ಸ್ಥಿತಿ ನಿರ್ಮಾಣವಾಗಿದೆ ಎಂದು ಆರೋಪಿಸಿದ್ದಾರೆ.
ಪ್ರತಿಯೊಂದು ಸಂಸ್ಥೆಗಳಲ್ಲಿ ಷೇರುದಾರರು ಡೈರೆಕ್ಟರ್ಗಳನ್ನು ಆಯ್ಕೆ ಮಾಡುತ್ತಾರೆ. ಡೈರೆಕ್ಟರ್ಗಳು ಅಧ್ಯಕ್ಷರನ್ನು ಆಯ್ಕೆ ಮಾಡುತ್ತಾರೆ.
ಮ್ಯಾಮ್ಕೋಸ್ ಸಂಸ್ಥೆಯಲ್ಲಿ ಪಾರದರ್ಶಕವಾಗಿ ವ್ಯಾಪಾರ ವಹಿವಾಟು ನಡೆಯಬೇಕು ಎಂಬ ಉದ್ದೇಶದಿಂದ ಮಾನ್ಯ ಜಿಲ್ಲಾಧಿಕಾರಿಗಳೇ ಈ ಸಂಸ್ಥೆಯ ಅಧ್ಯಕ್ಷರಾಗಿದ್ದಾರೆ. ಮ್ಯಾಮ್ಕೋಸ್ ಸಂಸ್ಥೆಯಲ್ಲಿ ಸುಮಾರು 1500 ಮೂಟೆಗಳವರೆಗೆ ರೈತರು ಅಡಿಕೆಯನ್ನು ವಾಪಾಸ್ಸು ಪಡೆದುಕೊಂಡು ಹೋಗಿ ನಷ್ಟ ಅನುಭವಿಸಿರುತ್ತಾರೆ. ಮಾನ್ಯ ಜಿಲ್ಲಾಧಿಕಾರಿಗಳು ಸಂಸ್ಥೆಯಲ್ಲಿ ರೈತರಿಗೆ ಆಗುತ್ತಿರುವ ನಷ್ಟ ಹಾಗೂ ಅನ್ಯಾಯವನ್ನು ಸರಿಪಡಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು ಎಂದು ಈ ಮೂಲಕ ಮನವಿ ಮಾಡಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಕರಿಮನೆ ರಾಘವೇಂದ್ರ ಭಟ್ ಅವರು ಮಾತನಾಡಿ, ಸುಮಾರು 55 ವರ್ಷಗಳಿಂದ ಮ್ಯಾಮ್ಕೋಸ್ ಸಂಸ್ಥೆಯಲ್ಲಿ ನಮ್ಮ ತಂದೆಯವರು ಕಾರ್ಯನಿರ್ವಹಿಸುತ್ತಿದ್ದರು. ಈ ಸಂಸ್ಥೆಯನ್ನು ಉಳಿಸಿ ಬೆಳೆಸಬೇಕು ಎಂಬ ಕಾರಣಕ್ಕೆ ಅನ್ಯಾಯವಾದಾಗ ಧ್ವನಿ ಎತ್ತುವುದು ನಮ್ಮ ಕರ್ತವ್ಯ ಹಾಗೂ ಇವುಗಳ ಕೊರತೆಯನ್ನು ಪರಿಶೀಲಿಸಿ ಸರಿಪಡಿಸಿಕೊಳ್ಳುವುದು ಜವಾಬ್ದಾರಿ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆಸ್ತೂರು ಮಂಜುನಾಥ್, ಆದರ್ಶ ಹಂಚದ ಕಟ್ಟೆ, ಅಮರಪಾಲಿ ಸುರೇಶ್, ಹಾರೋಗೊಳಿಗೆ ಪದ್ಮನಾಭ, ವಿನಾಯಕ ತುಪ್ಪದ ಮನೆ, ಕಡ್ತೂರ್ ಮೋಹನ್, ಹಾಗೂ ಪ್ರಮುಖರು ಉಪಸ್ಥಿತರಿದ್ದರು.
ರೈತರಿಗಾಗುತ್ತಿರುವ ಅನ್ಯಾಯವನ್ನು ಸರಿಪಡಿಸಲು ಡಿಸಿಗೆ ಪಟ್ಟು
– ಜಿಲ್ಲಾಧಿಕಾರಿಗಳು ಕ್ರಮ ಕೈಗೊಳ್ಳಲಿ: ತುಪ್ಪದಮನೆ ವಿನಾಯಕ
ತೀರ್ಥಹಳ್ಳಿ: ಲೋಕಸಭೆ ಚುನಾವಣೆ ಸಂದರ್ಭದಲ್ಲಿ ಶಿವಮೊಗ್ಗ ಮ್ಯಾಮ್ಕೊಸ್ ಸಂಸ್ಥೆಗೆ ಯಡಿಯೂರಪ್ಪರವರು ಎಂ.ಪಿ.ರಾಘವೇಂದ್ರರು ಬಂದು ಉಪಾಧ್ಯಕ್ಷರ ಹೆಗಲ ಮೇಲೆ ಕೈ ಹಾಕಿ ಹೋದ ನಂತರ 2% ಇದ್ದಂತಹ ಮಂಡಿ ಕಮಿಷನ್ ಹಣವು 1% ಗೆ ಇಳಿಸಿ, ಮತ್ತೆ 1.5% ಗೆ ಏರಿಸಿದರು. ಆಗ ಸಣ್ಣ ಮಂಡಿ ಯವರು ಬಹಳಷ್ಟು ಕಷ್ಟ ಪಡುವ ಪರಿಸ್ಥಿತಿ ನಿರ್ಮಾಣವಾಗಿತ್ತು. ವ್ಯಾಪಾರಸ್ಥರೊಂದಿಗೆ ಒಳ ಒಪ್ಪಂದ ಮಾಡಿಕೊಂಡು ವ್ಯಾಪಾರಸ್ಥರನ್ನು ಉಳಿಸಲು ಹೋಗಿ ಸಣ್ಣ ಮಂಡಿಗಳನ್ನು ನಷ್ಟ ಅನುಭವಿಸುವಂತೆ ಮಾಡಿದ್ದು ಯಾರು, ಕೆಲವು ಸಣ್ಣ ಮಂಡಿಗಳಂತೂ ಮುಚ್ಚುವ ಸ್ಥಿತಿ ಇದೆ. ರೈತರಿಗಾದ ಅನ್ಯಾಯಕ್ಕೆ ಯಾರು ಹೊಣೆ ?ಮ್ಯಾಮೋಸ್ ಸಂಸ್ಥೆ ರೈತರಿಗೆ ಉತ್ತರ ಕೊಡಬೇಕು. ಹಾಗೂ ಮ್ಯಾಮೋಸ್ ಸಂಸ್ಥೆಯಲ್ಲಿ ವ್ಯಾಪಾರಕ್ಕೆ ಬರುವ ವ್ಯಾಪಾರಸ್ಥರು 1.5% ಕಮಿಷನ್ ಪ್ರತಿ ಮಂಡಿಗೂ ನೀಡಿ ರುತ್ತಾರೆ. ಆದರೆ ಮ್ಯಾಮೋಸ್ ಸಂಸ್ಥೆಯವರೇ ಸ್ವತಃ ರೈತರ ಅಡಿಕೆ ಖರೀದಿ ಮಾಡುತ್ತಾರೆ. ಆದರೆ ಆ ಅಡಿಕೆಗೆ ಕಮಿಷನ್ ಯಾಕೆ ನೀಡುತ್ತಿಲ್ಲ. ಇದರಿಂದ ಸಂಸ್ಥೆಗೆ ಹೆಚ್ಚಿನ ಲಾಭ ದೊರೆಯುತ್ತದೆ. ಈ ಕಮಿಷನ್ ಹಣವನ್ನು ಅಡಿಕೆ ಬೆಳೆಯುವ ರೈತರಿಗೆ ಅಥವಾ ಕೆಲಸಗಾರರಿಗೆ ನೀಡಬಹುದಲ್ಲವೇ. ಮ್ಯಾಸ್ ಸಂಸ್ಥೆಯಲ್ಲಿಜೂನ್ ತಿಂಗಳಿನಲ್ಲಿ ಮ್ಯಾಮೋಸ್ ಸಂಸ್ಥೆಯೇ ಅಡಿಕೆ ಖರೀದಿ ಮಾಡಿದೆ. ಉಳಿದ ವ್ಯಾಪಾರಸ್ಥರು ಯಾಕೆ ಅಡಿಕೆ ಖರೀದಿಗೆ ಬಂದಿಲ್ಲ. ಇದರ ಒಳ ಮರ್ಮವೇನು, ಸ್ವತಃ ಸಂಸ್ಥೆಯೇ ನಾಟಕದ ವ್ಯಾಪಾರದಿಂದ ರೈತರು ಅಡಿಕೆ ವಾಪಸ್ಸು ತೆಗೆದುಕೊಂಡು ಹೋಗುವ ಸ್ಥಿತಿ ನಿರ್ಮಾಣವಾಗಿದೆ..
ಪ್ರತಿಯೊಂದು ಸಂಸ್ಥೆಗಳಲ್ಲಿ ಷೇರುದಾರರು ಡೈರೆಕ್ಟರ್ಗಳನ್ನು ಆಯ್ಕೆ ಮಾಡುತ್ತಾರೆ. ಡೈರೆಕ್ಟರ್ಗಳು ಅಧ್ಯಕ್ಷ ರನ್ನು ಆಯ್ಕೆ ಮಾಡುತ್ತಾರೆ.ಮ್ಯಾಮೋಸ್ ಸಂಸ್ಥೆಯಲ್ಲಿ ಪಾರದರ್ಶಕವಾಗಿ ವ್ಯಾಪಾರ ವಹಿವಾಟು ನಡೆಯಬೇಕು ಎಂಬ ಉದ್ದೇಶದಿಂದ ಮಾನ್ಯ ಜಿಲ್ಲಾಧಿಕಾರಿಗಳೇ ಈ ಸಂಸ್ಥೆಯ ಅಧ್ಯಕ್ಷರಾಗಿದ್ದಾರೆ. ಮ್ಯಾಮೋಸ್ ಸಂಸ್ಥೆಯಲ್ಲಿ ಸುಮಾರು 1500 ಮೂಟೆಗಳವರೆಗೆ ರೈತರು ಅಡಿಕೆಯನ್ನು ವಾಪಸ್ಸು ಪಡೆದುಕೊಂಡು ಹೋಗಿ ನಷ್ಟ ಅನುಭವಿಸಿರುತ್ತಾರೆ. ಮಾನ್ಯ ಜಿಲ್ಲಾಧಿಕಾರಿಗಳು ಸಂಸ್ಥೆಯಲ್ಲಿ ರೈತರಿಗೆ ಆಗುತ್ತಿರುವ ನಷ್ಟ ಹಾಗೂ ಅನ್ಯಾಯ ವನ್ನು ಸರಿಪಡಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು ಎಂದು ತುಪ್ಪದಮನೆ ವಿನಾಯಕ ಮನವಿ ಮಾಡಿದ್ದಾರೆ.