ತೀರ್ಥಹಳ್ಳಿ ಪಟ್ಟಣ ಆಶ್ರಯ ಸಮಿತಿಗೆ ನಾಲ್ವರ ನೇಮಕ
– ಅಮರನಾಥ್ ಶೆಟ್ಟಿ , ರಾಮ ಸಾಣಿಕೆ, ವಿಜಯ ಪದ್ಮನಾಭ್, ಮಕ್ಸೂದ್ ಅವರಿಗೆ ಒಲಿದ ಹುದ್ದೆ
– ಬಗರ್ ಹುಕುಂ ಸಕ್ರಮೀಕರಣ ಸಮಿತಿಗೆ ಆಯ್ಕೆ: ಸರ್ವರಿಗೂ ವಾದಿರಾಜ್ ಭಟ್ ಧನ್ಯವಾದ ಅರ್ಪಣೆ
NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿ ಪಟ್ಟಣ ಪಂಚಾಯತಿ ನಗರ ಆಶ್ರಯ ಸಮಿತಿಗೆ ಅಧಿಕಾರೇತರ ಸದಸ್ಯರಾಗಿ ಕರ್ನಾಟಕ ಸರ್ಕಾರದಿಂದ ಯುವ ಕಾಂಗ್ರೆಸ್ ಅಧ್ಯಕ್ಷರಾದ ಅಮರನಾಥ್ ಶೆಟ್ಟಿ , ರಾಮ ಸಾಣಿಕೆ, ಶ್ರೀಮತಿ ವಿಜಯ ಪದ್ಮನಾಭ್ ಮತ್ತು ಮಕ್ಸೂದ್ ಅವರು ನಾಮನಿರ್ದೇಶನಗೊಂಡಿದ್ದಾರೆ.
ಅಮರನಾಥ ಶೆಟ್ಟಿ ಅವರು ಯುವ ಕಾಂಗ್ರೆಸ್ ಅಧ್ಯಕ್ಷರಾಗಿ ಪಕ್ಷ ಸಂಘಟನೆಯಲ್ಲಿ ಮುಂಚೂಣಿಯಲ್ಲಿದ್ದಾರೆ. ರಾಮ, ವಿಜಯಪದ್ಮನಾಬ್, ಮಕ್ಸುದ್ ಅವರು ಪಕ್ಷದ ನಿಷ್ಠಾವಂತ ಕಾರ್ಯಕರ್ತರಾಗಿದ್ದು ಅವರಿಗೆ ಶುಭಾಶಯಗಳು.
ಧನ್ಯವಾದ ಅರ್ಪಿಸಿದ ಕಾಂಗ್ರೆಸ್ ಮುಖಂಡ ವಾದಿರಾಜ್ ಭಟ್
– ತೀರ್ಥಹಳ್ಳಿ ಕ್ಷೇತ್ರದ ಬಗರ್ ಹುಕುಂ ಸಕ್ರಮೀಕರಣ ಸಮಿತಿಗೆ ಆಯ್ಕೆ
ತೀರ್ಥಹಳ್ಳಿ: ಕರ್ನಾಟಕ ಸರಕಾರದಿಂದ ಬಗರ್ ಹುಕುಂ ಸಕ್ರಮೀಕರಣ ಸಮಿತಿ ತೀರ್ಥಹಳ್ಳಿ ವಿಧಾನಸಭಾ ಕ್ಷೇತ್ರಕ್ಕೆ ಆಯ್ಕೆಯಾದ ವಾದಿರಾಜ್ ಭಟ್ ಇದೀಗ ಸರ್ವರಿಗೂ ಕೃತಜ್ಞತೆಗಳನ್ನು ಅರ್ಪಿಸಿದ್ದಾರೆ.
ಈ ಆಯ್ಕೆಗೆ ಸಹಕರಿಸಿದ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿಗಳಾದ ಡಿ. ಕೆ ಶಿವಕುಮಾರ್ ಅವರಿಗೆ, ಸನ್ಮಾನ್ಯ ಕೃಷಿ ಸಚಿವರಾದ ಕೃಷ್ಣ ಬೈರೇ ಗೌಡರವರಿಗೆ, ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವರಾದ ಮಧು ಬಂಗಾರಪ್ಪರವರಿಗೆ, ತೀರ್ಥಹಳ್ಳಿ ಮಾಜಿ ಶಾಸಕರು, ಮಾಜಿ ಶಿಕ್ಷಣ ಸಚಿವರು ಅದ ಕಿಮ್ಮನೆ ರತ್ನಾಕರ್ ಅವರಿಗೆ, ತೀರ್ಥಹಳ್ಳಿ ಕ್ಷೇತ್ರದ ಕಾಂಗ್ರೆಸ್ ಮುಖಂಡರಾದ ಮಲೆನಾಡು ಅಭಿವೃದ್ಧಿ ಮಂಡಳಿಯ ಅಧ್ಯಕ್ಷರಾದ ಆರ್ ಎಂ ಮಂಜುನಾಥ ಗೌಡ ಅವರಿಗೆ, ತೀರ್ಥಹಳ್ಳಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರುಗಳಾದ ಕೆಸ್ತೂರು ಮಂಜುನಾಥ್ ಮತ್ತು ಮುಡುಬಾ ರಾಘವೇಂದ್ರ, ಹಾಗೂ ಹಿರಿಯ ಮುಖಂಡರಾದ ಜಿ ಎಸ್ ನಾರಾಯಣರಾವ್ ಹಾಗೂ ಇನ್ನಿತರ ಕಾಂಗ್ರೇಸ್ ಪಕ್ಷದ ಹಿರಿಯ ಕಿರಿಯ ಮುಖಂಡರುಗಳಿಗೆ ಕೃತಜ್ಞತೆಗಳನ್ನು ಅರ್ಪಿಸಿದ್ದು ಜನರ ಸೇವೆಗೆ ಅವಕಾಶ ಸಿಕ್ಕಿದ್ದಕ್ಕೆ ಸಂತಸ ವ್ಯಕ್ತಪಡಿಸಿದ್ದಾರೆ.