ತೀರ್ಥಹಳ್ಳಿ ಹುಲಿ ಹೆಜ್ಜೆ: ಕಾರ್ಯಕ್ರಮವೂ ಸೂಪರ್.. ಲೆಕ್ಕ ಪಕ್ಕಾ!
– ಕಾರ್ಯಕ್ರಮಕ್ಕೆ ಸಹಕಾರ ನೀಡಿದ ಸರ್ವರಿಗೂ ಧನ್ಯವಾದ ಹೇಳಿದ ಸಮಿತಿ
– ದಸರಾ ಉತ್ಸವ ಸಮಿತಿ, ರಾಮೇಶ್ವರ ದೇವಸ್ಥಾನ ಸಮಿತಿ ಅವ್ಯವಹಾರ ಆಗಿದೆ: ಡಿ.ಎಸ್. ವಿಶ್ವನಾಥ ಶೆಟ್ಟಿ
NAMMUR EXPRESS NEWS
ತೀರ್ಥಹಳ್ಳಿ: ಹುಲಿ ಹೆಜ್ಜೆ ದಸರಾ 2024 ಗೆಳೆಯರ ಬಳಗ ತೀರ್ಥಹಳ್ಳಿಯಲ್ಲಿ ವತಿಯಿಂದ ನಡೆದ ಹುಲಿ ವೇಷದ ಖರ್ಚು,ಹಾಗೂ ಉಳಿತಾಯ ಬಗ್ಗೆ ಲೆಕ್ಕ ನೀಡಿದೆ. ಜತೆಗೆ ಕಾರ್ಯಕ್ರಮಕ್ಕೆ ಸಹಕಾರ ನೀಡಿದ ಸರ್ವರಿಗೂ ಧನ್ಯವಾದಗಳನ್ನು ಅರ್ಪಿಸಿದೆ. ಹುಲಿ ಹೆಜ್ಜೆ ದಸರಾ ಗೆಳೆಯರ ಬಳಗದ ಅಧ್ಯಕ್ಷ ಡಿ.ಎಸ್. ವಿಶ್ವನಾಥ ಶೆಟ್ಟಿ ಪತ್ರಿಕಾಗೋಷ್ಠಿಯನ್ನು ನಡೆಸಿ ಖರ್ಚು ವೆಚ್ಚದ ಮಾಹಿತಿ ನೀಡಿದರು. ಹುಲಿ ಹೆಜ್ಜೆ ಯಶಸ್ವಿಯಾಗಲು ಕಾರಣ ಸಾರ್ವಜನಿಕರ ಮತ್ತು ದಾನಿಗಳ ಸಹಕಾರ ಇದೆ.ದಾನಿಗಳಿಂದ ಒಂದಷ್ಟು ಸಂಗ್ರಹ ಮಾಡಿದ್ದು, ಕಾರ್ಯಕ್ರಮದ ಲೆಕ್ಕ ಕೊಡುವುದಾಗಿ ಮಾಹಿತಿ ನೀಡಿದರು.
ಸಾರ್ವಜನಿಕರಿಂದ ರಶೀದಿಯ ಮುಖಾಂತರ , ಹಾಗೂ ಪಟ್ಟಣ ಪಂಚಾಯಿತಿಯಿಂದ 50,000 ಸಾಂಸ್ಕೃತಿಕ ಪ್ರೋತ್ಸಾಹ ಧನವಾಗಿ ಸಂಗ್ರಹವಾಗಿರುತ್ತದೆ.
ಜಮಾ ಖರ್ಚಿನ ವಿವರ
ಜಮಾ ಖರ್ಚಿನ ವಿವರದಲ್ಲಿ ದಾನಿಗಳಿಂದ 2,00,000 ಹಾಗೂ ಸಾರ್ವಜನಿಕರಿಂದ ರಶೀದಿಯಿಂದ 3,14,545 ಸಂಗ್ರಹವಾಗಿದ್ದು,ಹುಲಿ ವೇಷದವರಿಗೆ 95,000, ಬಹುಮಾನದ ಮೊತ್ತ 81,666, ತಾಸೆ ವಾಧ್ಯದವರಿಗೆ ಪ್ರೋತ್ಸಾಹ ಧನ 28,000, ಉಡುಪಿ ಮಹಿಳಾ ಹೆಣ್ಣು ಹುಲಿ ತಂಡದವರಿಗೆ ನೀಡಿದ ಮೊತ್ತ 1,00,000,
ಸ್ಟೇಜ್ & ಲೈಟಿಂಗ್ 75,000, ಸಿಡಿಮದ್ದು ಪ್ರದರ್ಶನ 25,000, ಅತಿಥಿ ಸತ್ಕಾರ, ಪ್ಲೇಕ್ಸ್, ಪ್ರಚಾರ, ಆಹ್ವಾನ ಪತ್ರಿಕೆ ಮತ್ತು ಇತರೆ 1,07,350, ಹಾಗೂ ಒಟ್ಟು ಬ್ಯಾಂಕ್ ಬ್ಯಾಂಕ್ ಖಾತೆಯಲ್ಲಿ ಉಳಿದ ಮೊತ್ತ 52,529 ವಿವರಣೆ ನೀಡಿದರು.
ಜೊತೆಗೆ ಈ ಮೊತ್ತವನ್ನು ಸಂಪ್ರದಾಯಿಕ ಹುಲಿವೇಷ ಶಾಸ್ತ್ರಿಯ ಶೈಲಿಯ ಕುಣಿತ ಮರೆಯಾಗುತ್ತಿದ್ದು, ಮುಂದಿನ ದಿನಗಳಲ್ಲಿ ಅದರ ಉಳಿವಿನ ಕಾರಣಕ್ಕಾಗಿ ಶಿಬಿರದ ಮೂಲಕ ತರಬೇತಿ ನೀಡಿ ಗೌರವಿಸುವುದಾಗಿ ಯೋಜನೆ ಮಾಡಲಾಗಿದೆ ಎಂದು ತಿಳಿಸಿದರು. ಪತ್ರಿಕಾಗೋಷ್ಠಿಯಲ್ಲಿ ಗೆಳೆಯರ ಬಳಗದ ಸಂಚಾಲಕ ಸುಮಂತ್( ಚಿಂಚಿ) ಸಂಚಾಲಕ ವಿಕ್ರಂ ಶೆಟ್ಟಿ, ಖಜಾಂಚಿ ಬಳಗ ಸಚೀಂದ್ರ ಹೆಗಡೆ, ಡಾ. ಸುಂದ್ರೇಶ್, ಅಮರನಾಥ್ ಶೆಟ್ಟಿ ಮತ್ತು ವರಲಕ್ಷ್ಮಿ ಹಾಗೂ ಪ್ರಮುಖರು ಉಪಸ್ಥಿತರಿದ್ದರು.
ದಸರಾ, ರಾಮೇಶ್ವರ ದೇವಸ್ಥಾನ ಸಮಿತಿ ಅವ್ಯವಹಾರ
ತೀರ್ಥಹಳ್ಳಿ ದಸರಾ ಸಂಚಾಲಕರ ವಿರುದ್ಧ ಗಂಭೀರ ಆರೋಪವಿದೆ ಎಂದ ಡಿಎಸ್ ವಿಶ್ವನಾಥ ಶೆಟ್ಟಿ ರಾಮೇಶ್ವರ ದೇವಸ್ಥಾನ ಸಮಿತಿಯಲ್ಲೂ ಗೋಲ್ಮಾಲ್ ನಡೆದ ಸಂಶಯವಿದೆ ಹಾಗೂ ಇದೆಲ್ಲದರ ಲೆಕ್ಕವನ್ನು ತಾವುಗಳು ನೀಡಿ, ನಿಮ್ಮ ಪ್ರಾಮಾಣಿಕತೆಯನ್ನು ತೋರಿಸಿ ಎಂದು ಸವಾಲು ಹಾಕಿದ್ದಾರೆ. ದಸರಾ ಉತ್ಸವ ಸಮಿತಿ ಜಂಟಿ ಬ್ಯಾಂಕ್ ಖಾತೆಯಲ್ಲಿ ತಹಶೀಲ್ದಾರ್ ಹೆಸರು ನಾಪತ್ತೆಯಾಗಿದೆ. ಸಂದೇಶ ಜವಳಿ, ಸೊಪ್ಪುಗುಡ್ಡೆ ರಾಘವೇಂದ್ರ ವೈಯಕ್ತಿಕ ಖಾತೆಗೆ ಪಟ್ಟಣ ಪಂಚಾಯಿತಿ 2.5 ಲಕ್ಷ ರೂಪಾಯಿ ದೇಣಿಗೆ ವರ್ಗಾವಣೆಯಾದ ಸಂಶಯವಿದೆ ಎಂದು ಆರೋಪಿಸಿದ್ದಾರೆ.