ಮಹಾರಾಷ್ಟ್ರದಲ್ಲಿ ಬಿಜೆಪಿ ಗೆಲುವು: ಸಂಭ್ರಮಾಚರಣೆ
– ಜಾರ್ಕಂಡ್ ಅಲ್ಲಿ ಅಧಿಕಾರ ಹಿಡಿದ ಕೈ ಪಾಳಯ
– ಕೇರಳದ ವಯನಾಡಲ್ಲಿ ಪ್ರಿಯಾಂಕಾ ಗಾಂಧಿಗೆ 4 ಲಕ್ಷ ಲೀಡಲ್ಲಿ ಜಯ
– ನಿಖಿಲ್ ಸೋಲು: ಅಭಿಮಾನಿ ಆತ್ಮಹತ್ಯೆಗೆ ಯತ್ನ
NAMMUR EXPRESS NEWS
ನವ ದೆಹಲಿ: ದೇಶದ ವಿವಿಧ ಕಡೆ ನಡೆದ ರಾಜ್ಯ ವಿಧಾನ ಸಭಾ ಫಲಿತಾಂಶದಲ್ಲಿ ಎನ್.ಡಿ.ಎ ಮೈತ್ರಿ ಕೂಟ ಅತೀ ಹೆಚ್ಚು ಸ್ಥಾನ ಪಡೆದು ಗೆಲುವಿನ ನಗೆ ಬೀರಿದೆ. ದೇಶದ ಎಲ್ಲಾ ಕಡೆ ಬಿಜೆಪಿ ಸಂಭ್ರಮಾಚರಣೆ ಮಾಡಿದೆ.
ಶನಿವಾರ ಪ್ರಕಟವಾಗಿದ್ದು, ರಾಜ್ಯಗಳಲ್ಲಿ ಹಾಲಿ ಎರಡೂ ಅಧಿಕಾರದಲ್ಲಿರುವ ಮೈತ್ರಿ ಕೂಟಗಳೇ ಮತ್ತೆ ಅಧಿಕಾರಕ್ಕೆ ಬರುವಲ್ಲಿ ಯಶಸ್ವಿಯಾಗಿದೆ. ಮಹಾರಾಷ್ಟ್ರದಲ್ಲಿ ಬಿಜೆಪಿ- ಶಿವಸೇನೆ ಮತ್ತು ಅಜಿತ್ ಪವಾರ್ ಬಣದ ಎನ್ ಸಿಪಿ ಮೈತ್ರಿ ಕೂಟ ಮೊದಲ ಬಾರಿ 200ರ ಅಂಕಿ ದಾಟಿ ಭರ್ಜರಿ ಬಹುಮತದೊಂದಿಗೆ ಗೆಲುವು ಸಾಧಿಸಿದೆ. ಅತ್ತ ಜಾರ್ಖಂಡ್ನಲ್ಲಿ ಜೆಎಂಎಂ. ಕಾಂಗ್ರೆಸ್, ಆರ್ಜೆಡಿ ಮೈತ್ರಿಕೂಟ ಸತತ 2ನೇ ಬಾರಿ ಅಧಿಕಾರಕ್ಕೆ ಬರುವಲ್ಲಿ ಯಶಸ್ವಿಯಾಗಿದೆ. ಸತತ 2ನೇ ಬಾರಿ ಪಕ್ಷವೊಂದು ಇಲ್ಲಿ ಗೆದ್ದಿರುವುದು ಇದೇ ಮೊದಲು.
ವಿಶೇಷವೆಂದರೆ ಎರಡೂ ರಾಜ್ಯಗಳಲ್ಲಿ ಹಾಲಿ ಆಡಳಿತಾರೂಢ ಸರ್ಕಾರಗಳಿಗೇ ಮತ ದಾರ ಮತ್ತೆ ಮಣೆ ಹಾಕುವ ಜೊತೆಗೆ ಕಳೆದ ಚುನಾವಣೆಗಿಂತಲೂ ಹೆಚ್ಚಿನ ಸ್ಥಾನಬಲದೊಂದಿಗೆ ಅಧಿಕಾರದ ಗದ್ದುಗೆ ನೀಡಿದ್ದಾನೆ. ಇದು ಎರಡೂ ಸರ್ಕಾರಗಳು ಆಡಳಿತ ವಿರೋಧಿ ಮೆಟ್ಟಿ ನಿಲ್ಲುವಲ್ಲಿ ಯಶಸ್ವಿಯಾಗಿದೆ ಎಂಬ ಸ್ಪಷ್ಟ ಸಂದೇಶ ನೀಡುವಲ್ಲಿ ಯಶಸ್ವಿಯಾಗಿದೆ.
ರಾಜ್ಯ ವಿಧಾನಸಭೆಯ 288 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಬಿಜೆಪಿ- ಶಿವಸೇನೆ ಮತ್ತು ಅಜಿತ್ ಪವಾರ್ ಬಣದ ಎನ್ಸಿಪಿ 230ಕ್ಕೂ ಹೆಚ್ಚು ಸ್ಥಾನಗಳನ್ನು ಗೆದ್ದು ಮರಳಿ ಅಧಿಕಾರ ಪಡೆದುಕೊಂಡಿದೆ. ಅದರಲ್ಲೂ ಬಿಜೆಪಿ ತಾನು ಸ್ಪರ್ಧಿಸಿದ 149 ಸ್ಥಾನಗಳ ಪೈಕಿ 130ಕ್ಕೂ ಹೆಚ್ಚು ಗೆಲುವು ಸಾಧಿಸುವ ಮೂಲಕ ಸಾರ್ವಕಾಲಿಕ ಅದ್ಭುತ ಗೆಲುವಿನ ದಾಖಲೆ ಮಾಡಿದೆ. ಇಲ್ಲಿ 288 ಸ್ಥಾನಗಳ ಪೈಕಿ 235 ಎನ್ ಡಿ ಎ, 49 ಇಂಡಿಯಾ ಗೆದ್ದಿದೆ. ಮಾಜಿ ಸಿಎಂ, ಬಿಜೆಪಿಯ ದೇವೇಂದ್ರ ಫಡ್ನವೀಸ್ ಅವರನ್ನು ಮತ್ತೊಮ್ಮೆ ರಾಜ್ಯದ ಮುಖ್ಯಮಂತ್ರಿ ಸ್ಥಾನಕ್ಕೆ ಪ್ರಬಲ ಸ್ಥಾನಕ್ಕೆ ಪ್ರಬಲ ಉಮೇದು ನಾರನಾಗಿ ಹೊರಹೊಮ್ಮುವಂತೆ ಮಾಡಿದೆ. ಇನ್ನೊಂದೆಡೆ ಈ ಬಾರಿ ಗೆಲುವು ನಿಶ್ಚಿತ ಎಂಬ ಭರವಸೆಯಲ್ಲಿದ್ದ ಇಂಡಿಯಾ ಕೂಟದ ಪಕ್ಷಗಳಾದ, ರಾಜ್ಯದಲ್ಲಿ ಮಹಾ ವಿಕಾಸ ಅಘಾಡಿ ಹೆಸರಲ್ಲಿ ಮೈತ್ರಿಕೂಟ ರಚಿಸಿದ್ದ ಕಾಂಗ್ರೆಸ್, ಉದ್ದವ್ ಬಣದ ಶಿವಸೇನೆ ಮತ್ತು ಶರದ್ ಪವಾರ್ ಬಣದ ಎನ್ಸಿಪಿಗೆ ಫಲಿತಾಂಶ ಭಾರೀ ನಿರಾಸೆ ಮೂಡಿಸಿದೆ. ಜಾರ್ಕಂಡ್ ಅಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಿದೆ. ಇಲ್ಲಿ 81 ಸ್ಥಾನ ಪೈಕಿ 56 ಇಂಡಿಯಾ ಒಕ್ಕೂಟ ಗೆದ್ದಿದೆ. 24 ಎನ್ ಡಿ ಎ ಗೆದ್ದಿದೆ
ಕೇರಳದ ವಯನಾಡಲ್ಲಿ ಪ್ರಿಯಾಂಕಾ ಗಾಂಧಿಗೆ 4 ಲಕ್ಷ ಲೀಡಲ್ಲಿ ಜಯ
ಕೇರಳದ ವಯನಾಡ್ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ತಮ್ಮ ಮೊತ್ತ ಮೊದಲ ಚುನಾವಣಾ ಜಯಭೇರಿ ಬಾರಿಸಿ ದ್ದಾರೆ. ಅವರು ಸುಮಾರು 4.1 ಲಕ್ಷ ಮತಗಳ ಅಂತರದಿಂದ ಗೆದ್ದು ಮೊದಲ ಬಾರಿಗೆ ಲೋಕಸಭೆಗೆ ಪ್ರವೇಶ ಪಡೆದಿದ್ದಾರೆ
ನಿಖಿಲ್ ಸೋಲು: ಅಭಿಮಾನಿ ಆತ್ಮಹತ್ಯೆಗೆ ಯತ್ನ
ಚನ್ನಪಟ್ಟಣ ಉಪ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಸೋಲು ಕಂಡ ಹಿನ್ನಲೆ ಅಭಿಮಾನಿಯೊಬ್ಬ ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಡೆದಿದೆ. ರಾಮನಗರ ಜಿಲ್ಲೆ ಚನ್ನಪಟ್ಟಣ ಕೂಡೂರು ಸಮೀಪ ಶ್ರೀರಾಮಪುರದಲ್ಲಿ ನಿಖಿಲ್ ಅಭಿಮಾನಿ ಪತ್ರ ಬರೆದಿಟ್ಟು ವಿಷ ಸೇವಿಸಿ ಆತ್ಮಹತ್ಯೆ ಯತ್ನಿಸಿದ್ದಾರೆ. ಚನ್ನಪಟ್ಟಣ ಉಪಚುನಾವಣೆಯಲ್ಲಿ ನಿಖಿಲ್ ಕುಮಾರಸ್ವಾಮಿ ಸೋಲು ಕಂಡ ಹಿನ್ನೆಲೆಯಲ್ಲಿ ಜೆಡಿಎಸ್ ಕಾರ್ಯಕರ್ತ ಮಂಜುನಾಥ ಅಲಿಯಾಸ್ ಅಭಿ(35) ಆತ್ಮಹತ್ಯೆಗೆ ಯತ್ನಿಸಿದ್ದಾರೆ. ತೀವ್ರ ಅಸ್ವಸ್ತರಾಗಿರುವ ಅವರನ್ನು ಮಂಡ್ಯದ ಮಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ