ಆಗುಂಬೆ ಘಾಟಿ ಟು ಲೈನ್ ರಸ್ತೆಗೆ ಅಸ್ತು!
– ಲಿಖಿತ ಉತ್ತರದಲ್ಲಿ ಆದೇಶಿಸಿದ ಸಚಿವ ಗಡ್ಕರಿ
– ಸಂಸದ ಕೋಟಾ ಶ್ರೀನಿವಾಸ ಪೂಜಾರಿ ಪ್ರಶ್ನೆಗೆ ಉತ್ತರ
NAMMUR EXPRESS NEWS
ತೀರ್ಥಹಳ್ಳಿ/ಆಗುಂಬೆ: ಆಗುಂಬೆ ಘಾಟಿಯಲ್ಲಿ ಟು ಲೈನ್ ರಸ್ತೆ ನಿರ್ಮಿಸುವುದಾಗಿ ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ತಿಳಿಸಿದ್ದಾರೆ.
ಈ ಮೂಲಕ ಮಲೆನಾಡಿಗರ ಹಲವು ವರ್ಷದ ಬೇಡಿಕೆ ಈಡೇರುವ ಭರವಸೆ ಹುಟ್ಟಿದೆ. ಲೋಕಸಭಾ ಸಂಸತ್ ಅಧಿವೇಶನದಲ್ಲಿ ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಶಿವಮೊಗ್ಗ ಟು ಮಂಗಳೂರು ರಾಷ್ಟ್ರೀಯ ಹೆದ್ದಾರಿ 169 ಅಗಲೀಕರಣದ ಬಗ್ಗೆ ಮಾತನಾಡುತ್ತಾ. ಆಗುಂಬೆ ಘಾಟಿಯಲ್ಲಿ ಟು ಲೈನ್ ರಸ್ತೆ ಮಾಡುವುದು 2024-25 ರ ವಾರ್ಷಿಕ ಪ್ಲಾನ್ನಲ್ಲಿ ಸೇರಿಸಲಾಗಿದೆ ಎಂದಿದ್ದಾರೆ. ಉಡುಪಿ-ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿರವರು ಕೇಳಿದ ಪ್ರಶ್ನೆಗೆ ಲೋಕಸಭೆಯಲ್ಲಿ ಲಿಖಿತ ಉತ್ತರ ನೀಡಿರುವ ನಿತಿನ್ ಗಡ್ಕರಿ ಶಿವಮೊಗ್ಗ-ಮಂಗಳೂರು ಮಾರ್ಗದ ಎನ್ಎಚ್-169 ರ ಮಾಲಾ ಗೇಟ್ನಿಂದ ಕಾರ್ಕಳ ಮಾರ್ಗದ 4 ಲೇನಿಂಗ್ ಕಾಮಗಾರಿ ಮುಂದಿನ ವರ್ಷ ಫೆಬ್ರವರಿ ವೇಳೆಗೆ ಪೂರ್ಣಗೊಳ್ಳಲಿದೆ ಎಂದಿದ್ದಾರೆ. ಇದೇ ವೇಳೆ ಆಗುಂಬೆ ಘಾಟಿಯಲ್ಲಿ ಎನ್ಎಚ್ 169ಎ ದ್ವಿಪಥದ ಕಾಮಗಾರಿಯನ್ನು 2024-25ರ ವಾರ್ಷಿಕ ಯೋಜನೆಯಲ್ಲಿ ಸೇರಿಸಲಾಗಿದೆ ಲಿಖಿತ ಉತ್ತರದಲ್ಲಿ ಸಚಿವರು ತಿಳಿಸಿದ್ದಾರೆ.