ಶೃಂಗೇರಿ ಜೆಸಿಐಗೆ ಅಶೋಕ ಸಾರಥಿ
– ನೂತನ ಅಧ್ಯಕ್ಷರು, ಪದಾಧಿಕಾರಿಗಳ ಪದಗ್ರಹಣ ಸಮಾರಂಭ
– “ರೈಸಿಂಗ್ ಸ್ಟಾರ್” ಘೋಷವಾಕ್ಯದಡಿ ಈ ಬಾರಿ ಕಾರ್ಯನಿರ್ವಹಿಸಲಿರೋ ಜೆಸಿಐ
NAMMUR EXPRESS NEWS
ಶೃಂಗೇರಿ: ಶೃಂಗೇರಿ ತಾಲೂಕ ಜೆಸಿಐ ಘಟಕದ ನೂತನ ಅಧ್ಯಕ್ಷರಾಗಿ ಎ.ಅಶೋಕ್ (ವಿಎಸ್ಎ ಅಶೋಕ್) ಅಧಿಕಾರ ಸ್ವೀಕರಿಸಿದರು.
ಶೃಂಗೇರಿ ತಾಲೂಕಿನ ಜೆಸಿಬಿಎಂ ಕಾಲೇಜಿನಲ್ಲಿ ಆಯೋಜಿಸಿದ “ಸ್ನೇಹ ಸಮ್ಮಿಲನ” ಎಂಬ ಸುಂದರ ಕಾರ್ಯಕ್ರಮದಲ್ಲಿ ನಿಕಟಪೂರ್ವ ಅಧ್ಯಕ್ಷರಾದ ಜೇಸಿ ರಾಘವೇಂದ್ರರವರು ಅಧಿಕಾರ ಹಸ್ತಾಂತರಿಸಿದರು. ಪೂರ್ವಾಧ್ಯಕ್ಷರಾದ ಜೇಸಿ ಪ್ರಸಾದ್ರವರು ಪ್ರತಿಜ್ಞಾ ವಿಧಿ ಭೋಧಿಸಿದರು. ಅಧಿಕಾರ ಸ್ವೀಕರಿಸಿದ ಅಧ್ಯಕ್ಷ ಅಶೋಕ್ ತಮ್ಮ ತಂಡದ ನೂತನ ಪದಾಧಿಕಾರಿಗಳಿಗೆ ಪ್ರತಿಜ್ಞಾವಿಧಿ ಭೋಧಿಸಿ ತಂಡಕ್ಕೆ ಸ್ವಾಗತಿಸಿದರು.
ತನ್ನ ಅಧಿಕಾರವಧಿಯಲ್ಲಿ ಸಂಸ್ಥೆಯಲ್ಲಿ ಉತ್ತಮ ಕೆಲಸ ನಿರ್ವಹಿಸಿ,ಸಂಸ್ಥೆಯ ಹೆಸರನ್ನು ರಾಷ್ಟ್ರಮಟ್ಟದಲ್ಲಿ ಗುರುತಿಸುವಂತೆ ಕಾರ್ಯನಿರ್ವಹಿಸುವುದಾಗಿ ನೂತನ ಅಧ್ಯಕ್ಷ ಎ ಅಶೋಕ್ ತಿಳಿಸಿದರು
ಯಾರೆಲ್ಲಾ ಶೃಂಗೇರಿ ಜೆಸಿಐ ನ ನೂತನ ಪದಾಧಿಕಾರಿಗಳು?
ಅಧ್ಯಕ್ಷರು: ಹೆಚ್ಜಿಎಫ್ ಅಶೋಕ್ ವಿ.ಎಸ್.
ನಿಕಟಪೂರ್ವ ಅಧ್ಯಕ್ಷರು:ಜೇಸಿ ರಾಘವೇಂದ್ರ ಹೆಚ್.ಜೆ
ಕಾರ್ಯದರ್ಶಿ: ಜೇಸಿ ಅನ್ವಿತ್ ಕಾಮತ್.
ಖಜಾಂಚಿ: ಜೇಸಿ ಚೇತನ್
ಉಪಾಧ್ಯಕ್ಷರುಗಳು:-
* ಜೇಸಿ ಮಾತೃಶ್ರೀ ರಾಘವೇಂದ್ರ (PR &Marketing)
* ಜೇಸಿ ಸುಜಿತ್ ಹೆಚ್.ಟಿ (Management)
* ಜೆಎಫ್ಎಮ್ ಶ್ರೀಕಾಂತ್ ಹೆಚ್.ಸಿ. (Business)
* ಜೆಎಫ್ಎಮ್ ರಮೇಶ್ ಶೂನ್ಯ(Community development)
* ಜೇಸಿ ಭುವನೇಂದ್ರ (G&D)
* ಜೆಎಫ್ಎಮ್ ಪೂರ್ಣಚಂದ್ರ ಕೆ.ಎನ್. (Internationalism)
* ಜೇಸಿ ಅನಂತಕೃಷ್ಣ ಹೆಬ್ಬಾರ್ (Training)
ಮಹಿಳಾ ಜೇಸಿ ಸಂಯೋಜಕರು: ಜೇಸಿ ಸುನೀತ ನವೀನ್ ಗೌಡ
ನಿರ್ದೇಶಕರು:
* ಜೇಸಿ ಸುಹಾಸ್ ಕಾಮತ್
* ಜೇಸಿ ವಸಂತ
* ಜೇಸಿ ಮಹಾಬಲ
ಘಟಕ ಪತ್ರಿಕೆ ಸಂಪಾದಕರು: ಜೇಸಿ ಮೋಹನ್ ಬೋಳೂರು
ಅಧ್ಯಕ್ಷರ ವಿಶೇಷಾಧಿಕಾರಿ :
ಜೇಸಿ ಆಶೀಶ್ ದೇವಾಡಿಗ
ಸಂಸ್ಥೆಗೆ ನೂತನ ಸದಸ್ಯರಾದ
* ಸಚಿನ್ ಗುಬ್ಬಗೋಡು
* ಅವಿನಾಶ್
* ಅಭಿರಾಜ್
* ಉಮಾಚಂದ್ರಶೇಖರ್
* ಸುನಿತಾ ಪ್ರಭುರವರುಗಳಿಗೆ ಪ್ರತಿಜ್ಞಾ ವಿಧಿ ಭೋಧಿಸುವುದರ ಮುಖಾಂತರ ವಲಯಾಧ್ಯಕ್ಷ ಡಾ.ಅಕ್ಷಯ್ ನೂತನ ಸದಸ್ಯರಿಗೆ ಸ್ವಾಗತಿಸಿದರು.