ನೌಕರರ ಕ್ರಿಕೆಟ್: ಮೆಸ್ಕಾಂ ತಂಡ ವಿನ್ನರ್, ಕಂದಾಯ ಇಲಾಖೆ ರನ್ನರ್!
– ಸುವರ್ಣ ಕರ್ನಾಟಕ ಸಂಭ್ರಮಾಚರಣೆ ಪ್ರಯುಕ್ತ ಪಂದ್ಯಾಟ
– ಅಸಾದಿ ನೇತೃತ್ವದಲ್ಲಿ ನಡೆದ ಪಂದ್ಯಾವಳಿಗೆ ಎಲ್ಲರ ಮೆಚ್ಚುಗೆ
NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿ ಪಟ್ಟಣ ಪಂಚಾಯತ್ ತೀರ್ಥಹಳ್ಳಿ ಸುವರ್ಣ ಕರ್ನಾಟಕ ಸಂಭ್ರಮಾಚರಣೆ ಪ್ರಯುಕ್ತ ಸರಕಾರಿ ನೌಕರರ ಕ್ರಿಕೆಟ್ ಪಂದ್ಯಾಟ ಡಿ.14 ಮತ್ತು 15ರಂದು ನಡೆದಿದ್ದು, ಎರಡು ದಿನಗಳ ಕಾಲ ನಡೆದ ಕ್ರೀಡಾಕೂಟದಲ್ಲಿ 230 ರಿಂದ 240 ಆಟಗಾರರು ಭಾಗವಹಿಸಿದ್ದು, ಮೆಸ್ಕಾಂ ಪ್ರಥಮ ಸ್ಥಾನ ಮತ್ತು ರೆವೆನ್ಯೂ ತಂಡ ರನ್ನರ್ ಅಪ್ ಆಗಿ ದ್ವಿತೀಯ ಸ್ಥಾನ ಪಡೆದುಕೊಂಡಿದ್ದಾರೆ. 2016ರಂದು ಪ್ರಾರಂಭವಾದ ಈ ಕ್ರಿಕೆಟ್ ಪಂದ್ಯಾಟ, 8 ನೇ ವರ್ಷಕ್ಕೆ ಕಾಲಿಡುತ್ತಿದ್ದು, 6 ಬಾರಿ ಅಧಿಕಾರವಿಲ್ಲದಿದ್ದರೂ ನಡೆಸಲಾಗಿದೆ. ಸರ್ಕಾರಿ ಅಧಿಕಾರಿಗಳು ತಮ್ಮ ಇಡೀ ಜೀವನ ಸಾರ್ವಜನಿಕರಿಗೋಸ್ಕರ ಶ್ರಮಪಡುತ್ತಾರೆ. ಆದ್ದರಿಂದ ಈ ಪಂದ್ಯಾಟ ಆಯೋಜಿಸಲಾಗಿತ್ತು. 16 ಇಲಾಖೆಗಳ ತಂಡಕ್ಕೆ ಮತ್ತು ಸಹಕರಿಸಿದ ಪಟ್ಟಣ ಪಂಚಾಯತ್ ಸದಸ್ಯರು, ಅಧಿಕಾರಿಗಳಿಗೆ ಪಟ್ಟಣ ಪಂಚಾಯತ್ ಅಧ್ಯಕ್ಷರು ರಹಮತುಲ್ಲಾ ಅಸಾದಿ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.
ಅಚ್ಚುಕಟ್ಟಾದ ಪಂದ್ಯಕೂಟದ ಆಯೋಜನೆ ಅಸಾದಿ ನೇತೃತ್ವದಲ್ಲಿ ನಡೆದಿದ್ದು, ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಕ್ರೀಡಾಕೂಟದಲ್ಲಿ ಆರಗ, ಮಂಜುನಾಥ ಗೌಡ ಭಾಗಿ: ರಾಜಕೀಯ ಆಡಳಿತದ ಜೊತೆಗೆ ಇಂತಹ ಕಾರ್ಯಕ್ರಮವನ್ನು ಮಾಡುವ ಮೂಲಕ ವಿಶೇಷವಾಗಿ ಸಂಬಂಧವನ್ನು ಬೆಸೆಯುವ ಉತ್ತಮ ಕಾರ್ಯ ವನ್ನು ಪಟ್ಟಣ ಪಂಚಾಯತ್ ಮಾಡುತ್ತಿದೆ ಎಂದು ಎಂಎಡಿಬಿ, ಡಿಸಿಸಿ ಬ್ಯಾಂಕ್ ಅಧ್ಯಕ್ಷರಾದ ಡಾ.ಆರ್. ಎಂ ಮಂಜುನಾಥ್ ಗೌಡ ಹೇಳಿದರು. ಸರ್ಕಾರಿ ನೌಕರರರು ಮತ್ತು ಅಧಿಕಾರಿಗಳು ಒತ್ತಡ ಬಿಟ್ಟು ಆರಾಮದಾಯಕವಾಗಿ ಕೆಲಸ ಮಾಡುವ ವಾತಾವರಣ ಸೃಷ್ಟಿಯಾಗಬೇಕು ಅದಕ್ಕಾಗಿ ಈ ಕ್ರೀಡೆ ಅತೀ ಮುಖ್ಯ ಎಂದು ಮಾಜಿ ಗೃಹ ಸಚಿವ ಮತ್ತು ಶಾಸಕರು ಆರಗ ಜ್ಞಾನೇಂದ್ರ ಹೇಳಿದರು.
ವಿಜೇತರ ಪಟ್ಟಿ ಹಾಗೂ ಉತ್ತಮ ಆಟಗಾರರ ಪಟ್ಟಿ
ವಿಜೇತ ತಂಡ ಮೆಸ್ಕಾಂ ಇಲಾಖೆ, ತೀರ್ಥಹಳ್ಳಿ
ದ್ವಿತೀಯ ಸ್ಥಾನ ಕಂದಾಯ ಇಲಾಖೆ, ತೀರ್ಥಹಳ್ಳಿ
ಸರಣಿ ಶೇಷ್ಠ ಪ್ರಶಸ್ತಿ : ರಮೀಚ್, ಮೆಸ್ಕಾಂ ಇಲಾಖೆ
ಉತ್ತಮ ದಾಂಡುಗಾರ : ದಯಾ ಆರೋಗ್ಯ ಇಲಾಖೆ
ಉತ್ತಮ ಎಸೆತಗಾರ: ಸಿರಿ ಕಂದಾಯ ಇಲಾಖೆ
ಉತ್ತಮ ಕೀಪರ್: ಹರ್ಷ, ಪಟ್ಟಣ ಪಂಚಾಯಿತಿ, ತೀರ್ಥಹಳ್ಳಿ
ಉತ್ತಮ ಆಲ್ ರೌಂಡರ್ : ಅಬ್ದುಲ್ ಕಲಾಂ, ಗುತ್ತಿಗೆದಾರರ ಸಂಘ
ಉತ್ತಮ ಕಲಾತ್ಮಕ ಆಟಗಾರ : ಡಿ.ನಾಗರಾಜ ಪಟ್ಟಣ ಪಂಚಾಯಿತಿ, ತೀರ್ಥಹಳ್ಳಿ
ಪಂದ್ಯಾವಳಿಗೆ ಗಣ್ಯರು, ನಾಯಕರ ಆಗಮನ
ಪಂದ್ಯಾವಳಿ ಉದ್ಘಾಟನೆಯನ್ನು ಮಾಜಿ ಸಚಿವರು ಮತ್ತು ಮಾಜಿ ಶಾಸಕರು,ತೀರ್ಥಹಳ್ಳಿ ಕ್ಷೇತ್ರ ಕಿಮ್ಮನೆ ರತ್ನಾಕರ್ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಅಧ್ಯಕ್ಷರು, ನಗರಾಭಿವೃದ್ಧಿ ಪ್ರಾಧಿಕಾರ, ಶಿವಮೊಗ್ಗ ಹೆಚ್ ಎಸ್ ಸುಂದರೇಶ್, ಗ್ಯಾರಂಟಿ ಅನುಷ್ಠಾನ ಸಮಿತಿ, ತೀರ್ಥಹಳ್ಳಿ ಸಚೀಂದ್ರ ಹೆಗ್ಡೆ, ಅಧ್ಯಕ್ಷರು, ಕನ್ನಡ ಸಾಹಿತ್ಯ ಪರಿಷತ್, ತೀರ್ಥಹಳ್ಳಿ ರಮೇಶ್, ಶೆಟ್ಟಿ,ಶಿಕ್ಷಣಾಧಿಕಾರಿಗಳು, ತೀರ್ಥಹಳ್ಳಿ ಗಣೇಶ್, ಕ್ಷೇತ್ರ ಭಾಗವಹಿಸಿದ್ದರು. ಸಮಾರೋಪ ಸಮಾರಂಭದಲ್ಲಿ ಬಹುಮಾನ ವಿತರಣೆ ಮಾಜಿ ಗೃಹ ಸಚಿವರು ಮತ್ತು ಶಾಸಕರು ಆರಗ ಜ್ಞಾನೇಂದ್ರ. ಮುಖ್ಯ ಅತಿಥಿಗಳಾಗಿ ಸನ್ಮಾನ್ಯ ಅಧ್ಯಕ್ಷರು, ಮಲೆನಾಡು ಪ್ರದೇಶಾಭಿವೃದ್ಧಿ ಮಂಡಳಿ ಹಾಗೂ ಜಿಲ್ಲಾ ಡಿ.ಸಿ.ಸಿ ಬ್ಯಾಂಕ್, ಶಿವಮೊಗ್ಗ ಆರ್.ಎಂ.ಮಂಜುನಾಥ ಗೌಡ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿದ್ದರು. ರೆಹಮತ್ ಉಲ್ಲಾ ಅಸಾದಿ, ಅಧ್ಯಕ್ಷರು, ಪಟ್ಟಣ ಪಂಚಾಯತ್, ತೀರ್ಥಹಳ್ಳಿ ಅಧ್ಯಕ್ಷತೆಯನ್ನು ವಹಿಸಿದ್ದರು. ಕಾರ್ಯಕ್ರಮದಲ್ಲಿ ಮಾರಿಕಾಂಬ ದೇವಸ್ಥಾನದ ಅಧ್ಯಕ್ಷರು ನಾಗರಾಜ್ ಶೆಟ್ಟಿ, ಸಂದೇಶ ಜವಳಿ, ಸೊಪ್ಪುಗುಡ್ಡೆ ರಾಘವೇಂದ್ರ, ರವಿ ಕಡ್ತೂರು, ಶಬನಮ್, ಸುಶೀಲ ಶೆಟ್ಟಿ, ಗಣಪತಿ, ಗೀತಾರಮೇಶ್, ರತ್ನಾಕರ್ ಶೆಟ್ಟಿ ಜ್ಯೋತಿ ಮೋಹನ್ ಪಂಚಾಯತ್ ಎಲ್ಲಾ ಸದಸ್ಯರು ಉಪಸ್ಥಿತರಿದ್ದರು.