ಶೃಂಗೇರಿಯಲ್ಲಿ ಅಬ್ಬರಿಸಲಿದ್ದಾನೆ ಶಿವದೂತ ಗುಳಿಗ!
– ರಂಗ ಸಿಂಗಾರ, ಶೃಂಗೇರಿ ತಂಡದಿಂದ ನಾಟಕ ಪ್ರದರ್ಶನ ಆಯೋಜನೆ
– ಕಾಂತಾರ ಖ್ಯಾತಿಯ ಸ್ವರಾಜ್ ಶೆಟ್ಟಿ ಅಭಿನಯದ ವಿಭಿನ್ನ ನಾಟಕ
– ತುಳು ಅಲ್ಲ, ಕನ್ನಡದಲ್ಲೇ ಪ್ರದರ್ಶನಗೊಳ್ಳಲಿದೆ ನಾಟಕ..!
NAMMUR EXPRESS NEWS
ಶೃಂಗೇರಿ: ಕಳೆದ ಐದು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿರುವ ರಂಗ ಸಿಂಗಾರ ತಂಡವು ಡಿ.30 ರ ಸೋಮವಾರದಂದು ತಾಲೂಕಿನ ಬಾಲಗಂಗಾಧರನಾಥ ಸ್ವಾಮಿ ಮಹಾ ವೇದಿಕೆ,ಆದಿಚುಂಚನಗಿರಿ ಶಾಖಾ ಮಠ,ಶೃಂಗೇರಿಯಲ್ಲಿ “ಶಿವದೂತ ಗುಳಿಗ” ಎಂಬ ವಿಭಿನ್ನ ನಾಟಕ ಪ್ರದರ್ಶನವನ್ನು ಏರ್ಪಡಿಸಿದೆ. ಕಾಂತಾರ ಸಿನಿಮಾದಲ್ಲಿ ನಟಿಸಿರುವ ಸ್ವರಾಜ್ ಶೆಟ್ಟಿಯವರ ಅದ್ಭುತ ನಟನೆಯ ಆಕರ್ಷಣೆ ಇರಲಿದ್ದು ಎರಡೂವರೆ ಗಂಟೆಗಳ ಕಾಲದ ನಾಟಕ ಪ್ರದರ್ಶನವಿರುತ್ತದೆ. ಡಿ.30 ರ ಸಂಜೆ 6 ಗಂಟೆಯಿಂದ ಪ್ರದರ್ಶನ ಪ್ರಾರಂಭಗೊಳ್ಳಲಿದ್ದು ಕಾರ್ಯಕ್ರಮದಲ್ಲಿ ಆದಿಚುಂಚನಗಿರಿ ಶಾಖಾಮಠದ ಶ್ರೀಶ್ರೀಗುಣನಾಥ ಸ್ವಾಮೀಜಿಯವರ ದಿವ್ಯ ಉಪಸ್ಥಿತಿ ಇರಲಿದೆ. ಈ ಅದ್ಭುತ ನಾಟಕವನ್ನು ಎಲ್ಲರೂ ಕಣ್ತುಂಬಿಕೊಳ್ಳುವಂತೆ ರಂಗ ಸಿಂಗಾರ ತಂಡವು ಪತ್ರಿಕಾ ಹೇಳಿಕೆಯಲ್ಲಿ ಮನವಿ ಮಾಡಿದೆ.
ಶಿವದೂತ ಗುಳಿಗ,ನಾಟಕದ ವಿಶೇಷತೆಯೇನು..?
ಈಗಾಗಲೇ ರಾಜ್ಯ,ಹೊರ ರಾಜ್ಯ,ವಿದೇಶಗಳೂ ಸೇರಿದಂತೆ 760 ಪ್ರದರ್ಶನಗಳನ್ನು ಪೂರೈಸಿದ ನಾಟಕ ಇದುವರೆಗೂ ಕೇವಲ ತುಳುವಿನಲ್ಲಿ ಮಾತ್ರ ಪ್ರದರ್ಶನಗೊಳ್ಳುತ್ತಿತ್ತು, ಈ ಬಾರಿ ತನ್ನ 761 ನೇ ಪರ್ದರ್ಶನವು ಶೃಂಗೇರಿಯಲ್ಲಿ ಕನ್ನಡದಲ್ಲಿ ಪ್ರದರ್ಶನಗೊಳ್ಳುತ್ತಿರುವುದು ವಿಶೇಷವಾಗಿದೆ. ಉತ್ತಮ ಧ್ವನಿ ಮತ್ತು ಬೆಳಕಿನ ಆಯೋಜನೆಯೊಂದಿಗೆ, ಸಾಕಷ್ಟು ತಾಂತ್ರಿಕ ನಿರ್ವಹಣೆಯೊಂದಿಗೆ ಅದ್ಭುತವಾಗಿ ಮೂಡಿಬರಲಿದೆ. ಕಾಂತಾರ ಸಿನಿಮಾನದಲ್ಲಿ ಗುರುವ ಪಾತ್ರದಲ್ಲಿ ನಟಿಸಿರುವ ಸ್ವರಾಜ್ ಶೆಟ್ಟಿಯವರು ನಾಟಕದಲ್ಲಿ ಸುಮಾರು ಒಂದೂವರೆ ಗಂಟೆಗಳ ಕಾಲ ಅದ್ಭುತವಾಗಿ ನಟಿಸಲಿದ್ದಾರೆ. ಕಾಂತಾರ ಸಿನಿಮಾದಲ್ಲಿ ಕೇವಲ 20 ನಿಮಿಷಗಳ ಕಾಲ ಪ್ರದರ್ಶನಗೊಳ್ಳುವ ಗುಳಿಗ ಪಾತ್ರ ನಾಟಕದಲ್ಲಿ ಸುಮಾರು ಒಂದೂವರೆ ಗಂಟೆಗೂ ಹೆಚ್ಚು ಕಾಲ ಪ್ರದರ್ಶನಗೊಳ್ಳಲಿದೆ. ನಾಟಕಕ್ಕೆ ವಿನಯ್ ಕುಮಾರ್ ಕೊಡಿಯಾಲ್ ಬೈಲ್ರವರ ನಿರ್ದೇಶನವಿದ್ದು ಸುಮಾರು 32 ಜನ ಕಲಾವಿದರ ತಂಡ ಅಭಿನಯಿಸಲಿದೆ. ನಾಟಕ ಪ್ರದರ್ಶನಕ್ಕೆ ಗೌರವ ಉಚಿತ ಪ್ರವೇಶವಿರಲಿದ್ದು ಪಾಸ್ ವ್ಯವಸ್ಥೆ ಕಲ್ಪಿಸಲಾಗಿದೆ ಎಲ್ಲರೂ ಪಾಸ್ ಪಡೆದು ಪ್ರದರ್ಶನದಲ್ಲಿ ಪಾಲ್ಗೊಳ್ಳಲು ಆಯೋಜಕರಲ್ಲಿ ಒಬ್ಬರಾದ ಅನಿಲ್ ಹೊಸಕೊಪ್ಪ ಮನವಿ ಮಾಡಿದರು.
ಪಾಸ್ ದೊರೆಯುವ ಸ್ಥಳಗಳು:
* ಅವಿನಾಶ್,ಹೊಸಕೊಪ್ಪ ಸ್ಟೋರ್, ಕುರುಬಗೆರೆ – 70906 02080
* ಜಗದೀಶ್, ಅಕ್ಷಯ ಗೋಲ್ಡ್ ಫೈನಾನ್ಸ್ ಎಂ ಕೆ ಸ್ಟ್ರೀಟ್ 9480070279
* ಪ್ರವೀಣ್ ಬಳ್ಳಿವಾಡ ಶುಭಶ್ರೀ ಮೋಟರ್ಸ್ 9448170400.
* ವಿಜಯ್ ಕುಮಾರ್ ಮಲ್ಲಿಕಾರ್ಜುನ ಬಟ್ಟೆ ಅಂಗಡಿ 9448170468.
* ಸುಭ್ರಮಣ್ಯಭಟ್ (ಅಂಬಲಮನೆ)ನಿಶಾನ್ ಟ್ರೇಡರ್ ಶೃಂಗೇರಿ
9482544626
* ಮಂಜುನಾಥ ಕೆಟಿ, ಕುವೆಂಪು ಬಸ್ ನಿಲ್ದಾಣ ಶೃಂಗೇರಿ.
9482600671
* ಆಶೀಶ್ ದೇವಾಡಿಗ – 9353357646