ಸಂಭ್ರಮದಿಂದ ನಡೆದ ಶ್ರೀ ಮಲ್ಲಿಕಾರ್ಜುನ ಸ್ವಾಮಿ ರಥೋತ್ಸವ!
– ಚಂಡೆ, ಧಾರ್ಮಿಕ ತಂಡಗಳ ಮೆರವಣಿಗೆ
– ಅಚ್ಚುಕಟ್ಟು ಆಯೋಜನೆಗೆ ಭಕ್ತರ ಮೆಚ್ಚುಗೆ
– ರಥೋತ್ಸವ ಸಮಿತಿ, ದಾನಿಗಳು, ಭಕ್ತರು, ಜನರ ಸಹಕಾರ
NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿ ತಾಲೂಕಿನ ಮೇಗರವಳ್ಳಿ ಶ್ರೀ ಮಲ್ಲಿಕಾರ್ಜುನ ಸ್ವಾಮಿ ದೇವಸ್ಥಾನದಲ್ಲಿ ರಥೋತ್ಸವ ಸಂಭ್ರಮ ಸಡಗರದಿಂದ ಭಕ್ತರ ಸಮ್ಮುಖದಲ್ಲಿ ನಡೆಯಿತು.
ಶ್ರೀ ಮಲ್ಲಿಕಾರ್ಜುನ ಸ್ವಾಮಿ ರಥೋತ್ಸವದಲ್ಲಿ ಚಂಡೆ, ಧಾರ್ಮಿಕ ತಂಡಗಳ ಮೆರವಣಿಗೆ, ಅಚ್ಚುಕಟ್ಟು ಆಯೋಜನೆಗೆ ಭಕ್ತರ ಮೆಚ್ಚುಗೆಗೆ ಪಾತ್ರವಾಯಿತು. ದೇವಸ್ಥಾನ ಹಾಗೂ ರಥೋತ್ಸವ ಸಮಿತಿಯ ಎಲ್ಲಾ ಸದಸ್ಯರು, ದಾನಿಗಳು, ಭಕ್ತರು, ಜನರ ಸಹಕಾರದಿಂದ ಕಾರ್ಯಕ್ರಮ ಅತ್ಯಂತ ಯಶಸ್ವಿಯಾಯಿತು.
ಅನೇಕ ಧಾರ್ಮಿಕ ಕಾರ್ಯಕ್ರಮ: ವಿಶೇಷ ಪೂಜೆ
ಡಿಸೆಂಬರ್ 13ರಂದು ಶುಕ್ರವಾರ ಶ್ರೀ ಗುರು ಗಣೇಶ ಪೂಜೆ, ಮಧ್ಯಾಹ್ನ ಶ್ರೀ ದೇವರಿಗೆ “ರುದ್ರಾಭಿಷೇಕ, ಮಹಾಪೂಜೆ ನಡೆಯಿತು. ಅದೇ ದಿನ ಸಂಜೆ ‘ಶ್ರೀ ರಾಮಭಜನಾ ಪಲ್ಲಕ್ಕಿ ಉತ್ಸವ ಹಾಗೂ ದೀಪಾರಾಧನೆ, ಮಹಾಮಂಗಳಾರತಿ ಮತ್ತು ತೀರ್ಥಪ್ರಸಾದ ವಿನಿಯೋಗ ಕೂಡ ನೀಡಲಾಯಿತು ಈ ಧಾರ್ಮಿಕ ಕಾರ್ಯಕ್ರಮ ಅದ್ದೂರಿಯಾಗಿ ತೆರೆಕಂಡಿದೆ. ಡಿಸೆಂಬರ್ 14 ಶನಿವಾರ ಪೂಜಾ ಉತ್ಸವಗಳು ನೆರವೇರಿತು.
ಅದ್ದೂರಿ ರಥೋತ್ಸವ: ಭಕ್ತಿಯಲ್ಲಿ ಮಿಂದೆದ್ದ ಜನ!
ಡಿ.15ರ ಭಾನುವಾರ ಶ್ರೀ ದೇವರಿಗೆ ”ಕಲಾತತ್ವಹೋಮ ” ಮತ್ತು ‘” ಏಕಾದಶವಾರ ರುದ್ರಾಭಿಷೇಕ ”ಹಾಗೂ ನವಕ ಪ್ರಧಾನ ಕುಂಭಾಭಿಷೇಕ ” ಮಹಾಪೂಜೆ ” ಮಧ್ಯಾಹ್ನ ಶ್ರೀ ಮಲ್ಲಿಕಾರ್ಜುನ ಸ್ವಾಮಿಯ ಶ್ರೀ ಮನ್ಮಹಾರಥಾರೋಹಣೋತ್ಸವ, ಸಾರ್ವಜನಿಕ ಅನ್ನಸಂತರ್ಪಣೆ ನೆರವೇರಿಸಲಾಯಿತು.
ಸಂಜೆ ಪುರೋತ್ಸವ, ಅಷ್ಟಾವಧಾನ ಸೇವೆ, ಮಂಗಲಾಷ್ಟಕ, ಮಂಗಳಾರತಿ, ಪ್ರಸಾದ ವಿನಿಯೋಗ ಅದೇ ದಿನ ಶ್ರೀ ಭಗವದ್ ಉತ್ಸವ ಕೂಡ ನಡೆಯಿತು ಈ ಕಾರ್ಯಕ್ರಮದಲ್ಲಿ ಸಾಕಷ್ಟು ಜನ ಆಗಮಿಸಿದ್ದರು, ತನು-ಮನ-ಧನ ಸಹಕರಿಸಿ ಶ್ರೀ ಶಿವಾನುಗ್ರಹಕ್ಕೆ ಪಾತ್ರರಾಗಿದ್ದಾರೆ. ಎಲ್ಲಾ ಧಾರ್ಮಿಕ ಕಾರ್ಯಕ್ರಮಗಳು ಅದ್ದೂರಿಯಾಗಿ ನಡೆಯಿತು. ಜ್ಯೋತಿಷ್ಯ ವಿದ್ವಾನ್ ಶ್ರೀ ಸುಧೀಂದ್ರ ಭಟ್ಟರು, ಹೆಬ್ಬಾಗಿಲು ಇವರ ಆಚಾರ್ಯತ್ವದಲ್ಲಿ ಎಲ್ಲಾ ಧಾರ್ಮಿಕ ಕಾರ್ಯಕ್ರಮ ನೆರವೇರಿತು.
ರಥೋತ್ಸವ ಸಮಿತಿ
ಮಲ್ಲಿಕಾರ್ಜುನ ಸ್ವಾಮಿಯ ರಥೋತ್ಸವ ಸಮಿತಿಯು ವಿಶೇಷವಾಗಿ ಊರಿನ ಎಲ್ಲಾ ಸಾರ್ವಜನಿಕರು ಹಾಗೂ ಯುವಕರು, ಭಕ್ತಾದಿಗಳ ಸಹಕಾರದಿಂದ ವಾಟ್ಸಪ್ ಗ್ರೂಪನ್ನ ಮಾಡಿಕೊಂಡು ಅದರಲ್ಲಿ ಎಲ್ಲಾ ದಾನಿಗಳನ್ನು, ಭಕ್ತಾದಿಗಳನ್ನು ಹಾಗೂ ಊರಿನವರನ್ನು ಸೇರಿಕೊಂಡು ಸುಮಾರು ಒಂದು ಲಕ್ಷಕ್ಕಿಂತ ಹೆಚ್ಚು ಹಣವನ್ನ ಸಂಗ್ರಹಿಸಿ ವಿವಿಧ ಕಲಾತಂಡಗಳನ್ನ ಭಜನೆ ತಂಡಗಳನ್ನ, ಪಟಾಕಿ ಹಾಗೂ ರಥಕ್ಕೆ ವಿಶೇಷವಾಗಿ ಅಲಂಕಾರ ಮಾಡಿಸುವುದು, ಗೊಂಬೆ ನೃತ್ಯ ವಿಶೇಷವಾಗಿ ಮೆರವು ತಂದಂತಹ ಅನೇಕ ಧಾರ್ಮಿಕ ಚಟುವಟಿಕೆ ರಥೋತ್ಸವ ತಂಡ ಊರಿನವರು, ಯುವಕರು, ಭಕ್ತಾದಿಗಳು ಸಹಕರಿಸಿರುವುದು ಬಹಳ ವಿಶೇಷವಾಗಿತ್ತು. ರಥೋತ್ಸವ ಸಮಿತಿಯ ಈ ಒಂದು ಕಾರ್ಯ ವೈಕಾರಿಗೆ ಸಾರ್ವಜನಿಕರು ವಿಶೇಷವಾಗಿ ಮಲ್ಲಿಕಾರ್ಜುನ ಸ್ವಾಮಿಯ ಭಕ್ತರಿಂದ ಹಾಗೂ ಮೇಗರವಳ್ಳಿ ಸಮಸ್ತ ಗ್ರಾಮಸ್ಥರು ವಿಶೇಷವಾಗಿ ಅಭಿನಂದಿಸಿರುತ್ತಾರೆ. ಎಲ್ಲಾ ಊರಿನಲ್ಲಿ ಇಂತಹ ಯುವಕರ ತಂಡ ಧಾರ್ಮಿಕ ಸಾಮಾಜಿಕ ಕ್ಷೇತ್ರಗಳಲ್ಲಿ ತೊಡಗಿಸಿಕೊಳ್ಳುವುದು ಆ ಊರಿನ ಪ್ರಗತಿಗೆ ದಿಕ್ಸೂಚಿ ಇದ್ದಂತೆ ಎಂದು ನಮ್ಮೂರ್ ಎಕ್ಸ್ಪ್ರೆಸ್ ಅಭಿನಂದಿಸುತ್ತದೆ.