ಶೃಂಗೇರಿ ಕಜಾಪ ಮಹಿಳಾ ಘಟಕದಿಂದ ರಾಜ್ಯೋತ್ಸವ ರಂಗು!
– ಕನ್ನಡ ಜಾನಪದ ದಿನಾಚರಣೆ: ವಿಶಿಷ್ಟವಾಗಿ ಕಾರ್ಯಕ್ರಮ ಉದ್ಘಾಟಿಸಿದ ತಂಡ
– ಎಸ್ಎಸ್ಎಲ್ಸಿಯಲ್ಲಿ ಅತಿಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಸನ್ಮಾನ
NAMMUR EXPRESS NEWS
ಶೃಂಗೇರಿ: ಶೃಂಗೇರಿ ತಾಲೂಕಿನ ಕನ್ನಡ ಜಾನಪದ ಪರಿಷತ್ ಮಹಿಳಾ ಘಟಕದ ವತಿಯಿಂದ ಕನ್ನಡ ರಾಜ್ಯೋತ್ಸವ ಮತ್ತು ಕನ್ನಡ ಜಾನಪದ ದಿನಾಚರಣೆಯನ್ನು ಆಚರಿಸಲಾಯಿತು. ಶೃಂಗೇರಿ ತಾಲೂಕಿನ ವೈಕುಂಠಪುರದ ಸರ್ಕಾರಿ ಪ್ರೌಢಶಾಲೆಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮವನ್ನು ಕಜಾಪದ ಮಹಿಳಾ ಘಟಕದ ಗೌರವರ ಸಲಹೆಗಾರರಾದ ಶೈಲಜಾ ರತ್ನಾಕರ ಹೆಗ್ಡೆಯವರು ಉದ್ಘಾಟಿಸಿದರು. ಕನ್ನಡ ಜಾನಪದ ಪರಿಷತ್ನ ಶೃಂಗೇರಿ ಮಹಿಳಾ ಘಟಕದ ಅಧ್ಯಕ್ಷರಾದ ಜ್ಯೋತಿ ಮಂಜುನಾಥ್ ಅಧ್ಯಕ್ಷತೆ ವಹಿಸಿದ್ದರು, ಮುಖ್ಯ ಅತಿಥಿಗಳಾಗಿ ಜಿಲ್ಲಾಧ್ಯಕ್ಷರಾದ ಓಟಿತೋಟ ರತ್ನಾಕರ್, ಪ್ರೌಢಶಾಲೆಯ ಮುಖ್ಯೋಪಾಧ್ಯಾಯರಾದ ಈಶ್ವರ್,ಆರಕ್ಷಕ ಇಲಾಖೆಯ ಮೋಹನ್ ರಾಜ್ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಕಜಪಾ ಮಹಿಳಾ ಘಟಕದ ಪ್ರಧಾನಕಾರ್ಯದರ್ಶಿ ರೇಣುಕಾ ರಾಮಪ್ಪ ಮತ್ತು ಕೋಶಾಧಿಕಾರಿಯಾದ ಪ್ರಮಿಳಾ ರಮೇಶ್ ಸೇರಿದಂತೆ ಕನ್ನಡ ಜಾನಪದ ಪರಿಷತ್ನ ಶೃಂಗೇರಿ ಘಟಕ,ಯುವ ಬ್ರಿಗೇಡ್,ಮಹಿಳಾ ಘಟಕದ ಎಲ್ಲಾ ಪದಾಧಿಕಾರಿಗಳು ಉಪಸ್ಥಿತರಿದ್ದು ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಡೆಸಿಕೊಟ್ಟರು.
ವಿಭಿನ್ನವಾಗಿ,ಅಚ್ಚುಕಟ್ಟಾಗಿ ನಡೆದ ಕಾರ್ಯಕ್ರಮ!
ಕನ್ನಡ ಜಾನಪದ ಪರಿಷತ್ ಮಹಿಳಾ ಘಟಕದಿಂದ ಆಯೋಜಿಸಿದ್ದ ಕಾರ್ಯಕ್ರಮವು ತುಂಬಾ ಸುಂದರ,ವಿಭಿನ್ನ,ಅಚ್ಚುಕಟ್ಟಾಗಿ ನೆರವೇರಿತು. ಕಾರ್ಯಕ್ರಮವು ಮಲೆನಾಡಿನ ಜಾನಪದ ಆಟವಾದ ಚೆನ್ನೆಮಣೆ ಆಡುವ ಮುಖಾಂತರ ಕಜಾಪದ ಮಹಿಳಾ ಘಟಕದ ಗೌರವ ಸಲಹೆಗಾರರಾದ ಶೈಲಜಾ ರತ್ನಾಕರ್ ಹೆಗ್ಡೆಯವರು ಉದ್ಘಾಟಿಸಿದರೆ, ಅಧ್ಯಾಪಕರಾದ ವೆಂಕಪ್ಪರವರು ಜಾನಪದೀಯ ಸಂಸ್ಕೃತಿಯ ಬಗ್ಗೆ ಉಪನ್ಯಾಸ ನೀಡಿದರು, ಕಾರ್ಯಕ್ರಮದಲ್ಲಿ ತಾಲೂಕಿನ ಸರ್ಕಾರಿ ಶಾಲೆಗಳಲ್ಲಿ ಓದಿ 2024 ನೇ ಸಾಲಿನಲ್ಲಿ ನಡೆದ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಅತಿಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.