ವಾತ್ಸಲ್ಯ ಇಂಟರ್ ನ್ಯಾಷನಲ್ ಸ್ಕೂಲ್ ವಾತ್ಸಲ್ಯೊತ್ಸವ!
* 11ನೇ ವರ್ಷದ ಸಂಸ್ಥಾಪನಾ ಉತ್ಸವ ಅದ್ದೂರಿ ತೆರೆ
* ಸಾಂಸ್ಕೃತಿಕ ಕಾರ್ಯಕ್ರಮಗಳ ರಂಗು: ಪೋಷಕರ ಮೆಚ್ಚುಗೆ
NAMMUR EXPRESS NEWS
ಶಿವಮೊಗ್ಗ: ಆಯನೂರು ವಾತ್ಸಲ್ಯ ಇಂಟರ್ನ್ಯಾಶನಲ್ ಶಾಲೆಯ ಕೆ.ವಿ. ಕೃಷ್ಣಮೂರ್ತಿ ಓಪನ್ ಆಡಿಟೋರಿಯಂನಲ್ಲಿ ವಾತ್ಸಲ್ಯೊತ್ಸವ, 11ನೇ ವರ್ಷದ ಸಂಸ್ಥಾಪನಾ ಉತ್ಸವ ಹಾಗೂ ವಿಶೇಷ ಸಾಂಸ್ಕೃತಿಕ ಕಾರ್ಯಕ್ರಮಗಳು ಅದ್ದೂರಿಯಾಗಿ ನಡೆಯಿತು. ಹುಂಚದಕಟ್ಟೆ ಶಿಕ್ಷಣ ಟ್ರಸ್ಟ್ (ರಿ) ಅಧ್ಯಕ್ಷರಾದ ಶೈಲಾ ಕೃಷ್ಣಮೂರ್ತಿಯವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಈ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಸ್ವಾಭಿಮಾನಿ ಬಳಗದ ಸಂಸ್ಥಾಪಕರು ಹಾಗೂ ರಾಜ್ಯಾಧ್ಯಕ್ಷರು ಇನ್ಸೈಟ್ ಐ. ಎ. ಎಸ್ ನ ಸ್ಥಾಪಕ ಮತ್ತು ನಿರ್ದೇಶಕರು ಜಿ.ಬಿ. ವಿನಯ್ ಕುಮಾರ್ ಹಾಗೂ ಹುಂಚದಕಟ್ಟೆ ಶಿಕ್ಷಣ ಟ್ರಸ್ಟ್ (ಆರ್.) ಆಶ್ರಯ ಹೊನ್ನೇಕಟ್ಟೆ ಇವರು ಕೂಡ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಈ ಕಾರ್ಯಕ್ರಮದಲ್ಲಿ ಹಲವಾರು ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳ ವಿವಿಧ ವೇಷ ಭೂಷಣಗಳಿಂದ ಸಾಂಸ್ಕೃತಿಕ ರಂಗನ್ನು ಹೆಚ್ಚಿಸಿದರು. ಕಾರ್ಯಕ್ರಮದಲ್ಲಿ ಶಾಲಾ ಆಡಳಿತ ಮಂಡಳಿ ಸದಸ್ಯರು, ಪೋಷಕರು ಭಾಗವಹಿಸಿದ್ದರು ಈ ಕಾರ್ಯಕ್ರಮ ಎಲ್ಲರ ಮೆಚ್ಚುಗೆಯನ್ನ ಕೂಡ ಪಡೆಯಿತು.