ಬೆಳ್ತಂಗಡಿ: ಧರ್ಮಸ್ಥಳ ಕ್ಯೂ ಕಾಂಪ್ಲೆಕ್ಸ್ನಲ್ಲಿ 160 ಎಐ ಸಿ. ಸಿ ಟಿವಿ ಕಣ್ಗಾವಲು!
– ಪ್ರತಿ ಸಭಾಂಗಣದಲ್ಲಿ 600 ರಿಂದ 800 ಜನರಿಗೆ ಅವಕಾಶ
– ಡಿಜಿಟಲ್ ಟಿವಿ ಮೂಲಕ ಮಾಹಿತಿ ಮಾರ್ಗದರ್ಶನ
NAMMUR EXPRESS NEWS
ಬೆಳ್ತಂಗಡಿ: ಜ. 7ಕ್ಕೆ ಮಂಗಳವಾರ ಧರ್ಮಸ್ಥಳದಲ್ಲಿ ಉಪರಾಷ್ಟ್ರಪತಿ ಜಗದೀಪ್ ಧನ್ಕರ್ ಅವರು ‘ಕ್ಯೂ ಕಾಂಪ್ಲೆಕ್ಸ್’ ನ್ನು ಉದ್ಘಾಟನೆ ಮಾಡಿದ್ದು ಇದು ಹಲವು ವಿಶೇಷತೆಗಳನ್ನು ಹೊಂದಿದೆ. ಸಂಕೀರ್ಣದ ವಿಸ್ತೀರ್ಣ 2.75 ಲಕ್ಷ ಚದರ ಅಡಿ, ಇದು ವೃತ್ತಾಕಾರದಲ್ಲಿದ್ದು, 16 ಸಭಾಂಗಣಗಳ ಜೊತೆ 2 ಅಂತಸ್ತಿನ ರಚನೆಯಾಗಿದೆ. ಪ್ರತಿ ಸಭಾಂಗಣದಲ್ಲಿ 600 ರಿಂದ 800 ಜನರಿಗೆ ಅವಕಾಶವಿದೆ. ಏಕಕಾಲದಲ್ಲಿ 10-12 ಸಾವಿರ ಜನ ಕುಳಿತುಕೊಳ್ಳಬಹುದು. ವಿಶಾಲ ಸಭಾಂಗಣದ ಜೊತೆಗೆ ಭಕ್ತಾದಿಗಳು ಉದ್ದ ಸಾಲುಗಳಲ್ಲಿ ನಿಲ್ಲುವ ಬದಲು ಕುಳಿತು ಕಾಯಬಹುದು. ಪ್ರತಿ ಸಭಾಂಗಣ ಪ್ರವೇಶ, ನಿರ್ಗಮನ, ತುರ್ತು ನಿರ್ಗಮನ ದ್ವಾರಗಳು, ಕುಡಿಯುವ ನೀರು, ಶೌಚಾಲಯ ಸೌಲಭ್ಯಗಳು, ಶಿಶುಪಾಲನಾ ಕೊಠಡಿ, ಕೆಫೆಟೇರಿಯಾ, ಡಿಜಿಟಲ್ ಟಿವಿ ಮೂಲಕ ಮಾಹಿತಿ ಮಾರ್ಗದರ್ಶನ ನೀಡಲಾಗುತ್ತದೆ.
160ಎಐ ಆಧಾರಿತ ಕ್ಯಾಮೆರಾಗಳ ಮೂಲಕ ನಿಖರವಾಗಿ ಜನರ ಎಣಿಕೆ, ಕಣ್ಗಾವಲು ಮಾಡಲಿದೆ. ಇಲ್ಲಿ 263 ಸ್ಪೀಕರ್ಗಳು, 54 ಆಂಪ್ಲಿಫೈರ್ಗಳನ್ನು ಅಳವಡಿಸಲಾಗಿದೆ.
ಪ್ರಕಟಣೆಗಳನ್ನು ಪಬ್ಲಿಕ್ ಅಡ್ರೆಸ್ ಸಿಸ್ಟಂ ಮೂಲಕ ಕಮಾಂಡ್ ಸೆಂಟರ್ನಿಂದ ದೊರೆಯಲಿದೆ. 650 ಸಾಮರ್ಥ್ಯದ ಸೌರವಿದ್ಯುತ್ ಘಟಕವಿದೆ. ಇಳಿಜಾರು, ಏಕಮುಖ ಪಾದಚಾರಿ ಹರಿವು ಇರಲಿದ್ದು, ಸುಗುಮವಾದ ಮತ್ತು ಸ್ಥಿರವಾದ ಗುಂಪಿನ ಚಲನೆಯ ಇರಲಿದೆ. ತಡೆ ರಹಿತ ನ್ಯಾವಿಗೇಷನ್ ಎಲ್ಲಾ ಸರತಿ ಸಾಲುಗಳಲ್ಲಿ ಇರಲಿದೆ.
ಕ್ಯೂ ಕಾಂಪ್ಲೆಕ್ಸ್ನ ಹೃದಯ ಭಾಗದಲ್ಲಿ ಕ್ಯೂ ಮ್ಯಾನೇಜ್ಮೆಂಟ್ ಸಾಫ್ಟ್ವೇರ್, ಅಗ್ನಿಶಾಮಕ ಮತ್ತು ಸುರಕ್ಷತಾ ವ್ಯವಸ್ಥೆಗಳು, ಕಣ್ಣಾವಲು, ಪಬ್ಲಿಕ್ ಅಡ್ರೆಸ್ ಸಿಸ್ಟಂಗಳು, ಡಿಜಿಟಲ್ ಸಂಕೇತಗಳು, ಕಟ್ಟಡ ನಿರ್ವಹಣಾ ವ್ಯವಸ್ಥೆಗಳ ಮೇಲೆ ಮೇಲ್ವಿಚಾರಣೆ ಮಾಡಲು 10 ಸರ್ವ್ರಗಳನ್ನು ಹೊಂದಿದೆ.