ಗುತ್ತಮ್ಮ ಕೃಪಾಪೋಷಿತ ಯಕ್ಷಗಾನ ಮಂಡಳಿ ಮೇಳ ತಿರುಗಾಟ ಸೇವೆಗೆ ಸಜ್ಜು!
– ಮಂಡಳಿಯು ಯಶಸ್ವಿ 25ನೇ ವರ್ಷಕ್ಕೆ ಪಾದಾರ್ಪಣೆ
– ತಿರುಗಾಟದ ಪ್ರಥಮ ಸೇವೆಯಾಟ ದೇವಸ್ಥಾನದ ಆವರಣದಲ್ಲಿ
– ಪರಿಸ್ಥಿತಿಗೆ ಅನುಗುಣವಾಗಿ ಕಲಾಭಿಮಾನಿಗಳ ಹಿತದೃಷ್ಟಿಯಿಂದ ಕಾಲಮಿತಿಯ ನಿರ್ಧಾರ!
NAMMUR EXPRESS NEWS
ತೀರ್ಥಹಳ್ಳಿ: ಈ ವರ್ಷದ ತಿರುಗಾಟಕ್ಕೆ ಗುತ್ತಮ್ಮ ಕೃಪಾಪೋಷಿತ ಯಕ್ಷಗಾನ ಮಂಡಳಿ ಮೇಳ ಸಜ್ಜಾಗಿದ್ದು, ಶ್ರೀ ದೇವರ ಭಕ್ತರಾದ ಕಲಾಭಿಮಾನಿಗಳು ಮೇಳದ ಆಟವನ್ನು ಆಡಿಸಿ ತೋರಿಸಲಿದ್ದಾರೆ. ಇಂದಿನ ಪರಿಸ್ಥಿತಿಗೆ ಅನುಗುಣವಾಗಿ ಕಲಾಭಿಮಾನಿಗಳ ಹಿತದೃಷ್ಟಿಯಿಂದ ರಾತ್ರಿ 7.30 ರಿಂದ 12 ಗಂಟೆಯವರೆಗೆ ಕಾಲಮಿತಿ ಯಕ್ಷಗಾನ ನೀಡಲು ನಿರ್ಧರಿಸಲಾಗಿದೆ. ಅಪೇಕ್ಷೆಪಟ್ಟಲ್ಲಿ ಪೂರ್ಣರಾತ್ರಿ ಯಕ್ಷಗಾನ ಪ್ರದರ್ಶನ ನೀಡಲು ಸಿದ್ಧರಿದ್ದಾರೆ ಎಂದು ತಿಳಿಸಲಾಗಿದೆ. ಶ್ರೀ ಗುತ್ತಮ್ಮ ಕೃಪಾಪೋಷಿತ ಯಕ್ಷಗಾನ ಮಂಡಳಿಯು ಯಶಸ್ವಿ 25ನೇ ವರ್ಷಕ್ಕೆ ಪಾದಾರ್ಪಣೆ ಮಾಡಿರುವುದರುವುದು ಜ. 16 ಗುರುವಾರ ಬೆಳಗ್ಗೆ 10-00 ಗಂಟೆಗೆ ಗಣಪತಿ ಹೋಮ ಮತ್ತು ಅಮ್ಮನವರಿಗೆ ವಿಶೇಷ ಪೂಜೆ ನಡೆಯಲಿದೆ ಹಾಗೂ ರಾತ್ರಿ 8-00 ರಿಂದ ಮೇಳದ ಕಲಾವಿದರಿಂದ ಈ ವರ್ಷದ ತಿರುಗಾಟದ ಪ್ರಥಮ ಸೇವೆಯಾಟ ದೇವಸ್ಥಾನದ ಆವರಣದಲ್ಲಿ ನಡೆಯಲಿದೆ. ಸಾರ್ವಜನಿಕರು ಈ ಪುಣ್ಯ ಕಾರ್ಯಕ್ರಮಕ್ಕೆ ಆಗಮಿಸಿ ಯಕ್ಷಗಾನ ವೀಕ್ಷಿಸಿ, ಶ್ರೀ ದೇವಿಯ ಸಿರಿಮುಡಿ ಗಂಧ ಪ್ರಸಾದವನ್ನು ಸ್ವೀಕರಿಸಿ, ಅಮ್ಮನವರ ಕೃಪೆಗೆ ಪಾತ್ರರಾಗಬೇಕಾಗಿ ಈ ಮೂಲಕ ವಿನಂತಿಕೊಂಡಿದ್ದಾರೆ.
* ಮೇಳದ ಕೆಲವು ಪ್ರಸಂಗಗಳು ಹೀಗಿವೆ!
ಶ್ರೀದೇವಿ ಮಹಾತ್ಮೆ , ಶ್ರೀ ಕ್ಷೇತ್ರ ಮಹಾತ್ಮೆ , ಶಿವ ಪಂಚಾಕ್ಷರಿ ಮಹಾತ್ಮೆ , ಮಾರುತೀ ಪ್ರತಾಪ, ಚಂದ್ರಹಾಸ ಚರಿತ್ರೆ, ವಜ್ರದೈವ ಬೊಬ್ಬರ್ಯ, ಶಬರಿಮಲೆ ಅಯ್ಯಪ್ಪ, ರುದ್ರಕೋಪ, ಶ್ರೀನಿವಾಸ ಕಲ್ಯಾಣ, ಭಸ್ಮಾಸುರ ಮೋಹಿನಿ ಮುಂತಾದ ಪೌರಾಣಿಕ ಪ್ರಸಂಗಗಳು ನಡೆಯಲಿವೆ.
* ಹಲವು ಹೆಮ್ಮೆಯ ಕಲಾವಿದರು ಭಾಗಿ!
ಭಾಗವತರು: ಶ್ರೀ ಮಂಜುನಾಥ ಗೌಡ ಆಗುಂಬೆ, ಶ್ರೀ ಹಿರಿಯಣ್ಣಾಚಾರ್ ಕಿಗ್ಗ, ಶ್ರೀ ನಾಗೇಶ್ ಭಟ್, ನಾಗರಕುಡಿಗೆ
ಮದ್ದಳೆ: ಶ್ರೀ ಗಣೇಶಮೂರ್ತಿ ಹುಲುಗಾರು, ಶ್ರೀ ಚಂದ್ರಾಚಾರ್ ಮತ್ತಿಮನೆ,
ಚಂಡೆ: ಶ್ರೀ ನಾಗರಾಜ ಗೌಡ, ಸಿರಸಿ
ಸ್ತ್ರೀ ವೇಷದಲ್ಲಿ : ಶ್ರೀ ರಾಘವೇಂದ್ರ ನಾಗರಕುಡಿಗೆ, ಶ್ರೀ ವೀರಭದ್ರ ಗೌಡ, ಸಾಗರ, ಶ್ರೀ ಅಕ್ಷಯ ಉಳ್ಳೂರು
ಹಾಸ್ಯ: ಶ್ರೀ ಕುಶ ಪೂಜಾರಿ ನಾಗರಕುಡಿಗೆ
* ಮುಮ್ಮೇಳದಲ್ಲಿ ಯಾರ್ಯಾರು?
ಶ್ರೀ ಪುರಂದರ ಹೆಗ್ಗಡೆ ನಾಗರಕುಡಿಗೆ, ಶ್ರೀ ಅಣ್ಣಾಜಿ ರಾವ್, ಶ್ರೀ ಪ್ರಸನ್ನ ಕಲ್ಲುಕೊಪ್ಪ, ಶ್ರೀ ಅಶ್ವತ್ಥ ನಾರಾಯಣ ಮಾಕರಸು, ಶ್ರೀ ಸತ್ಯನಾರಾಯಣ ಮೇಳಿಗೆ, ಶ್ರೀ ರಮೇಶ್ ಆಚಾರ್, ಸೀತೂರು, ಶ್ರೀ ಅಂಬರೀಷ್ ಭಾರದ್ವಾಜ್, ಶ್ರೀ ವಸಂತ ಭಟ್ ಹಳುವಳ್ಳಿ, ಶ್ರೀ ನಾಗರಾಜ ಸಂಕದಹುಳೆ, ಶ್ರೀ ಚಂದ್ರಕಾಂತ ಮತ್ತು ಇತರರು ಇರಲಿದ್ದಾರೆ.