ನಮಗೂ ಪ್ಯಾಕೇಜ್ ಕೊಡಿ..,ನಾವೂ ಶರಣಾಗ್ತೇವೆ., ನಮ್ಮ ಮೇಲೂ ಕೇಸ್..!!?
– ನಕ್ಸಲ್ ಶರಣಾಗತಿಯನ್ನು NIA ತನಿಖೆ ನಡೆಸಲು ಕೇಂದ್ರಕ್ಕೆ ಮನವಿ
– ಯುವ ಮೋರ್ಚಾ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಮುಖಾಂತರ ಕೇಂದ್ರಕ್ಕೆ ಮನವಿ
NAMMUR EXPRESS NEWS
ಚಿಕ್ಕಮಗಳೂರು: ಕಳೆದ ಮೂರು ದಿನಗಳ ಹಿಂದೆ ಮುಖ್ಯಮಂತ್ರಿ ಎದುರು ಶರಣಾಗಿ ಮುಖ್ಯವಾಹಿನಿಗೆ ಬಂದ ನಕ್ಸಲರ ಶರಣಾಗತಿಯ ವಿರುದ್ಧ ಬಿಜೆಪಿ ಹಲವು ಅನುಮಾನಗಳನ್ನು ವ್ಯಕ್ತಪಡಿಸಿದೆ. ನಕ್ಸಲರ ಶರಣಾಗತಿ ಬಗ್ಗೆ ಹಲವು ಅನುಮಾನಗಳಿದ್ದು ಎನ್ಐಎ ಮಧ್ಯೆ ಪ್ರವೇಶಿಸಿ ಸೂಕ್ತ ತನಿಖೆ ನಡೆಸುವಂತೆ ಬಿಜೆಪಿ ಯುವ ಮೋರ್ಚಾ ನಿಯೋಗ ಮನವಿ ಮಾಡಿದೆ. ಜಿಲ್ಲಾಧಿಕಾರಿಗಳ ಮುಖಾಂತರ ಕೇಂದ್ರ ಗೃಹ ಸಚಿವರಿಗೆ ಯುವ ಮೋರ್ಚಾ ಜಿಲ್ಲಾಧ್ಯಕ್ಷ ಸಂತೋಷ್ ಕೋಟ್ಯಾನ್ ನೇತೃತ್ವದ ನಿಯೋಗ ಮನವಿ ಮಾಡಿದೆ.
ಮನವಿ ಪತ್ರದಲ್ಲಿ ಉಲ್ಲೇಖಿಸಿರುವ ಅನುಮಾನಗಳೇನು..!!??
– ಕಾಡಿನಲ್ಲಿದ್ದ ನಕ್ಸಲರಿಗೆ ಶಸ್ತ್ರಾಸ್ತ್ರ ಪೂರೈಕೆ ಮಾಡಿದೋರು ಯಾರು..!??
– ಸಂಧಾನಕಾರರಿಗೆ ನಕ್ಸಲರ ಬಗ್ಗೆ ಮೊದಲೇ ಮಾಹಿತಿ ಇತ್ತಲ್ವಾ.!??
– ನಕ್ಸಲರು ಶರಣಾಗತಿ ವೇಳೆ ಶಸ್ತ್ರಾಸ್ತ್ರಗಳನ್ನು ಯಾಕೆ ನೀಡಿಲ್ಲ..!??
– ಈ ಹಿಂದೆ ನಕ್ಸಲರ ಬಗ್ಗೆ ಮಾಹಿತಿ ನೀಡಲು ಜಿಲ್ಲಾಡಳಿತ ಹವಲು ಬಾರಿ ಮನವಿ ಮಾಡಿತ್ತು, ಮಾಹಿತಿ ನೀಡಿದವರಿಗೆ ಲಕ್ಷ ಲಕ್ಷ ಬಹುಮಾನ ಘೋಷಣೆ ಕೂಡ ಮಾಡಿತ್ತು ಆದರೂ ಮಾಹಿತಿ ನೀಡಿರಲಿಲ್ಲ ಯಾಕೆ..!??
ಇವೆಲ್ಲ ಅಂಶಗಳು ನಕ್ಸಲ್ ಶರಣಾಗತಿ ಬಗ್ಗೆ ಅನೇಕ ಸಂಶಯಗಳನ್ನು ಹುಟ್ಟುಹಾಕಿದೆ ಎಂದು ಪತ್ರದಲ್ಲಿ ಉಲ್ಲೇಖಿಸಿದೆ.
ಪೋಲೀಸ್ ಇಲಾಖೆ ಪೆನ್ನು ಹಿಡಿಯೋ ಜಾಗದಲ್ಲಿ ಗನ್ ಹಿಡಿದಿದ್ದರೇ ನಕ್ಸಲ್ ಮುಕ್ತ ರಾಜ್ಯ..!!
ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ ಯುವ ಮೋರ್ಚಾ ಜಿಲ್ಲಾಧ್ಯಕ್ಷ ಸಂತೋಷ್ ಕೋಟ್ಯಾನ್ “ದಿನದಿಂದ ದಿನಕ್ಕೆ ನಕ್ಸಲರು ಚಿಗುರುತ್ತಾ ಬಂದಿದ್ದಾರೆ. ಇದ್ದಕ್ಕಿದಂತೆ ನಕ್ಸಲರು ಶರಣಾಗತಿ ಎಂಬ ನಾಟಕ ಪ್ರಾರಂಭವಾಯಿತು. ಸರ್ಕಾರ ರಚಿಸಿದ ತಂಡದಲ್ಲಿ ಸಂಧಾನಕಾರರು ನಿರಂತರವಾಗಿ ಸಂಪರ್ಕ ಇದ್ದಿದೆ ಆದಲ್ಲಿ ಪೊಲೀಸ್ ಇಲಾಖೆಗೆ ಯಾಕೆ ಮಾಹಿತಿ ಲಭ್ಯವಾಗಿಲ್ಲ. ಪೊಲೀಸ್ ಇಲಾಖೆ ಪೆನ್ನು ಹಿಡಿಯುವ ಜಾಗದಲ್ಲಿ ಗನ್ ಹಿಡಿದಿದ್ದರೆ ಇವತ್ತು ಸರ್ಕಾರಕ್ಕೆ ಲಕ್ಷಾಂತರ ರೂಪಾಯಿ ಹಣ ಉಳಿಸಬಹುದಿತ್ತು.ನಕ್ಸಲರು ಸಮವಸ್ತ್ರವನ್ನ ಮಾತ್ರ ತ್ಯಾಗ ಮಾಡಿದ್ದಾರೆ, ಶಸ್ತ್ರಾಸ್ತ್ರ ತ್ಯಾಗ ಮಾಡಿಲ್ಲ. ಹೀಗಾಗಿ ಈ ಆರು ಜನ ನಕ್ಸಲರ ಮೇಲೆ ಎನ್.ಐ.ಎ ತನಿಖೆಯಾಗಬೇಕು” ಎಂದು ಪ್ರತಿಕ್ರಿಸಿದ್ದಾರೆ.
“ನಮ್ಮ ಮೇಲೂ ಕೇಸ್ ಇದೆ., ನಾವೂ ಶರಣಾಗುತ್ತೇವೆ..”!!
ಸಿ.ಎಂ ಎದುರು ನಕ್ಸಲರ ಶರಣಾಗತಿ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಟೀಕಿಸಿದ ಯುವ ಮೋರ್ಚಾ ಜಿಲ್ಲಾಧ್ಯಕ್ಷ ಸಂತೋಷ್ ಕೋಟ್ಯಾನ್ “ಎನ್ಐಎ ವಶಕ್ಕೆ ಪಡೆಯೋ ಭಯದಿಂದ ಚಿಕ್ಕಮಗಳೂರಿನಿಂದ ಗೌರಿ ಮಕ್ಕಳು ಕಾಲ್ಕಿತ್ತಿದ್ದಾರೆ. ನಮ್ಮ ಮೇಲೂ ಕೇಸ್ ಇದೆ,ನಾವು ಶರಣಾಗುತ್ತೇವೆ,ನಮಗೂ ಕೇಸ್ ಕ್ಲೀಯರ್ ಮಾಡಿ ಐದು ಎಕರೆ ಕೃಷಿ ಭೂಮಿ,ಹಣ ನೀಡಿ. ಇಲ್ಲವೇ ಕಾಡಿಗೆ ಹೋಗಿ ಬರುವಾ 7 ಲಕ್ಷ ದುಡ್ಡು ಸಿಗುತ್ತದೆ” ಎಂದು ತಮ್ಮ ಸಾಮಾಜಿಕ ಜಾಲತಾಣ ಖಾತೆಯಲ್ಲಿ ಬರೆದುಕೊಂಡಿದ್ದಾರೆ.
ಅನೇಕ ಮಂದಿ ಪೋಲೀಸರು,ಸಾರ್ವಜನಿಕರನ್ನು ನಕ್ಸಲರು ಕೊಂದಿದ್ದು, ಲೆಕ್ಕಕ್ಕೇ ಸಿಗದಷ್ಟು ಬರ್ಬರ ಕೃತ್ಯಗಳನ್ನು ನಕ್ಸಲರು ನಡೆಸಿದ್ದಾರೆ, ಇಂಥವರಿಗೆ ಕ್ಷಮಾದಾನ ನೀಡೋದು,ಪ್ಯಾಕೇಜ್ ನೀಡೋದು ಎಷ್ಟು ಸರಿ..,?? ಇಂತಹ ಸರಣಿ ಪ್ರಶ್ನೆಗಳನ್ನು ಉಲ್ಲೇಖಿಸಿ ಮನವಿ ಸಲ್ಲಿಸಲಾಗಿದೆ. ಶರಣಾಗತಿ ಪ್ರಕ್ರಿಯೆ ಬಗ್ಗೆ ವಿಧಾನ ಪರಿಷತ್ ಸದಸ್ಯ ಸಿ.ಟಿ ರವಿ ಹಾಗೂ ಶಾಸಕ ಸುನಿಲ್ ಕುಮಾರ್ ಕೂಡ ತಮ್ಮ ವಿರೋಧ ವ್ಯಕ್ತಪಡಿಸಿದ್ದಾರೆ.