ಜ.13ರಂದು ಭಾರತೀಪುರ ಶ್ರೀ ಬನಶಂಕರಿ ದೇವಿಗೆ ಚಂಡಿಕಾ ಯಾಗ
– ದೇವಾಲಯದಲ್ಲಿ ನಡೆಯುವ ವಿಶೇಷ ಕಾರ್ಯಕ್ರಮ
– ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಭಕ್ತಿಗೀತೆ, ಯಕ್ಷಗಾನ ಸೇವೆ
NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿ ಸಮೀಪದ ಭಾರತೀಪುರ ಶ್ರೀ ಬನಶಂಕರಿ ದೇವಿಗೆ ಚಂಡಿಕಾ ಯಾಗವನ್ನು ಜ.13ರಂದು ಆಯೋಜನೆ ಮಾಡಲಾಗಿದೆ. ಸೋಮವಾರ ಶ್ರೀ ಬನಶಂಕರೀ ಹುಣ್ಣಿಮೆಯಂದು ಶ್ರೀ ಬನಶಂಕರಿ ದೇವಿಗೆ ಚಂಡಿಕಾ ಯಾಗವನ್ನು ವೇದ ಮೂರ್ತಿ ಶ್ರೀ ರಾಮಪ್ರಸಾದ ಅಡಿಗರು ಶ್ರೀಕ್ಷೇತ್ರ ಗರಿಕೇಮಠ ಇವರ ನೇತೃತ್ವದಲ್ಲಿ ನಡೆಸಲು ನಿಶ್ಚಯಿಸಲಾಗಿದೆ. ತಾವುಗಳು ಈ ದೇವತಾಕಾರ್ಯದಲ್ಲಿ ಭಾಗವಹಿಸಿ, ಶ್ರೀ ದೇವಿಯ ಸಿರಿಮುಡಿ ಗಂಧ ಪ್ರಸಾದ ಸ್ವೀಕರಿಸಿ ದೇವಿ ಕೃಪೆಗೆ ಪಾತ್ರರಾಗಬೇಕಾಗಿ ಆಡಳಿತ ಮಂಡಳಿ ಮನವಿ ಮಾಡಿದೆ. ಅದೇ ದಿನ ಸಾಂಸ್ಕೃತಿಕ ಕಾರ್ಯಕ್ರಮ ಮಧ್ಯಾಹ್ನ 12.00 ಕ್ಕೆ ಶ್ರೀ ಉಡುಪಿ ಪುತ್ತಿಗೆ ಮಠದ ಆಸ್ಥಾನ ಗಾಯಕರು ಶ್ರೀಧರ ಉಡುಪ ಭಾರತೀಪುರ ಇವರಿಂದ ‘ಭಕ್ತಿಗೀತೆ ಮಧ್ಯಾಹ್ನ 1.00 ರಿಂದ ಮಹಾಪ್ರಸಾದ ಪೂರ್ವಕ ಅನ್ನಸಂತರ್ಪಣೆ ನೆರವೇರಲಿದೆ. ಇದೇ ದಿನ ಸಂಜೆ 5-00 ಕ್ಕೆ “ಶ್ರೀ ಸತ್ಯನಾರಾಯಣ ವ್ರತ ಪ್ರಸಾದ ವಿತರಣೆ ನಂತರ ಅನ್ನಸಂತರ್ಪಣೆ ಸಂಜೆ 6.30 ರಿಂದ 11.00 ರವರೆಗೆ ಶ್ರೀ ಬನಶಂಕರಿ ಯಕ್ಷಕಲಾ ಮಂಡಳಿ, ಶ್ರೀ ಕ್ಷೇತ್ರ ಭಾರತೀಪುರ ಇವರಿಂದ ಸಹ್ಯಾದ್ರಿ ವಾರ್ತೆ ಸಂಪಾದಕ ಬಿ. ಗಣಪತಿ ಕಥಾ ವಿರಚಿತ ಮತ್ತು ಎಂ.ಕೆ. ರಮೇಶಾಚಾರ್ಯ ಪದ್ಯ ಸಂಯೋಜನೆ ಮಾಡಿರುವ ಕಥಾ ಪ್ರಸಂಗ “ಭಾರತೀಪುರ ಶ್ರೀ ಬನಶಂಕರಿ ದೇವಿ ಮಹಾತ್ಮ” ಎಂಬ ‘ಯಕ್ಷಗಾನ’ ವನ್ನು ಆಡಿ ತೋರಿಸಲಿದ್ದಾರೆ. ಮಾನ್ಯ ಭಕ್ತಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ, ಶ್ರೀ ದೇವಿಯ ಸಿರಿ ಮುಡಿಗಂಧ ಪ್ರಸಾದ ಸ್ವೀಕರಿಸಿ, ಶ್ರೀ ದೇವಿಯ ಕೃಪೆಗೆ ಪಾತ್ರರಾಗಬೇಕಾಗಿ ಕೋರುವ ಮೂಲಕ ಶ್ರೀ ಬನಶಂಕರಿದೇವಿ ಸ್ಮರಣೆಗಳೊಂದಿಗೆ ಶ್ರೀ ಮಂಜುನಾಥತಿಮ್ಮಯ್ಯ ಮತ್ತು ಸಹೋದರರು, ಬನಶಂಕರಿ ದೇವಸ್ಥಾನ, ಭಾರತೀಪುರ ಇವರು
ಸರ್ವರಿಗೂ ಆತ್ಮೀಯ ಸುಸ್ವಾಗತವನ್ನ ಕೋರಿದ್ದಾರೆ.