ಎಳ್ಳಮಾವ್ಯಾಸೆ ಮುಗಿಯುತ್ತಿದ್ದಂತೆ ಸಂಕ್ರಾಂತಿ ಸಂಭ್ರಮ
– ಜ.14: ತೀರ್ಥಹಳ್ಳಿಯಲ್ಲಿ ಮಕರ ಸಂಕ್ರಾಂತಿ ರಥೋತ್ಸವ
– ಬೆಜ್ಜವಳ್ಳಿ, ಕುಂದಾದ್ರಿ, ಆರಗ, ಹುಂಚ ಸೇರಿದಂತೆ ಎಲ್ಲೆಡೆ ಸಂಕ್ರಾಂತಿ ಸಂಭ್ರಮಕ್ಕೆ ಸಜ್ಜು
NAMMUR EXPRESS NEWS
ತೀರ್ಥಹಳ್ಳಿ: ಎಳ್ಳಮಾವ್ಯಾಸೆ ಮುಗಿಯುತ್ತಿದ್ದಂತೆ ಸಂಕ್ರಾಂತಿ ಸಂಭ್ರಮ ಎಲ್ಲೆಡೆ ಸಜ್ಜು ಜೋರಾಗಿದೆ. ಪ್ರತಿ ವರ್ಷದಂತೆ ಈ ವರ್ಷವೂ ತೀರ್ಥಹಳ್ಳಿ ಯಲ್ಲಿ ಜನವರಿ 14ರ ಮಂಗಳವಾರ ಮಕರ ಸಂಕ್ರಾಂತಿ ರಥೋತ್ಸವವನ್ನು ನಡೆಸಲಾಗುತ್ತಿದ್ದು ಭಕ್ತಾದಿಗಳು ದಯಮಾಡಿಸಿ ಶ್ರೀ ಮುಡಿಗಂಧ ಪ್ರಸಾದ ವನ್ನು ಸ್ವೀಕರಿಸಿ ಶ್ರೀ ರಾಮೇಶ್ವರ ದೇವರ ಕೃಪೆಗೆ ಪಾತ್ರರಾಗುವಂತೆ ಮಕರ ಸಂಕ್ರಾಂತಿ ರಥೋತ್ಸವ ಸಮಿತಿಯ ಅಧ್ಯಕ್ಷರು ಮತ್ತು ಸದಸ್ಯರು ವಿನಂತಿಸಿದ್ದಾರೆ. ರಥಾರೋಹಣದ ನಂತರ ಅನ್ನ ಸಂತರ್ಪಣೆ ವ್ಯವಸ್ಥೆ ಇರುತ್ತದೆ.
ತೀರ್ಥಹಳ್ಳಿ,ಬೆಜ್ಜವಳ್ಳಿ, ಕುಂದಾದ್ರಿ, ಆರಗ, ಹುಂಚ ಸೇರಿದಂತೆ ಎಲ್ಲೆಡೆ ಸಂಕ್ರಾಂತಿ ಸಂಭ್ರಮಕ್ಕೆ ಸಜ್ಜು, ಎಲ್ಲೆಡೆ ವಿಶೇಷ ಕಾರ್ಯಕ್ರಮ ಭಕ್ತರಿಗೆ ಸ್ವಾಗತವನ್ನ ಕೋರಿದ್ದಾರೆ. ಅದ್ದೂರಿಯಾಗಿ ಸಂಕ್ರಾಂತಿ ಸಂಭ್ರಮ ಆಚರಿಸಲಾಗುವುದು. ಅನೇಕ ಪೂಜಾ ವಿಧಿವಿಧಾನಗಳು ಬೆಜ್ಜವಳ್ಳಿಯಲ್ಲಿ ಜರುಗಲಿದೆ. ಸಂಕ್ರಾಂತಿಯ ಅಂಗವಾಗಿ ಎಲ್ಲಾ ದೇವಸ್ಥಾನದಲ್ಲಿ ವಿಶೇಷ ಪೂಜೆ ಇದೆ. ಅದರಲ್ಲೂ ತೀರ್ಥಹಳ್ಳಿಯಲ್ಲಿ ರಾಮೇಶ್ವರನಿಗೆ ವಿಶೇಷ ಪೂಜೆ ಸಲ್ಲಿಸಿ ರಥ ಎಳೆಯುವ ಮೂಲಕ ಮಕರ ಸಂಕ್ರಾಂತಿ ಅದ್ದೂರಿಯಾಗಿ ಆಚರಿಸಲಾಗುವುದು. ಹುಂಚ ಮಠ, ಕುಂದಾದ್ರಿ, ಬೆಜ್ಜವಳ್ಳಿ, ಆರಗ ಸೇರಿದಂತೆ ಬಹುತೇಕ ದೇವಸ್ಥಾನಗಳಲ್ಲಿ ಸಂಕ್ರಾಂತಿ ಸಂಭ್ರಮ ಮನೆ ಮಾಡಿದೆ. ಈಗಾಗಲೇ ಸಂಕ್ರಾಂತಿಗೆ ಸಿದ್ಧತೆ ಕೂಡ ಮಾಡಿಕೊಳ್ಳಲಾಗುತ್ತಿದೆ.
ಸಂಕ್ರಾಂತಿಯ ವಿಶೇಷ ವಿಡಿಯೋಗಳು ಹಾಗೂ ಸುದ್ದಿಗಳಿಗಾಗಿ ನಮ್ಮೂರ ಎಕ್ಸಪ್ರೆಸ್ ಯೂಟ್ಯೂಬ್ ಚಾನೆಲ್ ಅನ್ನ ವೀಕ್ಷಿಸಿ subscribe ಮಾಡಿ ಮಲೆನಾಡಿನ ಎಲ್ಲರಿಗೂ ಶೇರ್ ಮಾಡಿ.