ಟಾಪ್ 5 ನ್ಯೂಸ್ ಕರ್ನಾಟಕ
– ಹಾವೇರಿ: ಎತ್ತಿನಗಾಡಿಗೆ ಬೈಕ್ ಡಿಕ್ಕಿಯಿಂದ ಸ್ಥಳದಲ್ಲೇ ತಾಯಿ, ಮಗ ಸಾವು
– ರಾಮನಗರ: ಬೈಕ್ಗೆ ಕೆಎಸ್ಆರ್ಟಿಸಿ ಬಸ್ ಡಿಕ್ಕಿಯಾಗಿ ಸ್ಥಳದಲ್ಲೇ ಇಬ್ಬರು ಮಕ್ಕಳು ಸಾವು
– ತುಮಕೂರು: ಕೆರೆಗೆ ಹಾರಿ ತಾಯಿ, ಮಗಳು ಆತ್ಮಹತ್ಯೆ!
-ಮಂಡ್ಯ : ಅಪ್ರಾಪ್ತ ವಿದ್ಯಾರ್ಥಿನಿ ಜತೆ ಪರಾರಿಯಾಗಿದ್ದ ಟ್ಯೂಷನ್ ಶಿಕ್ಷಕ..!
– ಚಾಮರಾಜನಗರ: ಭಾರೀ ದೊಡ್ಡ ಕಳ್ಳತನ ಮುಕ್ಕಾಲು ಕೆಜಿ ಚಿನ್ನ, 5.5 ಲಕ್ಷ ನಗದು, 15 ಕೆಜಿ ಬೆಳ್ಳಿ ದೋಚಿದ ಕಳ್ಳರು
NAMMUR EXPRESS NEWS
ಹಾವೇರಿ: ಜಿಲ್ಲೆಯ ಹಿರೇಕೆರೂರು ತಾಲೂಕಿನ ಕೋಡ ಗ್ರಾಮದ ಬಳಿ ನಿಲ್ಲಿಸಿದ್ದ ಎತ್ತಿನಗಾಡಿಗೆ ಬೈಕ್ ಡಿಕ್ಕಿ ಹೊಡೆದು ತಾಯಿ ಮತ್ತು ಮಗ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಸಂಭವಿಸಿದೆ. ಮೃತರನ್ನು ಹಾವೇರಿ ಜಿಲ್ಲೆಯ ಬ್ಯಾಡಗಿ ತಾಲೂಕಿನ ಕೆರೂಡಿ ಗ್ರಾಮದ ನಿವಾಸಿಗಳಾದ ಕುಸುಮಾ (56) ಮತ್ತು ಕುಮಾರ (34) ಎಂದು ಗುರುತಿಸಲಾಗಿದೆ. ಹಂಸಭಾವಿಯ ತಮ್ಮ ಸಂಬಂಧಿಕರ ಮನೆಗೆ ಹೊರಟಿದ್ದ ವೇಳೆ ದುರ್ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಘಟನಾ ಸ್ಥಳಕ್ಕೆ ಹಂಸಭಾವಿ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ಹಂಸಭಾವಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
– ರಾಮನಗರ: ಬೈಕ್ಗೆ ಕೆಎಸ್ಆರ್ಟಿಸಿ ಬಸ್ ಡಿಕ್ಕಿಯಾಗಿ ಸ್ಥಳದಲ್ಲೇ ಇಬ್ಬರು ಮಕ್ಕಳು ಸಾವು
ರಾಮನಗರ: ಕೆಎಸ್ಆರ್ಟಿಸಿ ಬಸ್ ಹಾಗೂ ಬೈಕ್ ನಡುವೆ ಭೀಕರ ಅಪಘಾತ ಸಂಭವಿಸಿದ್ದು, ಎರಡು ಮಕ್ಕಳು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ಇಬ್ಬರು ಗಂಭೀರವಾಗಿ ಗಾಯಗೊಂಡಿರುವ ಘಟನೆ ರಾಮನಗರ ತಾಲೂಕಿನ ಅಚ್ಚಲುದೊಡ್ಡಿ ಗ್ರಾಮದ ಬಳಿ ನಡೆದಿದೆ. ಮೃತ ಮಕ್ಕಳನ್ನು ತಮಿಳುನಾಡಿನ ಡೆಂಕಣಿಕೋಟೆಯ ಬೋಕಸಂದ್ರ ಗ್ರಾಮದ ಭೈರಪ್ಪ ಎಂಬವರ ಮಕ್ಕಳಾದ ಪ್ರದೀಪ್ (5), ಭವ್ಯ (3) ಎಂದು ಗುರುತಿಸಲಾಗಿದೆ. ಕಳೆದ ಒಂದು ವರ್ಷದ ಹಿಂದೆ ತಮಿಳುನಾಡಿನಿಂದ ಇಬ್ಬರು ಮಕ್ಕಳು ಹಾಗೂ ಕುಟುಂಬಸ್ಥರೊಡನೆ ಇಲ್ಲಿಗೆ ಬಂದು ವಾಸವಾಗಿದ್ದು, ಇಂದು ಬೆಳಗ್ಗೆ ಗೋವಿಂದ ಹಾಗೂ ಮಧು ಎಂಬವರ ಜೊತೆ ಇಬ್ಬರು ಮಕ್ಕಳನ್ನು ಬೈಕ್ನಲ್ಲಿ ಸಂಬಂಧಿಕರ ಮನೆಗೆ ಕಳುಹಿಸಿದ್ದಾರೆ. ಈ ವೇಳೆ ಅಚ್ಚಲುದೊಡ್ಡಿ ಗ್ರಾಮದ ರಸ್ತೆ ತಿರುವಿನಲ್ಲಿ ಬೈಕ್ಗೆ ಬಸ್ ಡಿಕ್ಕಿಯಾಗಿ ಇಬ್ಬರು ಮಕ್ಕಳು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಇನ್ನಿಬ್ಬರ ಸ್ಥಿತಿ ಚಿಂತಾಜನಕವಾಗಿದ್ದು, ಚಿಕಿತ್ಸೆ ಮುಂದುವರೆದಿದೆ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದು, ರಾಮನಗರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
– ತುಮಕೂರು: ಕೆರೆಗೆ ಹಾರಿ ತಾಯಿ, ಮಗಳು ಆತ್ಮಹತ್ಯೆ!
ತುಮಕೂರು: ಮಾನಸಿಕ ಖಿನ್ನತೆಗೆ ಒಳಗಾಗಿದ್ದ ತಾಯಿ ಹಾಗೂ ಮಗಳು ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನ ಅದಲಗೆರೆ ಗ್ರಾಮದಲ್ಲಿ ನಡೆದಿದೆ. ಆತ್ಮಹತ್ಯೆ ಮಾಡಿಕೊಂಡ ತಾಯಿ, ಮಗಳನ್ನು ವಿರುಪಾಕ್ಷಿಪುರದ ಪ್ರೇಮಕುಮಾರಿ (50) ಮತ್ತು ಪೂರ್ಣಿಮಾ (30) ಎಂದು ಗುರುತಿಸಲಾಗಿದೆ. ಮಾನಸಿಕ ಖಿನ್ನತೆಗೆ ಒಳಗಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದ್ದು, ಘಟನೆ ಕುರಿತಂತೆ ಚೇಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
– ಮಂಡ್ಯ : ಅಪ್ರಾಪ್ತ ವಿದ್ಯಾರ್ಥಿನಿ ಜತೆ ಪರಾರಿಯಾಗಿದ್ದ ಟ್ಯೂಷನ್ ಶಿಕ್ಷಕ..!
ಮಂಡ್ಯ : ಅಪ್ರಾಪ್ತ ವಿದ್ಯಾರ್ಥಿನಿಯೊಂದಿಗೆ ಪರಾರಿಯಾಗಿದ್ದ ಟ್ಯೂಷನ್ ಶಿಕ್ಷಕನನ್ನು ಮಂಡ್ಯದಲ್ಲಿ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ವಿದ್ಯಾರ್ಥಿನಿಯ ಪೋಷಕರು ನೀಡಿದ ದೂರಿನ ಆಧಾರದ ಮೇಲೆ ಮಂಡ್ಯದಲ್ಲಿ ಟ್ಯೂಷನ್ ಶಿಕ್ಷಕ ಅಭಿಷೇಕ್ ಗೌಡ ವಿರುದ್ಧ ಅಪಹರಣ ಪ್ರಕರಣ ದಾಖಲಾಗಿತ್ತು. ಆರೋಪಿಯು ವಿವಾಹಿತನಾಗಿದ್ದು, ಎರಡು ವರ್ಷದ ಮಗುವಿದೆ ಎಂದು ಪೊಲೀಸ್ ಮೂಲಗಳು ಬಹಿರಂಗಪಡಿಸಿವೆ. ನವೆಂಬರ್ 23 ರಂದು ಅಪ್ರಾಪ್ತ ಬಾಲಕಿಯನ್ನು ಅಪಹರಿಸಲಾಗಿತ್ತು. ಜೆಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು ಎಂದು ಉಪ ಪೊಲೀಸ್ ಆಯುಕ್ತ (ಬೆಂಗಳೂರು ದಕ್ಷಿಣ ವಿಭಾಗ) ಲೋಕೇಶ್ ಬಿಜೆ ತಿಳಿಸಿದ್ದಾರೆ. ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನಿಂದ ಜನವರಿ 5 ರಂದು ಬಾಲಕಿಯನ್ನು ರಕ್ಷಿಸಲಾಗಿತ್ತು. ಆಕೆಯನ್ನು ಆಕೆ ಪ್ರತಿ ದಿನ ಟ್ಯೂಷನ್ಗೆ ತೆರಳುತ್ತಿದ್ದ ಟ್ಯೂಷನ್ ಶಿಕ್ಷಕನೇ ಅಪಹರಿಸಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿಯು 25 ವರ್ಷ ವಯಸ್ಸಿನವನಾಗಿದ್ದು, ಆತನನ್ನು ಬಂಧಿಸಲಾಗಿದೆ. ಆತನ ವಿರುದ್ಧ ಅಪಹರಣ ಮತ್ತು ಅತ್ಯಾಚಾರದ ಆರೋಪ ಹೊರಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
– ಚಾಮರಾಜನಗರ: ಭಾರೀ ಕಳ್ಳತನ ಮುಕ್ಕಾಲು ಕೆಜಿ ಚಿನ್ನ, 5.5 ಲಕ್ಷ ನಗದು, 15 ಕೆಜಿ ಬೆಳ್ಳಿ ದೋಚಿದ ಕಳ್ಳರು!
ಚಾಮರಾಜನಗರ : ಚಾಮರಾಜನಗರದಲ್ಲಿ ಸ್ವಲ್ಪ ದಿನ ಸೈಲೆಂಟಾಗಿದ್ದ ಚೋರರು ಈಗ ಮತ್ತೆ ಆಕ್ಟೀವ್ ಆಗಿದ್ದಾರೆ. ಚಾಮರಾಜನಗರ ಜಿಲ್ಲೆಯ ಇತಿಹಾಸದಲ್ಲೇ ಕಂಡು ಕೇಳರಿಯದಂತ ಕಳ್ಳತನ ನಡೆದು ಹೋಗಿದೆ. ಕಳ್ಳತನ ವಿಚಾರ ಕೇಳಿ ಖಾಕಿ ಪಡೆಯೆ ಒಂದು ಕ್ಷಣ ದಂಗಾಗಿದೆ. ಅಷ್ಟಕ್ಕೂ ಯಾವ ಪ್ರಮಾಣದ ಕಳ್ಳತನ ನಡೆದಿದೆ ಅಂತೀರಾ. ನಡು ರಾತ್ರಿಯಲ್ಲಿ ಮನೆ ಮುಂದೆ ನಿಂತಿರೋ ಪೊಲೀಸರ ವಾಹನ.. ಮನೆ ಒಳಗೆ ಅದೇನನ್ನೊ ತಡಕಾಡುತ್ತಿರೋ ಹಿರಿಯ ಅಧಿಕಾರಿಗಳು.. ಮುರಿದು ಹೋಗಿರೋ ಬೀರು ಕಪಾಟನ್ನ ತೋರಿಸುತ್ತ ಪೊಲೀಸರಿಗೆ ಮಾಹಿತಿ ನೀಡುತ್ತಿರುವ ಮನೆಯ ಮಾಲಕಿ. ಇತಿಹಾಸದಲ್ಲೇ ಕಂಡು ಕೇಳರಿಯದ ದೊಡ್ಡ ಮನೆಗಳ್ಳತನ ನಡೆದು ಹೋಗಿದೆ. ನಗರದ ಸಿದ್ದಾರ್ಥ ಬಡಾವಣೆಯ ಪ್ರಜಾಪಿತ ಬ್ರಹ್ಮಕುಮಾರಿ ಸಂಸ್ಥೆಯ ಕಚೇರಿ ಎದುರೇ ಇರುವ ಶ್ರೀನಿವಾಸ್ ಕುಮಾರ್ ಎಂಬುವರ ಮನೆ ಬಾಗಿಲು ಮೀಟಿ ನುಗ್ಗಿರುವ ಚೋರರು ಬರೋಬ್ಬರಿ ಮುಕ್ಕಾಲು ಕೆಜಿ ಗೋಲ್ಡ್ 15 ಕೆಜಿ ಬೆಳ್ಳಿ, ಹಾಗೂ 5.5ಲಕ್ಷ ಹಾರ್ಡ್ ಕ್ಯಾಶ್ ಒಂದು ಟ್ಯಾಬ್ ಹಾಗು ಒಂದು ಮೊಬೈಲ್ ದೋಚಿ ಗಾಯಬ್ ಆಗಿದ್ದಾರೆ. ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದ್ದು ಬೆರಳಚ್ಚು ತಜ್ಞರು ಎಫ್.ಎಸ್.ಎಲ್ ತಂಡ ಖದೀಮರು ಬಿಟ್ಟು ಹೋದ ಗುರುತು ಪತ್ತೆ ಹಚ್ಚುವಲ್ಲಿ ನಿರತರಾಗಿದ್ದಾರೆ. ಆಗಿದ್ದಿಷ್ಟೇ ಶ್ರೀನಿವಾಸ್ ಕುಮಾರ್ ಅವರ ತಂದೆ ವಾರ್ಷಿಕ ತಿಥಿಯ ಕಾರ್ಯವಿತ್ತು ಹಾಗಾಗಿ ಶ್ರೀನಿವಾಸ್ ಕುಮಾರ್ ಹಾಗೂ ಪತ್ನಿ ರೇಣುಕಾ ಮೂರು ದಿನಗಳ ಹಿಂದೆ ಬೆಂಗಳೂರಿಗೆ ತೆರಳಿದ್ದಾರೆ. ಮಕ್ಕಳು ಬೆಂಗಳೂರಿನಲ್ಲೆ ಸೆಟಲ್ ಆಗಿರೊ ಕಾರಣ ಗಂಡ ಹೆಂಡ್ತಿ ಚಾಮರಾಜನಗರದಲ್ಲೇ ಇದ್ರು ಗುರುವಾರ ಬೆಳಗ್ಗೆ ಬೆಂಗಳೂರಿಗೆ ಹೋಗಿ ತಂದೆಯ ಕಾರ್ಯ ಮಾಡಿದ್ದಾರೆ. ಮೂರು ದಿನಗಳಿಂದ ಮನೆಯಲ್ಲಿ ಯಾರು ಇಲ್ಲದನ್ನು ಗಮನಿಸಿದ ಚೋರರು ತಡ ರಾತ್ರಿ ಮನೆಗೆ ನುಗ್ಗಿ ಚಿನ್ನಾಭರಣ ಹಾಗೂ ನಗದನ್ನ ದೋಚಿ ಎಸ್ಕೇಪ್ ಆಗಿದ್ದಾರೆ. ಚಾಮರಾಜನಗರ ಇತಿಹಾಸದಲ್ಲೇ ಇಷ್ಟು ದೊಡ್ಡ ಕಳ್ಳತನ ಪ್ರಕರಣ ಇದಾಗಿದ್ದು, ಸ್ವತಃ ಪೊಲೀಸರೆ ಹೌ ಹಾರಿದ್ದಾರೆ. ಅದು ಜನನಿಬಿಡ ಪ್ರದೇಶದಲ್ಲೇ ಮನೆಗೆ ಕನ್ನಾ ಹಾಕಿರುವುದು ಪೊಲೀಸರ ನಿದ್ದೆಗೆಡಿಸಿದೆ. ಸದ್ಯ ಪ್ರಕರಣ ದಾಖಲಿಸಿಕೊಂಡಿರುವ ಚಾಮರಾಜನಗರ ಪಟ್ಟಣ ಠಾಣೆ ಪೊಲೀಸರು ಚೋರರ ಬಂಧನಕ್ಕಾಗಿ ಬಲೆ ಬೀಸಿದ್ದಾರೆ.