ಇಂದು ಮೇಗರವಳ್ಳಿ ಶಾಲಾ “ಚಿಣ್ಣರ ಕಲರವ ಶಾಲಾ ವಾರ್ಷಿಕೋತ್ಸವ”!
– ಸ. ಹಿ. ಪ್ರಾ. ಶಾಲೆ ಮೇಗರವಳ್ಳಿ ಶಾಲಾ ಆವರಣದಲ್ಲಿ ಆಯೋಜನೆ
– ಪುಟಾಣಿ ಮುದ್ದು ಮಕ್ಕಳನ್ನು ಹರಸಿ ಪ್ರೋತ್ಸಾಹಿಸಿ: ಸರ್ವರಿಗೂ ಸ್ವಾಗತ
NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿ ತಾಲ್ಲೂಕು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮೇಗರವಳ್ಳಿ ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮವನ್ನು, ಶಾಲಾ ಆವರಣದಲ್ಲಿ ಜ. 10ನೇ ಶುಕ್ರವಾರ ಸಂಜೆ ಗಂಟೆ 5-00ಕ್ಕೆ ಆಯೋಜಿಸಲಾಗಿದೆ. ಹತ್ತು ಹಲವು ಕಾರ್ಯಕ್ರಮದ ಜೊತೆಗೆ “ಚಿಣ್ಣರ ಕಲರವ ಶಾಲಾ ವಾರ್ಷಿಕೋತ್ಸವ” ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಕಾರ್ಯಕ್ರಮಕ್ಕೆ ತಾವೆಲ್ಲರೂ ಆಗಮಿಸಿ, ಪುಟಾಣಿ ಮುದ್ದು ಮಕ್ಕಳನ್ನು ಹರಸಿ ಪ್ರೋತ್ಸಾಹಿಸಬೇಕೆಂದು ಈ ಮೂಲಕ ವಿನಂತಿಸಿಕೊಳ್ಳಲಾಗಿದೆ.