ನಾಡಿಲ್ಲೆಡೆ ತಿರುಪತಿ ವೈಕುಂಠ ಏಕಾದಶಿ ವೈಭವ!
– ಮಲೆನಾಡ ತಿರುಪತಿ ಎಂದೇ ಪ್ರಸಿದ್ಧಿ ಪಡೆದಿರುವ ಅರುಣಗಿರಿ ಶ್ರೀಲಕ್ಷ್ಮೀವೆಂಕಟರಮಣ!
– ತಿರುಮಲ ಶ್ರೀಲಕ್ಷ್ಮೀವೆಂಕಟರಮಣ ದೇವಸ್ಥಾನದಲ್ಲಿ ಅದ್ದೂರಿ ಕಾರ್ಯಕ್ರಮ
– ಉತ್ತರ ದ್ವಾರದ ಮೂಲಕ ಶ್ರೀದೇವರ ದರ್ಶನ ಪಡೆಯುತ್ತಿರುವ ಜನ
NAMMUR EXPRESS NEWS
ತೀರ್ಥಹಳ್ಳಿ: ಮಲೆನಾಡ ತಿರುಪತಿ ಎಂದೇ ಪ್ರಸಿದ್ಧಿ ಪಡೆದಿರುವ ಅರುಣಗಿರಿ ಶ್ರೀಲಕ್ಷ್ಮೀವೆಂಕಟರಮಣ ದೇವಸ್ಥಾನದಲ್ಲಿ ಅದ್ದೂರಿ ವೈಕುಂಠ ಏಕಾದಶಿ ನಡೆಯುತ್ತಿದೆ.
ಜನರು ಉತ್ತರ ಭಾಗದಿಂದ ಪ್ರವೇಶ ಪಡೆದು ದೇವರ ದರ್ಶನವನ್ನು ಭಕ್ತಾಭಿಮಾನಿಗಳು ಪಡೆಯುತ್ತಿದ್ದಾರೆ. ಕಾರ್ಯಕ್ರಮಕ್ಕೆ ಸಹಸ್ರಾರು ಭಕ್ತಾಭಿಮಾಭಿಮಾನಿಗಳು ಆಗಮಿಸುತ್ತಿದ್ದು, ವೈಭವದ ಪೂಜೆ, ಸೇವೆಗಳು ನೆರವೇರಿಸಲಾಗುತ್ತಿದೆ.
– ತಿರುಮಲ ಶ್ರೀಲಕ್ಷ್ಮೀವೆಂಕಟರಮಣ ದೇವಸ್ಥಾನದಲ್ಲಿ ಅದ್ದೂರಿ ಆಚರಣೆ
ತಿರುಮಲ ಶ್ರೀ ಲಕ್ಷ್ಮೀವೆಂಕಟರಮಣ ದೇವಸ್ಥಾನ, ರಥಬೀದಿ ತೀರ್ಥಹಳ್ಳಿಯಲ್ಲಿ ಜನವರಿ 10 ಶುಕ್ರವಾರದಂದು ಬೆಳಿಗ್ಗೆ 6-00 ಗಂಟೆಯಿಂದ ವೈಕುಂಠ ಏಕಾದಶಿ ವಿಶೇಷ ಆಚರಣೆ ಅದ್ದೂರಿಯಾಗಿ ನಡೆಯುತ್ತಿದ್ದು, ರಾತ್ರಿ 8-00ರ ತನಕ ಪುಷ್ಯ ಶುದ್ಧ ಏಕಾದಶಿಯಂದು ತಿರುಮಲ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ವೈಕುಂಠ ಏಕಾದಶಿ ವಿಶೇಷ ಆಚರಣೆ ನಡೆಯಲಿದೆ. ಕಾರ್ಯಕ್ರಮದ ವಿಶೇಷತೆಯಾಗಿ ದೇವಸ್ಥಾನದ ಉತ್ತರ ದ್ವಾರದಿಂದ ಪ್ರವೇಶಿಸಿ ಶ್ರೀ ಸ್ವಾಮಿಯ ದರ್ಶನ ಪಡೆಯುವ ಭಕ್ತರ ಸಕಲ ಇಷ್ಟಾರ್ಥಗಳು ಫಲಿಸುವುದು ಎಂಬ ಅಚಲವಾದ ನಂಬಿಕೆಯನ್ನು ಹೊಂದಿದೆ. ಈ ಕಾರಣಕ್ಕೆ ಶ್ರೀನಿವಾಸನ ಮೂಲಸ್ಥಾನವಾದ ತಿರುಪತಿಯಲ್ಲಿಯೂ ಈ ದಿನ ವಿಶೇಷವಾಗಿ ಉತ್ತರ ದ್ವಾರ ತೆರೆದು ದರ್ಶನ ಭಾಗ್ಯವನ್ನು ಕಲ್ಪಿಸಲಾಗಿದೆ. ಈ ದಿನವನ್ನು ವಿಶೇಷ ಪರ್ವ ದಿನವಾಗಿ ಆಚರಿಸುವವುದಕ್ಕಾಗಿ, ಪುಷ್ಯ ಶುದ್ಧ ಏಕಾದಶಿಯಾದ ಇವತ್ತಿನ ದಿನ, ತಿರುಮಲ ಶ್ರೀಲಕ್ಷ್ಮೀವೆಂಕಟರಮಣ ದೇವಸ್ಥಾನದಲ್ಲಿ ವೈಕುಂಠ ಏಕಾದಶಿ ವಿಶೇಷ ಆಚರಣೆಯನ್ನು ಆಚರಿಸಲಾಗುತ್ತಿದೆ. ಶ್ರೀ ದೇವಸ್ಥಾನದ ಉತ್ತರ ಬಾಗಿಲಿನಿಂದ ಪ್ರವೇಶಿಸಿ “ಭೂವೈಕುಂಠ ತಿರುಪತಿ ತಿರುಮಲದಿಂದ” ಆಗಮಿಸಿ, ತೀರ್ಥಹಳ್ಳಿಯಲ್ಲಿ ಪ್ರತಿಷ್ಠಾಪಿತನಾಗಿರುವ ಶ್ರೀ ಸ್ವಾಮಿಯ ದರ್ಶನಕ್ಕೆ ಅವಕಾಶ ಕಲ್ಪಿಸಲಾಗುತ್ತಿದೆ ದರ್ಶನಕ್ಕೆ ಭಗವದ್ಭಕ್ತಾದಿಗಳು ಸಕುಟುಂಬ ಸಹಿತರಾಗಿ ಆಗಮಿಸಿ ಶ್ರೀ ಸ್ವಾಮಿಯ ದರ್ಶನ ಪಡೆಯುತ್ತಿದ್ದಾರೆ. ಹಾಗೂ ಕಾರ್ಯಕ್ರಮದಲ್ಲಿ ಪರಮಾತ್ಮನಿಗೆ ಪ್ರಿಯವಾದ ಲಡ್ಡುಪ್ರಸಾದ ವಿತರಿಸಲಾಗಿದೆ. ವೆಂಕಟರಮಣ ದೇವಸ್ಥಾನ ರಥಬೀದಿ ತೀರ್ಥಹಳ್ಳಿಯಲ್ಲಿ ಪ್ರತಿವರ್ಷದಂತೆ ಈ ವರ್ಷವೂ ವೈಕುಂಠ ಏಕಾದಶಿ ಆಚರಣೆ ಹಾಗೂ ದೇವಸ್ಥಾನದಲ್ಲಿ ವಿವಿಧ ವಿಶೇಷ ಸೇವೆಗಳು ಅದ್ದೂರಿಯಾಗಿ ನಡೆಯುತ್ತಿದೆ. ಏಕಾದಶಿಯಂದು ಯಾರು ಉಪವಾಸ ಮತ್ತು ದೇವರ ದರ್ಶನ ಮಾಡುತ್ತಾರೋ ಅವರಿಗೆ 23 ಏಕಾದಶಿಗಳ ಪುಣ್ಯಫಲ ಆ ಒಂದೇ ಏಕಾದಶಿಯಲ್ಲಿ ಸಿಗುತ್ತದೆ ಎಂದು ಹೇಳಲಾಗಿದೆ. ಜೊತೆಗೆ ದೇವಸ್ಥಾನದಲ್ಲಿ “ಉತ್ತರ ದ್ವಾರ”ದ ಮೂಲಕ ಶ್ರೀ ದೇವರ ದರ್ಶನಕ್ಕೆ ವಿಶೇಷ ಅವಕಾಶ ಕಲ್ಪಿಸಲಾಗುತ್ತಿದೆ. ಭಕ್ತಾದಿಗಳು ಅತೀ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಶ್ರೀ ದೇವರ ದರ್ಶನ ಪಡೆದು, ಶ್ರೀದೇವರ ಕೃಪೆಗೆ ಪಾತ್ರರಾಗಬೇಕಾಗುತ್ತಿದ್ದು, ತಿರುಪತಿ ವೈಕುಂಠ ಏಕಾದಶಿಯನ್ನು ವೈಭವದಿಂದ ಆಚರಿಸುತ್ತಿದ್ದಾರೆ.