ಡಿ ಕೆ ಶಿ ಸಿಎಂ ಆಗೋದು ಫಿಕ್ಸ್
– ವಿನಯ್ ಗುರೂಜಿ ಸ್ಫೋಟಕ ಭವಿಷ್ಯ
– ರಾಜಕಾರಣದಲ್ಲಿ ಸಂಚಲನ ಸೃಷ್ಟಿಸಿದ ಹೇಳಿಕೆ
NAMMUR EXPRESS NEWS
ಬೆಂಗಳೂರು: ಅವಧೂತ ವಿನಯ್ ಗುರೂಜಿ ಅವರು ನುಡಿದಿರುವ ಭವಿಷ್ಯ ರಾಜ್ಯ ರಾಜಕಾರಣದಲ್ಲಿ ಸಂಚಲನ ಸೃಷ್ಟಿಸಿದೆ. ರಾಜ್ಯ ರಾಜಕಾರಣದ ಬೆಳವಣಿಗೆಗಳ ಬಗ್ಗೆ ಭವಿಷ್ಯ ನುಡಿದಿರುವ ವಿನಯ್ ಗುರೂಜಿ, ಡಿ.ಕೆ ಶಿವಕುಮಾರ್ ಸಿಎಂ ಆಗುವುದು ನಿಶ್ಚಿತ ಎಂದು ಹೇಳಿ ಅಚ್ಚರಿ ಮೂಡಿಸಿದ್ದಾರೆ. ತಮ್ಮ ಚಿಕ್ಕಮಗಳೂರಿನ ಗೌರಿಗದ್ದೆ ಆಶ್ರಮದ ವಿನಯ್ ಗುರೂಜಿ ಭವಿಷ್ಯ ನುಡಿದಿದ್ದಾರೆ. ಡಿಕೆ ಶಿವಕುಮಾರ್ ಅವರಿಗೆ ಅಜ್ಜಯ್ಯನ ಮೇಲೆ ಭಕ್ತಿಯಿದೆ. ಅವರ ಅನುಗ್ರಹದಿಂದ ಸಿಎಂ ಸ್ಥಾನ ಸಿಗಲಿ ಎಂದಿದ್ದಾರೆ. ಕರ್ನಾಟಕ ಮಾತ್ರವಲ್ಲದೇ ದೇಶದ ಹಲವು ರಾಜ್ಯಗಳಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಡಿಕೆಶಿ ತುಂಬಾ ಕೆಲಸ ಮಾಡಿದ್ದಾರೆ. ಡಿಕೆ ನಾಟಕೀಯತೆ ಇಲ್ಲದ ರಾಜಕಾರಣಿ. ಅವರಿಗೆ ನಾಟಕ ಮಾಡಲು ಬರುವುದಿಲ್ಲ ಎಂದು ಡಿಸಿಎಂ ಡಿಕೆ ಪರ ಭವಿಷ್ಯ ನುಡಿದಿದ್ದಾರೆ. ಈ ಮಧ್ಯೆ ನಾವು ನುಡಿದ ಭವಿಷ್ಯದಂತೆ ಡಿಕೆಶಿ ಸಿಎಂ ಆದ್ರೆ ನಾವು ಅತ್ಯಂತ ಖುಷಿ ಪಡುತ್ತೇವೆ ಜೊತೆಗೆ ಆದಷ್ಟು ಬೇಗ ಅವರು ಸಿಎಂ ಆಗಲಿ ಎಂದು ಈ ವೈಕುಂಠ ಏಕಾದಶಿ ದಿನ ನಾವು ಪ್ರಾರ್ಥನೆ ಮಾಡುತ್ತೇನೆ ಎಂದು ಹೇಳಿದ್ದಾರೆ.