ಹಿಂದೂ ಕಾರ್ಯಕರ್ತರನ್ನೇ ಟಾರ್ಗೆಟ್ ಮಾಡಿ ಪ್ರಕರಣ ದಾಖಲು.!!
– ಉದ್ದೇಶ ಪೂರ್ವಕವಾಗಿ ಹಿಂದೂ ಕಾರ್ಯಕರ್ತನ ಮೇಲೆ ಪ್ರಕರಣ
– ಅಸ್ಸಾಂ ಕಾರ್ಮಿಕರ ಮೇಲೆ ನೆಪ ಮಾತ್ರಕ್ಕೆ ಪ್ರಕರಣ,ಯಾವುದೇ ಕ್ರಮವಿಲ್ಲ
– ಕೇಸ್ ವಾಪಾಸ್ ಪಡೆಯದಿದ್ದರೆ ಪ್ರತಿಭಟನೆಯ ಎಚ್ಚರಿಕೆ
NAMMUR EXPRESS NEWS
ಬಾಳೆಹೊನ್ನೂರು: ಕಳೆದ ವಾರ ಹೇರೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಚುನಾವಣೆ ವೇಳೆ ಬಿಜೆಪಿ ಕಾಂಗ್ರೆಸ್ ಕಾರ್ಯಕರ್ತರ ನಡುವೆ ಮಾರಾಮಾರಿ ನಡೆದು ದೂರು ದಾಖಲಾದ ಬಳಿಕ ಪೊಲೀಸರು ಹಿಂದೂ ಸಂಘಟನೆಯ ಕಾರ್ಯಕರ್ತರನ್ನೇ ಗುರಿಯಾಗಿಸಿಕೊಂಡು ವಶಕ್ಕೆ ಪಡೆಯುತ್ತಿದ್ದಾರೆ ಎಂದು ವಿಶ್ವ ಹಿಂದೂ ಪರಿಷದ್ ಜಿಲ್ಲಾ ಸಂಯೋಜಕ್ ಅಜಿತ್ ಕುಲಾಲ್ ಆರೋಪಿಸಿದ್ದಾರೆ. ಹಿಂದೂ ಸಂಘಟನೆಯ ಕಾರ್ಯಕರ್ತನಿಗೆ ಅವಾಚ್ಯವಾಗಿ ನಿಂದಿಸಿ, ಹಲ್ಲೆ ನಡೆಸಿದ ದೂರು ದಾಖಲಾಗಿ ವಾರ ಕಳೆದಿದ್ದರೂ ಪೊಲೀಸರು ಈವರೆಗೂ ಘಟನೆಯ ಆರೋಪಿಗಳಾದ ಸ್ಟೇಟ್ ಬ್ಯಾಂಕ್ ಸಿಬ್ಬಂದಿ ಅಮಿತ್ ಪವನ್, ಷರೀಪ್ ರಾಜಾರೋಷವಾಗಿ ಓಡಾಡುತ್ತಿದ್ದರೂ ಅವರನ್ನು ಬಂಧಿಸಿ ಕ್ರಮ ಕೈಗೊಂಡಿಲ್ಲ ಎಂದು ದೂರಿದ್ದಾರೆ. ಆದರೆ ಹಿಂದೂ ಸಂಘಟನೆಯ ಕಾರ್ಯಕರ್ತರ ಮನೆಗೆ ಮಧ್ಯರಾತ್ರಿಯೇ ಪೊಲೀಸರು ನುಗ್ಗಿ ಬಾಗಿಲಿಗೆ ಒದ್ದು ವಿಚಾರಣೆಗೆ ಕರೆದೊಯ್ಯತ್ತಿದ್ದಾರೆ. ಇದು ನಮ್ಮ ಕಾರ್ಯಕರ್ತರನ್ನು ಬೆದರಿಸುವ ತಂತ್ರವಾಗಿದೆ. ಚುನಾವಣೆ ಫಲಿತಾಂಶ ಪ್ರಕಟವಾದ ತಕ್ಷಣ ಬಿಜೆಪಿ ಹಾಗೂ ಹಿಂದೂ ಸಂಘಟನೆಯ ಕಾರ್ಯಕರ್ತರು ಸಂಭ್ರಮ ಆಚರಿಸಿದ್ದಾರೆ. ಅದರಲ್ಲಿ ತಪ್ಪೇನು ಇಲ್ಲ, ಹೇರೂರಿಗೆ ಸಂಬಂಧಪಡದ ಜಯಪುರದ ಫಣಿರಾಜ್, ಮಕ್ಕಿಕೊಪ್ಪದ ರವಿಚಂದ್ರ ಎಂಬುವರು ಸೇರಿದಂತೆ ಹಲವಾರು ಘಟನೆ ನಡೆದ ವೇಳೆ ಹಾಜರಿದ್ದು ಅನಗತ್ಯವಾಗಿ ಪರಿಸ್ಥಿತಿಯನ್ನು ಪ್ರಕ್ಷುಬ್ಧಗೊಳಿಸಿದ್ದಾರೆ.ಇವರನ್ನು ಪೊಲೀಸರು ವಿಚಾರಣೆಗೆ ಒಳಪಡಿಸಿಲ್ಲ. ಅಮಾಯಕ ಯುವಕರನ್ನು ವಶಕ್ಕೆ ಪಡೆಯುವಂತೆ ಪೊಲೀಸರ ಮೇಲೆ ಒತ್ತಡ ಹೇರಿ ಬೆದರಿಕೆ ಹಾಕಿಸಲು ಶಾಸಕ ಟಿ.ಡಿ.ರಾಜೇಗೌಡ ಹಾಗೂ ತಾಲ್ಲೂಕು ಘಟಕದ ಅಧ್ಯಕ್ಷ ಕುಕ್ಕೊಡಿಗೆ ರವೀಂದ್ರ ಅವರೇ ನೇರವಾಗಿ ಕಾರಣ. ಪೊಲೀಸರು ಬಜರಂಗದಳದ ಮಾಜಿ ಜಿಲ್ಲಾ ಸಂಚಾಲಕ ಶಶಾಂಕ್ ಅವರನ್ನು ಒಪ್ಪಿಸುವಂತೆ ಕೇಳುತ್ತಿದ್ದಾರೆ. ಈ ಮೂಲಕ ಕಾಂಗ್ರೆಸ್ ಮುಖಂಡರು ಬಜರಂಗದಳ ಸಂಘಟನೆಯನ್ನು ದುರ್ಬಲಗೊಳಿಸಲು ಮುಂದಾಗಿದ್ದಾರೆ ಎಂದಿದ್ದಾರೆ.
ಹಲ್ಲೆ ನಡೆಸಿದ ಅಕ್ರಮ ಬಾಂಗ್ಲಾ ಕಾರ್ಮಿಕರ ಮೇಲೆ ಕ್ರಮವಿಲ್ಲ..!!?
ಕಳೆದ ವಾರ ಜಯಪುರ ಬಳಿಯ ಕಾಫೀ ತೋಟದ ಮಾಲೀಕ ಹಾಗೂ ಗ್ರಾ.ಪಂ ಸದಸ್ಯ ಕೀರ್ತಿರಾಜ್ ಮೇಲೆಯೇ ಕಲ್ಲೂ ತೂರಿ,ಮಾರಣಾಂತಿಕ ಹಲ್ಲೆ ನಡೆಸಿದ ಅಕ್ರಮ ಬಾಂಗ್ಲಾ ಕಾರ್ಮಿಕರ ಮೇಲೆ ಯಾವುದೇ ಕ್ರಮವಾಗಿಲ್ಲ ಅವರ ಮೇಲೆ ಕೇವಲ ನೆಪಕ್ಕಷ್ಟೇ ಕೇಸ್ ದಾಖಲಿಸಲಾಗಿದೆ ಆದರೆ ಹೆರೂರು ಪ್ರಕರಣದಲ್ಲಿ ದುರುದ್ದೇಶದಿಂದ ಬಜರಂಗದಳ ಮಾಜಿ ಜಿಲ್ಲಾ ಸಂಚಾಲಕ ಶಶಾಂಕ್ ಗೌಡ ಹೆರೂರು ಮೇಲೆ ಇಲ್ಲಸಲ್ಲದ ಪ್ರಕರಣ ದಾಖಲಿಸಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಈ ಕೂಡಲೇ ಕೇಸ್ ಹಿಂಪಡೆಯದಿದ್ದರೆ ಪ್ರತಿಭಟನೆಯ ಎಚ್ಚರಿಕೆ ನೀಡಿದರು.