ಕೋಣಂದೂರು ಬನ ಶಂಕರಿ ದೇಗುಲದಲ್ಲಿ ಜ.13ಕ್ಕೆ ಜಾತ್ರೆ!
– ಜ.12ಕ್ಕೆ ಸತ್ಯನಾರಾಯಣ ಪೂಜೆ, ಸಂಜೆ ವಾಯ್ಸ್ ಆಫ್ ಮಲೆನಾಡು’ ಮತ್ತು ಕರಾವಳಿ ಸಂಗೀತ ಸ್ಪರ್ಧೆ, ಸಿಡಿಮದ್ದು ಪ್ರದರ್ಶನ
– ದೇವಸ್ಥಾನದಲ್ಲಿ ರಥೋತ್ಸವ: ಚಿಣ್ಣರ ಸಂತೆ, ಸರ್ವರಿಗೂ ಸ್ವಾಗತ
NAMMUR EXPRESS NEWS
ತೀರ್ಥಹಳ್ಳಿ/ ಕೋಣಂದೂರು: ಕೋಣಂದೂರು ಶ್ರೀ ಮಹಾಗಣಪತಿ ಶ್ರೀ ಬನಶಂಕರೀ ದೇವಸ್ಥಾನದಲ್ಲಿ ಜಾತ್ರಾ ಸಂಭ್ರಮ ಮನೆ ಮಾಡಿದೆ. ಜ.7ರಿಂದ ಆರಂಭವಾದ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಕೋಣಂದೂರು ಸೇರಿ ಸುತ್ತಮುತ್ತಲಿನ ಭಕ್ತರು ಭಾಗಿಯಾಗಿದ್ದಾರೆ. ಜ. 12 ಮತ್ತು ಜ. 13 ರಂದು ಸಾಮೂಹಿಕ ಸತ್ಯನಾರಾಯಣ ವ್ರತ ಹಾಗೂ ದುರ್ಗಾ ಹೋಮ ವಿವಿಧ ಕಾರ್ಯಕ್ರಮ ನಡೆಯಲಿದೆ. ಜ.12ಕ್ಕೆ ವಾಯ್ಸ್ ಆಫ್ ಮಲೆನಾಡು’ ಮತ್ತು ಕರಾವಳಿ -2025 ಆಡಿಷನ್ ಸೀಸನ್ -1 ಕಾರ್ಯಕ್ರಮ ಕೂಡ ಇದೇ ವೇಳೆ ನಡೆಯಲಿದೆ.
ಜ.12ಕ್ಕೆ ಸಾಮೂಹಿಕ ಸತ್ಯನಾರಾಯಣ ವ್ರತ
ಶ್ರೀ ಮಹಾಗಣಪತಿ ಶ್ರೀ ಬನಶಂಕರೀ ದೇವಸ್ಥಾನ ಕೋಣಂದೂರು ತೀರ್ಥಹಳ್ಳಿ(ತಾ) ಇವರ ಜ. 12 ರಂದು ಭಾನುವಾರ ಬೆಳಿಗ್ಗೆ 10-00ರಿಂದ ಸಾಮೂಹಿಕ ಸತ್ಯನಾರಾಯಣ ವ್ರತ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಸಂಜೆ ವಾಯ್ಸ್ ಆಫ್ ಮಲೆನಾಡು ಮತ್ತು ಕರಾವಳಿ, ಸಿಡಿಮದ್ದು ಪ್ರದರ್ಶನ ಗಾನಾಂಜಲಿ ಕೋಣಂದೂರು ತೀರ್ಥಹಳ್ಳಿ ಇವರ ಪ್ರಸ್ತುತಿಯಲ್ಲಿ ವಾಯ್ಸ್ ಆಫ್ ಮಲೆನಾಡು ಮತ್ತು ಕರಾವಳಿ -2025 ಆಡಿಷನ್ ಸೀಸನ್ -1ಕಾರ್ಯಕ್ರಮ ಕೂಡ ಇರುತ್ತದೆ. ಸಂಜೆ 7-00 ಕ್ಕೆ ಆಕರ್ಷಕ ಸಿಡಿಮದ್ದುಗಳ ಪ್ರದರ್ಶನ ಇರುತ್ತದೆ.
ದೇವಸ್ಥಾನದಲ್ಲಿ ರಥೋತ್ಸವ: ಚಿಣ್ಣರ ಸಂತೆ!
ದಿನಾಂಕ 13-01-2025 ಸೋಮವಾರ ಬೆಳಿಗ್ಗೆ 10-00 ಗಂಟೆಗೆ ಶ್ರೀ ದುರ್ಗಾ ಹೋಮ ಮತ್ತು 11-30 ರಿಂದ ಪ್ರಾಂಗಣ ರಥೋತ್ಸವ ನಂತರ “ಅನ್ನಸಂತರ್ಪಣೆ’ ಕೂಡ ನಡೆಯಲಿದೆ. ಇದೇ ದಿನ ಬೆಳಿಗ್ಗೆ 10-00 ಗಂಟೆಯಿಂದ ಸ್ವಾಮಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ ಕೋಣಂದೂರು ಶಾಲೆಯ ಮಕ್ಕಳಿಂದ ”ಚಿಣ್ಣರ ಸಂತೆ” ಇರುತ್ತದೆ. ಈ ಎಲ್ಲಾ ಕಾರ್ಯಕ್ರಮಗಳಿಗೂ ಸರ್ವರೂ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮಗಳನ್ನು ಯಶಸ್ವಿಗೊಳಿಸಬೇಕಾಗಿ ವಿನಂತಿ ಸರ್ವರಿಗೂ ಕೂಡ ಆದರದ ಸ್ವಾಗತವನ್ನು ಅಧ್ಯಕ್ಷರು ಮತ್ತು ಸದಸ್ಯರು ಆಡಳಿತ ಮಂಡಳಿ ಶ್ರೀ ಮಹಾಗಣಪತಿ ಶ್ರೀ ಬನಶಂಕರಿ ಸೇವಾಟ್ರಸ್ಟ್, ಕೋಣಂದೂರು -9448158481 ಇವರು ಕೊರಿದ್ದಾರೆ.