ತುಂಗಾ ಕಾಲೇಜಿನ ಬಳಿ ಸರಣಿ ಅಪಘಾತ!
– ಓರ್ವ ಬೈಕ್ ಸವಾರನಿಂದ 3 ವಾಹನಗಳ ನಡುವೆ ಅಪಘಾತ
– ಬೈಕ್ ಸವಾರನ ಸ್ಥಿತಿ ಗಂಭೀರ: ಮಣಿಪಾಲಕ್ಕೆ ರವಾನೆ
NAMMUR EXPRESS NEWS
ತೀರ್ಥಹಳ್ಳಿ: ತುಂಗಾ ಕಾಲೇಜಿನ ಬಳಿಯ ತುಡ್ಕಿ ಎರಡನೇ ತಿರುವಿನ ಬಳಿ ಬೈಕ್ ಮತ್ತು ಮೂರು ವಾಹನಗಳ ನಡುವೆ ಅಪಘಾತ ಸಂಭವಿಸಿರುವ ಘಟನೆ ಶನಿವಾರ ಸಂಜೆ ನಡೆದಿದೆ.ಮಂಡಗದ್ದೆ15ನೇ ಮೈಲಕಲ್ಲು ಶರತ್ ಎಂಬ ಯುವಕ ಹೋಂಡಾ ಶೈನ್ ಬೈಕ್ ಶಿವಮೊಗ್ಗದಿಂದ ಉಡುಪಿಗೆ ತೆರಳುತ್ತಿದ್ದ ಸರಕಾರಿ ಬಸ್ಸಿಗೆ ಮೊದಲು ಗುದ್ದಿ ನಂತರ ಅಯ್ಯಪ್ಪ ಸ್ವಾಮಿ ಮಾಲಾಧಾರಿಗಳ ವಾಹನಕ್ಕೆ ಡಿಕ್ಕಿ ಹೊಡೆಸಿದ್ದಾನೆ. ನಂತರ ಕಾರೊಂದಕ್ಕೆ ಡಿಕ್ಕಿ ಹೊಡೆದಿದ್ದಾನೆ. ತಕ್ಷಣ ಸ್ಥಳೀಯರ ಸಹಾಯದಲ್ಲಿ ಖಾಸಗಿ ವಾಹನದಲ್ಲಿ ಮಣಿಪಾಲಿಗೆ ಕಳಿಸಲಾಗಿದೆ ತೀರ್ಥಹಳ್ಳಿ ಪೊಲೀಸ್ ಠಾಣೆಯಲ್ಲಿ ವಾಹನಗಳ ಮೇಲೆ ಕೇಸು ದಾಖಲಾಗಿದೆ. ಆ ತಿರುವಿನಲ್ಲಿ ಇದೇ ಮೊದಲ ಬಾರಿಯ ಏನಲ್ಲ ಸಾಕಷ್ಟು ಬಾರಿ ಇಂತಹ ಅಪಘಾತಗಳು ನಡೆಯುತ್ತಿರುತ್ತವೆ. ಆ ತಿರುವಿನ ಬಳಿ ಎರಡು ಪೊಲೀಸ್ ಬ್ಯಾರಿಖೆಡ್ ಅವಶ್ಯಕತೆ ಇದೆ, ಎಂದು ಸ್ಥಳೀಯರು ಸಾಕಷ್ಟು ಬಾರಿ ಪೊಲೀಸರ ಗಮನಕ್ಕೆ ತಂದಿದ್ದರೂ ಅಲ್ಲಿ ಬ್ಯಾರಿಕೆಡ್ ಹಾಕದಿರುವುದ ಇರುವುದೇ ಅಪಘಾತಕ್ಕೆ ಮೂಲ ಕಾರಣ ಎಂದು ಸ್ಥಳೀಯರು ತಿಳಿಸುತ್ತಿದ್ದಾರೆ. ಇನ್ನಾದರೂ ಪೋಲಿಸ್ ಇಲಾಖೆಯು ಆ ತಿರುವಿನಲ್ಲಿ ಎರಡು ಪೊಲೀಸ್ ಬ್ಯಾರಿಕೆಡ್ ಹಾಕಬೇಕು ಎಂದು ಸ್ಥಳೀಯರ ಅಗ್ರಹವಾಗಿದೆ.