- ಸಂತೆ ನಡೆದ ಬಳಿಕ ಕೊಳೆತು ನಾರುವ ತರಕಾರಿ, ಕಸ ಕಡ್ಡಿ
- ಸಾರ್ವಜನಿಕರಲ್ಲಿ ಕಾಯಿಲೆ ಹರಡುವ ಭೀತಿ: ಪಟ್ಟಣ ಪಂಚಾಯತ್ ನಿರ್ಲಕ್ಷ್ಯ
NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿಯ ಪಟ್ಟಣ ಪಂಚಾಯಿತಿಯ ನಿರ್ಲಕ್ಷ್ಯ ದಿಂದ ತರಕಾರಿ ಮಾರುಕಟ್ಟೆಯಲ್ಲಿ ಸೋಮವಾರ ಸಂತೆ ನಡೆದ ಬಳಿಕ ಅ ಪ್ರದೇಶದಲ್ಲಿ ಕೊಳೆತುನಾರುವ ತರಕಾರಿಗಳು ಹಾಗೂ ಎಲ್ಲಿ ಬೇಕಂದರೆ ಅಲ್ಲಿ ಕಸ ಕಡ್ಡಿಗಳು ಗೋಣಿಚೀಲಗಳು ಬಿದ್ದಿರುವುದು ಇದೀಗ ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ.
ಸೋಮವಾರ ಸಂತೆಗೆ ತೀರ್ಥಹಳ್ಳಿ ತಾಲೂಕಿನ ಮೂಲೆ ಮೂಲೆಯಿಂದ ಜನ ಬರುತ್ತಾರೆ. ಆದರೆ ಸಂತೆ ಮಾರ್ಕೆಟ್ ಕೊಳಕು ಇದೀಗ ಅನೇಕರ ಅಸಹನೆಗೆ ಕಾರಣವಾಗಿದೆ. ಸಂತೆ ಮಾರ್ಕೆಟ್ ಕಸ ವಿಲೇವಾರಿ ಸರಿಯಾಗಿ ಮಾಡದೇ ಇರುವುದು, ಪಟ್ಟಣ ಪಂಚಾಯಿತಿ ಅಧಿಕಾರಿಗಳು, ಆಡಳಿತ ವರ್ಗದವರು ಸದಸ್ಯರು ನಿರ್ಲಕ್ಷ್ಯ ವಹಿಸುತ್ತಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಜನರು ಓಡಾಡುವ ಪ್ರದೇಶದಲ್ಲಿ ಕೊಳೆತು ನಾರುವ ತರಕಾರಿಗಳು ಹಾಗೂ ಕಸ ಕಡ್ಡಿ ಇರುವುದರಿಂದ ಜನರಿಗೆ ಕಾಯಿಲೆಗಳು ಹರಡುವ ಭೀತಿ ಹೆಚ್ಚಾಗಿದೆ. ಈ ಮಾರ್ಕೆಟ್ ಪ್ರದೇಶವನ್ನು ಸ್ವಚ್ಛಗೊಳಿಸಿ ಜನರ ಆರೋಗ್ಯವನ್ನು ಕಾಪಾಡುವಂತ ಕರ್ತವ್ಯ ಪಟ್ಟಣ ಪಂಚಾಯಿತಿಯ ಮೇಲೆ ಇದೆ. ಇದನ್ನು ಸ್ವಚ್ಛಗೊಳಿಸುವಂತೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.