- ಹೂವು, ಹಣ್ಣು ಖರೀದಿಸಲು ಮುಗಿಬಿದ್ದ ಜನರು
- ಮಾರಿಕಾಂಬ ದೇವಸ್ಥಾನದಲ್ಲಿ ಬಾಗಿನ ಕೊಡುವುದರ ಮೂಲಕ ವರಮಹಾಲಕ್ಷ್ಮಿ ಪೂಜೆ ಆಚರಣೆ
NAMMUR EXPRESS NEWS
ತೀರ್ಥಹಳ್ಳಿ: ಶ್ರಾವಣ ಮಾಸದ ಎರಡನೇ ಶುಕ್ರವಾರ ಆ.5 ರಂದು ವರಮಹಾಲಕ್ಷ್ಮಿ ಹಬ್ಬಕ್ಕೆ ಜನತೆ ಸಿದ್ದರಾಗಿದ್ದಾರೆ.
ತೀರ್ಥಹಳ್ಳಿಯ ಮಾರಿಕಾಂಬಾ ದೇವಸ್ಥಾನದಲ್ಲಿ ಲಕ್ಷ್ಮಿ ಪೂಜೆ ಅದ್ದೂರಿಯಾಗಿ ನಡೆಯಲಿದ್ದು ಮುತ್ತೈದೆಯರಿಗೆ, ಬಾಗಿನ ಕೊಡುವುದರ ಮೂಲಕ ಪೂಜೆಯನ್ನು ಆಚರಿಸುತ್ತಾರೆ ಹಾಗೂ ವರಮಹಾಲಕ್ಷ್ಮಿ ಹಬ್ಬದ ದಿನ ಮನೆ ಮನೆಗಳಲ್ಲಿಯೂ ವರಮಹಾಲಕ್ಷ್ಮಿ ಪೂಜೆ ಜರುಗಲಿದೆ. ಈ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಮಹಿಳೆಯರು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ.
ಮನೆಯಲ್ಲಿ ಪ್ರತಿಷ್ಠಾಪನೆ!: ಮನೆಯಲ್ಲಿ ವರಮಹಾಲಕ್ಷ್ಮಿಯನ್ನು ಪ್ರತಿಷ್ಠಾಪಿಸಿ ಪೂಜಿಸಲು ಮಹಿಳೆಯರು ಕಾತುರರಾಗಿದ್ದು ಪಟ್ಟಣದಲ್ಲಿ ಮಳೆಯನ್ನು ಲೆಕ್ಕಿಸದೆ ಜನರ ಖರೀದಿ ಜೋರಾಗಿದೆ. ವರಮಹಾಲಕ್ಷ್ಮಿ ಮೂರ್ತಿಯನ್ನಿಟ್ಟು ಸೀರೆ ತಾಳಿ ಬಂಗಾರದ ಆಭರಣ ಹೂಗಳಿಂದ ಲಕ್ಷ್ಮಿಯನ್ನು ಅಲಂಕರಿಸುತ್ತಾರೆ, ನೈವೇದ್ಯ ಮಾಡಿ ಮುತ್ತೈದೆಯರನ್ನು ಮನೆಗೆ ಕರೆದು ಅರಿಶಿಣ ಕುಂಕುಮ ಕೊಡುವುದರ ಮೂಲಕ ಮುತ್ತೈದೆಯರಲ್ಲಿ ಲಕ್ಷ್ಮಿ ರೂಪವನ್ನು ಕಾಣಲಾಗುತ್ತದೆ.
ಅಂಗಡಿಗಳಲ್ಲಿ ವ್ಯಾಪಾರ ಜೋರು: ವರ ಮಹಾಲಕ್ಹ್ಮೀ ಪೂಜೆ ಹಿನ್ನೆಲೆ ಬಂಗಾರದ ಅಂಗಡಿಗಳು, ಬಟ್ಟೆ ಅಂಗಡಿಗಳು, ದಿನಸಿ ಅಂಗಡಿಗಳಲ್ಲಿ ವ್ಯಾಪಾರ ಹೆಚ್ಚಿತ್ತು.
ಪ್ರಸಿದ್ಧ ನ್ಯಾಶಿನಲ್ ಗೋಲ್ಡ್ ಅಂಡ್ ಡೈಮಂಡ್ಸ್, ಗಾಯತ್ರಿ, ಅನ್ನಪೂರ್ಣ ಜ್ಯುವೆಲ್ಲರಿ, ಬಟ್ಟೆ ಅಂಗಡಿಗಳಾದ ಸತ್ಯನಾಥ, ಗಜಾನನ ಸೇರಿದಂತೆ ಹಲವೆಡೆ ಮಹಿಳೆಯರು ಖರೀದಿ ಮಾಡುತ್ತಿದ್ದರು.
ಹಬ್ಬದ ಆಕರ್ಷಣೆ ಟಿ ಎಸ್ ಟಿ ಹೈಪರ್ ಮಾರ್ಟ್!
ತೀರ್ಥಹಳ್ಳಿಯಲ್ಲಿ ಈ ಬಾರಿ ಹಬ್ಬದ ವಿಶೇಷ ಆಕರ್ಷಣೆ ಆಗುಂಬೆ ಬಸ್ ನಿಲ್ದಾಣ ಬಳಿ ಇರುವ ಟಿ ಎಸ್ ಟಿ ಹೈಪರ್ ಮಾರ್ಟ್. ಎಲ್ಲಾ ವಸ್ತು ಒಂದೇ ಕಡೆ ಖರೀದಿ ಜತೆಗೆ ಮಕ್ಕಳಿಗೆ ಹೊಸ ಹೊಸ ಗೇಮ್.