- ಡಿ ಸಿ ಎಸ್ಪಿಯಿಂದ ಗಣಪತಿ ಮಂಡಳಿಯವರ ಜೊತೆ ಪೂರ್ವಭಾವಿ ಸಭೆ
NAMMUR EXPRESS NEWS
ಶಿವಮೊಗ್ಗ : ನಗರ ಮತ್ತು ಗ್ರಾಮಾಂತರ ಭಾಗಗಳಲ್ಲಿ ಈ ಬಾರಿ ಗಣಪತಿ ಹಬ್ಬವನ್ನು ಅದ್ದೂರಿಯಾಗಿ ನಡೆಸಲು ತೀರ್ಮಾನಿಸಲಾಗಿದೆ, ಈ ಬಗ್ಗೆ ಭಾನುವಾರ ಜಿಲ್ಲಾಧಿಕಾರಿ ಡಾ. ಸಿಲ್ವಮಣಿ ಎಸ್ ಪಿ ಡಾ. ಬಿ ಎಂ ಲಕ್ಷ್ಮಿ ಪ್ರಸಾದ್ ಮತ್ತು ಹೆಚ್ಚುವರಿ ಎಸ್ಪಿ ವಿಕ್ರಮ್ ಅಮಾತೆ ಹಾಗೂ ಡಿವೈಎಸ್ಪಿ ಬಾಲರಾಜ್ ನೇತೃತ್ವದಲ್ಲಿ 150ಕ್ಕೂ ಹೆಚ್ಚು ಗಣಪತಿ ಮಂಡಳಿ ಯವರ ಜೊತೆ ಗಣಪತಿ ಹಬ್ಬದ ಪೂರ್ವಭಾವಿ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಯಿತು.
2018-19ರ ಸಂದರ್ಭದಲ್ಲಿ ಗಣಪತಿ ಕೂರಿಸಿದ ರೀತಿಯಲ್ಲಿಯೇ ಅವಕಾಶ ನೀಡಲಾಗುವುದು ಆದರೆ ನಿಗದಿತ ವಿಸರ್ಜನೆ ಮೆರವಣಿಗೆಯ ಮಾರ್ಗ ಮೊದಲೇ ನೀಡಬೇಕು, ಕೊನೆಗಳಿಗೆಯಲ್ಲಿ ಮಾರ್ಗ ಬದಲಾಯಿಸಬಾರದು ಎಂದ ಅವರು, ಗಣಪತಿ ಸಮಿತಿಯವರು ಹಬ್ಬದ ಬಗ್ಗೆ ಮಾಹಿತಿ ಕೊಟ್ಟಿಲ್ಲ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಅವಕಾಶ ನೀಡಲಾಗುವುದು ಎಂದು ಎಸ್ಪಿ ಡಾ. ಬಿ ಎಂ ಲಕ್ಷ್ಮಿ ಪ್ರಸಾದ್ ಹೇಳಿದರು.
ನಗರದಲ್ಲಿ ಇದುವರೆಗೂ ಗಣಪತಿಯ ಎತ್ತರದ ಪ್ರಶ್ನೆ ಬಂದಿಲ್ಲ ಆದರೂ ವಿದ್ಯುತ್ ತಂತಿಗೆ ತಾಗದಂತೆ ಎಚ್ಚರ ವಹಿಸಬೇಕು ಎಂದು ಸೂಚಿಸಿದರು, ಸ್ಥಳೀಯ ಅಧಿಕಾರಿಗಳು ತಮ್ಮೊಂದಿಗೆ ಸಂಪರ್ಕದಲ್ಲಿ ಇರುತ್ತಾರೆ ಮೈಕ್ ಗೆ ಸುಪ್ರೀಂ ಕೋರ್ಟ್ ನಿಯಮ ಪಾಲಿಸಬೇಕಿದೆ, ಹಾಗಾಗಿ ಡಿಜೆ ಹೊರತುಪಡಿಸಿ ಗಣಪತಿ ಕೂರಿಸುವ ಮತ್ತು ವಿಸರ್ಜಿಸುವ ಬಗ್ಗೆ ಇಲಾಖೆಯಿಂದ ಯಾವುದೇ ನಿರ್ಬಂಧ ವಿಲ್ಲ ಎಂದರು.
2019 ರಲ್ಲಿ ಡಿಜೆಗೆ ಅವಕಾಶವಿತ್ತು ಸುಪ್ರೀಂ ಕೋರ್ಟ್ ಆದೇಶದ ಪ್ರಕಾರ ರಾತ್ರಿ 10 ರಿಂದ ಬೆಳಗ್ಗೆ 6 ರವರೆಗೆ ಹೆಚ್ಚು ಶಬ್ದಕ್ಕೆ ನಿರ್ಬಂಧಗಳಿಗೆ, ಆದರೆ ಸರ್ಕಾರ ಡಿಜೆಗೆ ಅಥವಾ ಸೌಂಡ್ ಸಿಸ್ಟಮ್ ಗೆ ಅವಕಾಶ ಮಾಡಿಕೊಟ್ಟರೆ ಸ್ಥಳೀಯವಾಗಿಯೂ ಅವಕಾಶ ನೀಡಲಾಗುವುದು ಎಂದು ಜಿಲ್ಲಾಧಿಕಾರಿ ಡಾ. ಆರ್ ಸೆಲ್ವಮಣಿ ತಿಳಿಸಿದರು.
ಮೆಸ್ಕಾಂ ಅಗ್ನಿಶಾಮಕ ದಳ ಪಾಲಿಕೆ ಮತ್ತು ಪೊಲೀಸ್ ಇಲಾಖೆಯ ಸಿಂಗಲ್ ವಿಂಡೋದಲ್ಲಿ ಗಣಪತಿ ಪ್ರತಿಷ್ಠಾಪನೆಗೆ ಅವಕಾಶವಿದೆ, ಮೆರವಣಿಗೆ ಹೋಗುವ ದಾರಿಗೆ ಸಿಸಿಟಿವಿ ಕ್ಯಾಮೆರಾ ಅಳವಡಿಸಲಾಗುವುದು, ಪೊಲೀಸ್ ಬಂದೋಬಸ್ತ್ ನೀಡಲಾಗುವುದು ಆದರೆ ವಿಸರ್ಜನೆಯ ದಾರಿ ಸರಿಯಾಗಿ ತಿಳಿಸಬೇಕು ಕೊನೆಯ ಹಂತದಲ್ಲಿ ಬದಲಾವಣೆ ಮಾಡಬಾರದು ಎಂದು ಸೂಚಿಸಿದರು.