ತೀರ್ಥಹಳ್ಳಿಯ ಕಲಾವಿದ ಬಿ.ಡಿ. ಜಗದೀಶ್ ಅವರ ಸಾಧನೆ
– ಕೆ.ಸಿ.ರೆಡ್ಡಿ, ಡಾ.ಅಂಬರೀಶ್ರವರ ಕಂಚಿನ ಪ್ರತಿಮೆ
– ಶೀಘ್ರದಲ್ಲಿ ಲೋಕಾರ್ಪಣೆಗೆ ಸಿದ್ಧತೆ
NAMMUR EXPRESS NEWS
ನಾಡಿನ ಖ್ಯಾತ ಕಲಾವಿದರಾದ ತೀರ್ಥಹಳ್ಳಿ ಮೂಲದ ಬಿ.ಡಿ.ಜಗದೀಶ್ ಬಾಣಂಕಿ ರಚಿಸಿರುವ ಕೆ.ಸಿ.ರೆಡ್ಡಿ ಮತ್ತು ಡಾ.ಅಂಬರೀಶ್ ಅವರ ಎರಡು ಕಂಚಿನ ಪ್ರತಿಮೆಯನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಗಣ್ಯರ ಸಮ್ಮುಖದಲ್ಲಿ ಶೀಘ್ರದಲ್ಲಿ ನಾಡಿಗೆ ಸಮರ್ಪಿಸಲಿದ್ದಾರೆ.
ವಿಧಾನಸೌಧದ ಆವರಣದಲ್ಲಿ ನಾಡಿನ ಪ್ರಥಮ ಮುಖ್ಯಮಂತ್ರಿ ಕೆ.ಸಿ.ರೆಡ್ಡಿ ಅವರ ಪ್ರತಿಮೆಯು 14 ಅಡಿ ಎತ್ತರವಿದ್ದು ಮೂರು ಟನ್ ತೂಕವನ್ನು ಹೊಂದಿದೆ. ವಿಧಾನಸೌಧದ ಒಂದು ಭಾಗದಲ್ಲಿ ತೀರ್ಥಹಳ್ಳಿಯವರೇ ಆದ ಸಮಾಜವಾದಿ ಶಾಂತವೇರಿ ಗೋಪಾಲಗೌಡರ ವೃತ್ತವನ್ನು ಹೊಂದಿದ್ದು ಇನ್ನೊಂದು ಭಾಗದಲ್ಲಿ ಬಾಣಂಕಿ ಬಿ.ಡಿ.ಜಗದೀಶ್ ಮಾಡಿರುವ ಕೆ.ಸಿ.ರೆಡ್ಡಿ ಅವರ ಕಂಚಿನ ಪ್ರತಿಮೆ ಶಾಶ್ವತವಾಗಿ ನಿರ್ಮಾಣವಾಗಲಿದೆ. ಇದು ತೀರ್ಥಹಳ್ಳಿಗೆ ಹೆಮ್ಮೆ ತರುವಂತಾಗಿದೆ.
ಡಾ.ಅಂಬರೀಶ್ ಅವರ ಪ್ರತಿಮೆ 16 ಅಡಿ ಎತ್ತರವಿದ್ದು ಕಂಠೀರವ ಸ್ಟುಡಿಯೋದಲ್ಲಿ ಅಂಬರೀಶ್ರವರ ಸಮಾಧಿಯ ಪಕ್ಕದಲ್ಲಿ ಸ್ಥಾಪಿಸಲಾಗುವುದು. ಇದರ ತೂಕ 3 1/2 ಟನ್ ತೂಕವಿದ್ದು ಜಗದೀಶ್ ಅವರ ಕಲಾ ಸಾಮರ್ಥ್ಯದಿಂದ ನಿರ್ಮಿಸಿದ್ದಾರೆ. ಈ ಪ್ರತಿಮೆಯನ್ನು ಸರ್ಕಾರದ ಮುತುವರ್ಜಿಯಿಂದ ಕೈಗೆ ಎತ್ತಿಕೊಂಡಿದ್ದು ಈ 2 ಪ್ರತಿಮೆಗಳು ಶೀಘ್ರದಲ್ಲಿಯೇ ಲೋಕಾರ್ಪಣೆ ಆಗಲಿದ್ದು ತೀರ್ಥಹಳ್ಳಿ ತಾಲ್ಲೂಕಿನ ಕಲಾವಿದ ಈ ಪ್ರತಿಮೆ ನಿರ್ಮಾಣ ಮಾಡಲಿದ್ದು ತೀರ್ಥಹಳ್ಳಿ ಪ್ರತಿಭೆಯನ್ನು ರಾಷ್ಟ್ರಕ್ಕೆ ಸಾಬೀತು ಪಡಿಸಲಿದ್ದಾರೆ. ಇದು ತೀರ್ಥಹಳ್ಳಿಗೆ ಹೆಮ್ಮೆ ತರುವಂತ ವಿಷಯ. ಈ ಹಿಂದೆ ಹಲವಾರು ಪ್ರಶಸ್ತಿಯನ್ನು ಜಗದೀಶ್ ಪಡೆದಿದ್ದು ವಿಶ್ವ ಮಟ್ಟದಲ್ಲಿ ಇವರ ಕಲಾಕೃತಿಗಳಿಗೆ ಮಾನ್ಯತೆ ಸಿಕ್ಕಿದೆ.