2023ನೇ ಸಾಲಿನ ಸಾರ್ವತ್ರಿಕ ರಜೆಗಳೆಷ್ಟು?
- ರಜೆ ದಿನಗಳ ಪಟ್ಟಿ ಪ್ರಕಟಿಸಿದ ರಾಜ್ಯ ಸರಕಾರ
NAMMUR EXPRESS NEWS
ಬೆಂಗಳೂರು: ಕರ್ನಾಟಕ ಸರಕಾರವು 2023ನೇ ಸಾಲಿಗೆ ಮಂಜೂರು ಮಾಡಿರುವ ಸಾರ್ವತ್ರಿಕ ಹಾಗೂ ಪರಿಮಿತ ರಜಾ ದಿನಗಳ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ತಿಂಗಳ ಎಲ್ಲಾ ಎರಡನೇ ಶನಿವಾರ, ನಾಲ್ಕನೇ ಶನಿವಾರ ಮತ್ತು ಪ್ರತಿ ಭಾನುವಾರಗಳನ್ನು ಹೊರತುಪಡಿಸಿ 19 ದಿನಗಳ ರಜೆಯನ್ನು ಘೋಷಿಸಲಾಗಿದೆ.
ಈ ಸಾರ್ವತ್ರಿಕ ರಜಾ ದಿನಗಳಲ್ಲಿ ರಾಜ್ಯಾದ್ಯಾಂತ ಸರಕಾರಿ ಕಚೇರಿಗಳು ಮುಚ್ಚಲ್ಪಡುತ್ತವೆ. ಮುಸಲ್ಮಾನ ಭಾಂದವರ ಹಬ್ಬಗಳು ನಿಗದಿತ ದಿನಾಂಕದಂದು ಆಚರಣೆ ಮಾಡದೇ ಇದ್ದಲ್ಲಿ ಬದಲಾದ ದಿನಗಳಂದು ರಜೆಯನ್ನು ಘೋಷಿಸಬಹುದಾಗಿದೆ. ಶಿಕ್ಷಣ ಇಲಾಖೆಗೆ ಸಂಬಂಧಿಸಿದಂತೆ ಪ್ರತ್ಯೇಕ ರಜಾದಿನಗಳ ಪಟ್ಟಿಯನ್ನು ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತರು ಪ್ರಕಟಿಸಲಿದ್ದಾರೆ. ಸಾರ್ವತ್ರಿಕ ರಜಾ ದಿನಗಳ ಜೊತೆಗೆ ರಾಜ್ಯ ಸರ್ಕಾರಿ ನೌಕರರು ಎರಡು ದಿವಸಗಳಿಗೆ ಮೀರದಂತೆ 2023 ನೇ ವರ್ಷದಲ್ಲಿ ಅಧಿಸೂಚನೆ ಒಂದರ ಅನುಬಂಧದಲ್ಲಿ ತಿಳಿಸಿರುವ ಪರಿಮಿತ ರಜೆಯನ್ನು ಮುಂಚಿತವಾಗಿ ಅನುಮತಿ ಪಡೆದು ಉಪಯೋಗಿಸಿಕೊಳ್ಳಬಹುದಾಗಿದೆ. ಸಾಂದರ್ಭಿಕ ರಜೆಯನ್ನು ಮಂಜೂರು ಮಾಡಲು ಅಧಿಕಾರವುಳ್ಳ ಅಧಿಕಾರಿಗಳು ಪ್ರಸ್ತುತ ಅನುಮತಿಗೆ ಮಂಜೂರಾತಿ ನೀಡತಕ್ಕದ್ದು.
2023ನೇ ಸಾಲಿಗೆ ಕರ್ನಾಟಕ ಸರ್ಕಾರ ಮಂಜೂರು ಮಾಡಿರುವ ಸಾರ್ವತ್ರಿಕ ರಜಾದಿನಗಳ ಪಟ್ಟಿ ಈ ಕೆಳಗಿನಂತಿವೆ;
26-01-2023 ರ ಗುರುವಾರ ಗಣರಾಜ್ಯೋತ್ಸವ
18-02-2023 ರ ಶನಿವಾರ ಮಹಾ ಶಿವರಾತ್ರಿ
22-03-2023 ರ ಬುಧವಾರ ಯುಗಾದಿ ಹಬ್ಬ
03-04-2023 ರ ಸೋಮವಾರ ಮಹಾವೀರ ಜಯಂತಿ
07-04-2023 ರ ಶುಕ್ರವಾರ ಗುಡ್ ಫ್ರೈಡೆ
14-04-2023 ರ ಶುಕ್ರವಾರ ಡಾ. ಬಿ.ಆರ್ ಅಂಬೆಡ್ಕರ್ 01-05-2023 ರ ಸೋಮವಾರ ಕಾರ್ಮಿಕ ದಿನಾಚರಣೆ
29-06-2023 ರ ಗುರುವಾರ ಬಕ್ರೀದ್
29-07-2023 ರ ಶನಿವಾರ ಮೊಹರಂ ಕಡೇ ದಿನ
15-08-2023 ರ ಮಂಗಳವಾರ ಸ್ವಾತಂತ್ರ್ಯ ದಿನಾಚರಣೆ 18-09-2023 ರ ಸೋಮವಾರ ವರಸಿದ್ದಿ ವಿನಾಯಕ ವ್ರತ
28-09-2023 ರ ಗುರುವಾರ ಈದ್ ಮಿಲಾದ್
02-10-2023 ರ ಸೋಮವಾರ ಗಾಂಧಿ ಜಯಂತಿ
23-10-2023 ರ ಸೋಮವಾರ ಮಹಾನವಮಿ ಆಯುಧಪೂಜೆ
24-10-2023 ರ ಮಂಗಳವಾರ ವಿಜಯದಶಮಿ
01-11-2023 ರ ಬುಧವಾರ ಕನ್ನಡ ರಾಜ್ಯೋತ್ಸವ
14-11-2023 ರ ಮಂಗಳವಾರ ಬಲಿಪಾಡ್ಯಮಿ ದೀಪಾವಳಿ
30-11-2023 ರ ಗುರುವಾರ ಕನಕದಾಸ ಜಯಂತಿ 24-12-2023 ರ ಸೋಮವಾರ ಕ್ರಿಸ್ಮಸ್
ಪ್ರಶಕ್ತ ವರ್ಷಕ್ಕೆ ವಿದಾಯ ಹೇಳಿ ಹೊಸ ವರ್ಷವನ್ನು ಸ್ವಾಗತಿಸಿಕೊಳ್ಳುವ ತಯಾರಿ ಆರಂಭಗೊಂಡಿದ್ದು, ಕರ್ನಾಟಕ ಸರ್ಕಾರವು 2023ನೇ ಸಾಲಿನ ಸಾರ್ವತ್ರಿಕ ರಜಾ ದಿನಗಳ ಪಟ್ಟಿ ಬಿಡುಗಡೆಯಾಗಿದ್ದು, 19 ದಿನಗಳ ಸಾರ್ವತ್ರಿಕ ರಜಾದಿನಗಳನ್ನು ಹೊರತುಪಡಿಸಿ ಭಾನುವಾರದ ರಜೆಯೂ ಈ ಪಟ್ಟಿಯಲ್ಲಿ ಸೇರಿಕೊಳ್ಳಲಿದೆ
ಭಾನುವಾರಗಳಲ್ಲಿ ಬರುವ ಉತ್ತರಾಯಣ ಪುಣ್ಯಕಾಲ, ಮಕರ ಸಂಕ್ರಾಂತಿ, ಬಸವ ಜಯಂತಿ, ಅಕ್ಷಯ ತೃತಿಯ, ನರಕ ಚತುರ್ದಶಿ, ಹಾಗೂ ಎರಡನೇ ಶನಿವಾರದಂದು ಬರುವ ಮಹಾಲಯ ಅಮಾವಾಸ್ಯೆ, ನಾಲ್ಕನೇ ಶನಿವಾರದಂದು ಬರುವ ಖುತುಬ್-ಎ-ರಂಜಾನ್ ಮತ್ತು ಮಹರ್ಷಿ ವಾಲ್ಮೀಕಿ ಜಯಂತಿ ಯನ್ನು ಈ ರಜಾ ದಿನಗಳ ಪಟ್ಟಿಯಲ್ಲಿ ನಮೂದಿಸಿರುವುದಿಲ್ಲ. ಇನ್ನೂ ಕೊಡಗು ಜಿಲ್ಲೆಯಲ್ಲಿ ಸಪ್ಟೆಂಬರ್ ತಿಂಗಳಿನಲ್ಲಿ ಬರುವ ಕೈಲ್ ಮುಹೂರ್ತ, ತುಲಾ ಸಂಕ್ರಮಣ ಹಾಗೂ ಹುತ್ತರಿ ಹಬ್ಬಕ್ಕೆ ರಜೆ ನೀಡಲಾಗುತ್ತದೆ. ಕರ್ನಾಟಕದ ಇತರ ಜಿಲ್ಲೆಗಳಲ್ಲಿ ಆಯಾ ಜಿಲ್ಲೆಗಳ ಜಾತ್ರೆ ಸೇರಿದಂತೆ ಇತರ ವಿಶೇಷ ದಿನಗಳಿಗೆ ರಜೆ ನೀಡಲಾಗುವುದು.