- ಕೆಂಪಡಿಕೆ ದರ ಕ್ವಿಂಟಲ್ ಗೆ ₹49,000ಕ್ಕೆ ಏರಿಕೆ
- ಈ ವರ್ಷ ಹೆಚ್ಚಿನ ದರ ದಾಖಲಿಸಿದ ಅಡಿಕೆ
NAMMUR EXPRESS NEWS
ದಾವಣಗೆರೆ: ಅಡಿಕೆ ದರ ಕೊಂಚ ಏರಿಕೆಯಾಗಿದ್ದು, ಬೆಳೆಗಾರರಲ್ಲಿ ಮಂದಹಾಸ ಮೂಡಿದೆ. ಸದ್ಯ ಕೆಂಪಡಿಕೆ ದರ ಕ್ವಿಂಟಲ್ ಗೆ ₹49,000ಕ್ಕೆ ಏರಿಕೆ ಕಂಡಿದೆ. ಎರಡು ತಿಂಗಳಲ್ಲಿ ಒಂದು ಕ್ವಿಂಟಲ್ ಗೆ ₹1,500 ರಷ್ಟು ಹೆಚ್ಚಾಗಿದೆ. ಜನವರಿ, ಫೆಬ್ರವರಿಯಲ್ಲಿ ಅಡಿಕೆದರ ₹47,000 ದಿಂದ ₹48,000 ಇತ್ತು. ಏಪ್ರಿಲ್, ಮೇ ತಿಂಗಳಲ್ಲಿ ಅಡಿಕೆ ದರ ಏರಿಕೆಯಾಗುವುದು ಸಾಮಾನ್ಯ. ಕಳೆದ ವರ್ಷದ ಸೆಪ್ಟೆಂಬರ್ ಹೊತ್ತಿಗೆ ಕ್ವಿಂಟಲ್ ಗೆ ₹58,000ಕ್ಕೆ ಏರಿಕೆಯಾಗಿದ್ದ ಅಡಿಕೆ ದರ ಡಿಸೆಂಬರ್ ಹೊತ್ತಿಗೆ ಒಮ್ಮೆಲೆ ₹19,000 ರಷ್ಟು ಕುಸಿತ ಕಂಡು ₹39,000 ಕ್ಕೆ ಬಂದಿತ್ತು. ಸೆಪ್ಟೆಂಬರ್ ವರೆಗೂ ದರದಲ್ಲಿ ಏರಿಳಿತ ಇರುತ್ತದೆ.ದರ ₹49,000 ರ ಆಸು ಪಾಸಿನಲ್ಲೇ ಇರುವ ಸಾಧ್ಯತೆ ಇದೆ. ಶಿವಮೊಗ್ಗ, ಚಿತ್ರದುರ್ಗ, ದಾವಣಗೆರೆ ಭಾಗದಲ್ಲಿ ಕೆಂಪಡಿಕೆ ದರ ಇದೇ ರೀತಿಯಲ್ಲಿ ಏರಿಕೆ ಕಾಣುವ ನಿರೀಕ್ಷೆ ಇದೆ ಎಂದು ತೋಟ ಉತ್ಪನ್ನಗಳ ಮಾರಾಟ ಸಹಕಾರ ಸಂಘದ ಅಧ್ಯಕ್ಷ ಆರ್ಎಂ ರವಿ ಹೇಳಿದರು.