ಕಾರ್ಕಳ: ಯಕ್ಷಗಾನ ಶಿಕ್ಷಣಕ್ಕಾಗಿಯೇ ಕಳೆದ 10 ವರ್ಷಗಳಿಂದ ಕಲಾ ಸೇವೆ ಮಾಡುತ್ತಿರುವ ಕಾರ್ಕಳದ ಯಕ್ಷಕಲಾರಂಗದ ವತಿಯಿಂದ ಪ್ರತಿ ವರ್ಷದಂತೆ ಈ ಬಾರಿಯೂ ವಿದ್ಯಾರ್ಥಿಗಳಿಗೆ ಉಚಿತವಾಗಿ ಯಕ್ಷಗಾನ ಶಿಕ್ಷಣ ಪಡೆಯಲು ಆಸಕ್ತ ಶಾಲಾ ಕಾಲೇಜುಗಳಿಂದ ಅರ್ಜಿ ಆಹ್ವಾನಿಸಲಾಗಿದೆ. 2023-24 ನೇ ಸಾಲಿನಲ್ಲಿ ಯಕ್ಷಗಾನ ಕಲಾ ಕೈಂಕರ್ಯದಲ್ಲಿ ತೊಡಗಿಸಿಕೊಳ್ಳಲು ಶಾಲಾ ಕಾಲೇಜುಗಳಿಗೆ ಇದೊಂದು ಉತ್ತಮ ಅವಕಾಶವಾಗಿದೆ.
ಸಂಸ್ಥೆಯು ಕಳೆದ ಹತ್ತು ವರ್ಷಗಳಿಂದ ತಾಲೂಕಿನ ವಿವಿಧ ಶಿಕ್ಷಣ ಸಂಸ್ಥೆಗಳಲ್ಲಿ ಸುಮಾರು 1650 ವಿದ್ಯಾರ್ಥಿಗಳಿಗೆ ಉಚಿತವಾಗಿ ಬೇರೆ ಬೇರೆ ನಾಟ್ಯ ಗುರುಗಳಿಂದ ಯಕ್ಷ ಶಿಕ್ಷಣ ನೀಡಿ ವರ್ಷಾಂತ್ಯದಲ್ಲಿ ಕಿಶೋರ ಯಕ್ಷೋತ್ಸವ ನಡೆಸಿಕೊಂಡು ಬರುತ್ತಿದೆ.
ಆಸಕ್ತ ಶಾಲಾ ಮುಖ್ಯಸ್ಥರು ದಿನಾಂಕ 25-06-23ರ ಒಳಗೆ ಈ ವಿಳಾಸಕ್ಕೆ ಅರ್ಜಿಗಳನ್ನು ಕಳುಹಿಸಿ ಕೊಡುವಂತೆ ವಿನಂತಿಸಲಾಗಿದೆ.