Author: Nammur Express admin

ಹಾಸನ ಸ್ವಿಮ್ಮರ್ಸ್ ಕ್ಲಬ್ ಹಾಸನ ಇವರ ವತಿಯಿಂದ ಜೆ. ಮಂಜುನಾಥ್ ಸ್ಮರಣಾರ್ಥ ನಡೆದ ಈಜು ಸ್ಪರ್ಧೆಯಲ್ಲಿ ಕ್ರಿಯೇಟಿವ್ ಶಿಕ್ಷಣ ಪ್ರತಿಷ್ಠಾನದ ಶೈಕ್ಷಣಿಕ ಸಹಭಾಗಿತ್ವದ ಹೆಚ್. ಕೆ. ಎಸ್. ಪಿ ಯು ಕಾಲೇಜಿನ ವಿದ್ಯಾರ್ಥಿಗಳು ಒಟ್ಟು 12 ಪದಕಗಳನ್ನು ಪಡೆದು ಅದ್ಭುತ ಸಾಧನೆ ಗೈದಿದ್ದಾರೆ. ವಿದ್ಯಾರ್ಥಿಗಳಾದ ಲಿಕಿತ್ ಎಂ ಗೌಡ (4ಚಿನ್ನ 2 ಬೆಳ್ಳಿ), ಗೌರವ್ ಹೆಚ್ ಎನ್ (1 ಬೆಳ್ಳಿ 1 ಕಂಚು), ಹೆಮಶ್ರೀ (1 ಬೆಳ್ಳಿ 1 ಕಂಚು), ಅನುಷಾ ಹೆಚ್. ಪಿ (1 ಬೆಳ್ಳಿ) ಶ್ರಾವ್ಯ ಸಿ. ಎ (1 ಕಂಚು) ಗಳಿಸಿದ್ದು ಸಂಸ್ಥೆಗೆ ಕೀರ್ತಿಯನ್ನು ತಂದಿದ್ದಾರೆ. ವಿದ್ಯಾರ್ಥಿಗಳಿಗೆ ದೈಹಿಕ ಶಿಕ್ಷಕರಾದ ನಟರಾಜ್ ಹೆಚ್. ಹೆಚ್ ತರಭೇತಿ ನೀಡಿದ್ದು ಸಾಧಕರನ್ನು ಸಂಸ್ಥೆಯ ಪ್ರಧಾನ ಕಾರ್ಯದರ್ಶಿಗಳಾದ ಶ್ರೀಯುತ ಹೆಚ್. ಕೆ.ಸುರೇಶ್ ,ಕಾರ್ಯದರ್ಶಿಗಳಾದ ಶ್ರೀಯುತ ಹೆಚ್. ಎಸ್.ಪ್ರಶಾಂತ್ ಗೌಡ,ಆಡಳಿತ  ಮಂಡಳಿ, ಪ್ರಾಂಶುಪಾಲರು  ಹಾಗೂ ಎಲ್ಲಾ ಬೋಧಕ ಬೋಧಕೇತರ ಸಿಬ್ಬಂದಿಗಳು ಮತ್ತು ಸಂಯೋಜಕರಾದ ವೆಂಕಟೇಶ್ ಅಭಿನಂದಿಸಿದ್ದಾರೆ.

Read More

80 ಲಕ್ಷ ಕದ್ದುಕೊಂಡು ನಾಪತ್ತೆ: ಏನಿದು ಘಟನೆ..? ಕೆಲಸದಿಂದ ವಜಾ ಮಾಡಿ.. ರಶ್ಮಿಕಾ ಮಾಡಿದ್ದೇನು ಗೊತ್ತಾ? ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ಭಾರತೀಯ ಸಿನಿಮಾದಲ್ಲಿ ಈಗ ಬಹು ಬೇಡಿಕೆಯ ನಟಿ. ಈಗ ರಶ್ಮಿಕಾ ಮಂದಣ್ಣ ಅವರ ಹೆಸರು ಮತ್ತಷ್ಟು ವೈರಲ್ ಆಗುತ್ತಿದೆ. ಹೌದು. ರಶ್ಮಿಕಾ ಅವರ ಕೆಲಸಗಳನ್ನು ನೋಡಿಕೊಳ್ಳುತ್ತಿದ್ದ ಮ್ಯಾನೇಜರ್ ನಟಿಯ ಲಕ್ಷಾಂತರ ಹಣ ದೋಚಿದ್ದಾರೆ. ಇದೀಗ ಮ್ಯಾನೇಜರ್ ಪತ್ತೆಗೆ ಕ್ರಮ ಕೈಗೊಳ್ಳಲಾಗಿದೆ. ನಟಿಯ ಬರೋಬ್ಬರಿ 80 ಲಕ್ಷ ರೂಪಾಯಿ ಹಣವನ್ನು ಮ್ಯಾನೇಜರ್ ಕಬಳಿಸಿದ್ದಾನೆ. ಹೀಗಾಗಿ ಮ್ಯಾನೇಜರ್‌ನನ್ನು ಕೆಲಸದಿಂದ ತೆಗೆದು ಹಾಕಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ, ಈ ಬಗ್ಗೆ ರಶ್ಮಿಕಾ ಮಂದಣ್ಣ ಯಾವುದೇ ಮಾಹಿತಿ ನೀಡಿಲ್ಲ. ರಶ್ಮಿಕಾ ಮಂದಣ್ಣ ಅವರು ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ಬ್ಯುಸಿ ಆಗಿದ್ದಾರೆ. ನಟಿ ಈಗಾಗಲೇ ಸಿದ್ದಾರ್ಥ್ ಮಲ್ಹೋತ್ರಾ ಹಾಗೂ ಅಮಿತಾಭ್ ಬಚ್ಚನ್ ಜೊತೆ ತೆರೆ ಹಂಚಿಕೊಂಡಿದ್ದಾರೆ. ರಣಬೀರ್ ಕಪೂರ್ ಗೆ ನಾಯಕಿಯಾಗಿ ‘ಅನಿಮಲ್’ ಚಿತ್ರದಲ್ಲಿ, ಅಲ್ಲದೆ, ಅಲ್ಲು ಅರ್ಜುನ್ ‘ಪುಷ್ಪ 2’ಚಿತ್ರಕ್ಕೆ ಬಣ್ಣ ಹಚ್ಚಲಿದ್ದಾರೆ.…

Read More

ಬಾರ್, ವೈನ್ ಶಾಪ್ ಅಲ್ಲಿ ಅಕ್ರಮವಾಗಿ ಹೆಚ್ಚು ತಗೊಂಡ್ರೆ ಕ್ರಮ ಅಬಕಾರಿ ಸಚಿವರ ಹೇಳಿಕೆ: ಮದ್ಯ ಕಂಪನಿಗಳಿಂದ ಹೆಚ್ಚಳ NAMMUR EXPRESS NEWS ಬೆಂಗಳೂರು: ರಾಜ್ಯ ಸರ್ಕಾರವು ಯಾವುದೇ ರೀತಿಯಲ್ಲೂ ಮದ್ಯದ ಮೇಲಿನ ಅಬಕಾರಿ ತೆರಿಗೆ ಹೆಚ್ಚಳ ಮಾಡಿಲ್ಲ. ಹೀಗಾಗಿ ನಮ್ಮಿಂದ ಯಾವುದೇ ಮದ್ಯದ ದರ ಹೆಚ್ಚಳವಾಗಿಲ್ಲ ಎಂದು ಅಬಕಾರಿ ಸಚಿವ ಆರ್.ಬಿ ತಿಮ್ಮಾಪುರ ಸ್ಪಷ್ಟಪಡಿಸಿದ್ದಾರೆ. ಈ ಮೂಲಕ ಸರ್ಕಾರ ಮದ್ಯದ ದರ ಹೆಚ್ಚಳ ಮಾಡಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಅಲ್ಲದೆ, ರಾಜ್ಯವು ಮದ್ಯದ ಮೇಲಿನ ಅಬಕಾರಿ ತೆರಿಗೆ ಹೆಚ್ಚಳ ಮಾಡದಿದ್ದರೂ ಬಾ‌ರ್ ಗಳಲ್ಲಿ ಮದ್ಯ ಬೆಲೆ ಹೆಚ್ಚಿರುವುದಾಗಿ ಕೆಲವರು ತಿಳಿಸಿದ್ದಾರೆ. ಈ ಬಗ್ಗೆ ನನಗೆ ಮಾಹಿತಿ ಇಲ್ಲ, ಬಾರ್‌ಗಳು ಅಕ್ರಮವಾಗಿ ಹೆಚ್ಚುವರಿ ದರಕ್ಕೆ ಮಾರಾಟ ಮಾಡುತ್ತಿದ್ದರೆ ರಿಯಾಲಿಟಿ ಚೆಕ್‌ ಮಾಡಿ ಕ್ರಮ ಕೈಗೊಳ್ಳುವುದಾಗಿ ಹೇಳಿದರು ಅವರು, ಸರ್ಕಾರ ಮದ್ಯದ ದರ ಹೆಚ್ಚಳ ಮಾಡಿಲ್ಲ. ಹೆಚ್ಚಳದ ಯಾವುದೇ ಪ್ರಸ್ತಾವನೆಯೂ ನಮ್ಮ ಮುಂದೆ ಇಲ್ಲ ಹೆಚ್ಚಳ ಮಾಡಿದ್ದರೆ ನಾವೇ ಮಾಹಿತಿ ನೀಡುತ್ತಿದ್ದೆವು ಎಂದು…

Read More

ಎಬಿವಿಪಿ ಅಧ್ಯಕ್ಷನ ಕಾಮಪುರಾಣ ಇನ್ನಷ್ಟು ಬಯಲು? ಆರಗ ಜ್ಞಾನೇಂದ್ರ ಹೇಳಿದ್ದೇನು? ಪ್ರಿಯಾಂಕಾ ಖರ್ಗೆ ಹೇಳಿದ್ದೇನು? ಶಿವಮೊಗ್ಗ/ ಬೆಂಗಳೂರು: ತೀರ್ಥಹಳ್ಳಿಯಲ್ಲಿ ಯುವತಿಯ ಅಶ್ಲೀಲ ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟ ಪ್ರಕರಣ ಇದೀಗ ರಾಜ್ಯ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ಬಿಜೆಪಿ ಅಂಗ ಸಂಸ್ಥೆ ಎಂಬಂತಿರುವ ಎಬಿವಿಪಿ ತೀರ್ಥಹಳ್ಳಿ ಅಧ್ಯಕ್ಷನಾಗಿದ್ದ ಆರೋಪಿ ಅನೇಕ ಯುವತಿಯರ ಜತೆ ಅಶ್ಲೀಲ ವಿಡಿಯೋ ಮಾಡಿಕೊಂಡು ಹರಿಬಿಟ್ಟಿದ್ದ. ಆರೋಪಿ ಜತೆ ಅನೇಕರು ಕೈಜೋಡಿಸಿರುವುದಾಗಿ ತಿಳಿದು ಬಂದಿದ್ದು ತೀರ್ಥಹಳ್ಳಿ ಮತ್ತು ಶಿವಮೊಗ್ಗ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಮಾಜಿ ಗೃಹ ಸಚಿವ ಆರಗ ಜ್ಞಾನೇಂದ್ರ ಪ್ರತಿಕ್ರಿಯೆ ನೀಡಿದ್ದು, ಈ ಬಗ್ಗೆ ಸೂಕ್ತ ಕಾನೂನು ಕ್ರಮ ತೆಗೆದುಕೊಳ್ಳಬೇಕು ಎಂದು ಪೊಲೀಸ್ ಅಧಿಕಾರಿಗಳ ಜೊತೆ ಮಾತನಾಡಿದ್ದೇನೆ. ಇಂತಹ ಅಶ್ಲೀಲತೆ ಯಾರಿಗೂ ಮುಲಾಜಿಲ್ಲದೇ ಕಾನೂನು ಕ್ರಮ ಕೈಗೊಳ್ಳಬೇಕು. ಅವನೊಬ್ಬ ಕೊಳಕು ಮನುಷ್ಯ. ಈ ಬಗ್ಗೆ ಪೊಲೀಸರು ತನಿಖೆ ಮಾಡುತ್ತಿದ್ದಾರೆ ಎಂದಿದ್ದಾರೆ. ಇತ್ತೀಚಿನ ದಿನಗಳಲ್ಲಿ ಗಾಂಜಾ, ಅಫೀಮು ಮಾರಾಟ ಹೆಚ್ಚಾಗಿ ಆರಂಭವಾಗಿದೆ. ಇದನ್ನು ಮಟ್ಟ ಹಾಕಲು ಪೋಷಕರು…

Read More

ಖಾಸಗಿ ಬಸ್ ಹಾಗೂ ಬೈಕ್ ನಡುವೆ ಡಿಕ್ಕಿ ಸ್ಥಳದಲ್ಲೇ ಯುವಕ ಸಾವು, ಯುವತಿ ಆಸ್ಪತ್ರೆಯಲ್ಲಿ ದುರ್ಮರಣ: ಉಡುಪಿ ಬಾರ್ಕೂರು ಮೂಲದವರು ಆಗುಂಬೆ ಘಾಟಿಯಲ್ಲಿ ವಾಹನಗಳ ವೇಗ ಹೆಚ್ಚಳ ಕಾರಣ?! ತೀರ್ಥಹಳ್ಳಿ/ಹೆಬ್ರಿ: ಖಾಸಗಿ ಬಸ್ ಹಾಗೂ ಬೈಕ್ ನಡುವೆ ಮುಖಾಮುಖಿ ಡಿಕ್ಕಿಯಾಗಿ ಯುವಕ ಯುವತಿ ಮೃತಪಟ್ಟ ಘಟನೆ ಆಗುಂಬೆ ಘಾಟಿಯ 11 ನೇ ತಿರುವಿನಲ್ಲಿ ನಡೆದಿದೆ. ಶಶಾಂಕ್ (21) ಮೃತಪಟ್ಟ ಯುವಕ. ನಿರ್ಮಿತಾ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾಳೆ ಎನ್ನಲಾಗಿದೆ. ತೀರ್ಥಹಳ್ಳಿಯಿಂದ ಹೆಬ್ರಿಗೆ ತೆರಳುತಿದ್ದ ಖಾಸಗಿ ಬಸ್ ಹಾಗೂ ಸೋಮೇಶ್ವರದಿಂದ ಆಗುಂಬೆಗೆ ಬರುತ್ತಿದ್ದ ಕೆಟಿಎಮ್ ಬೈಕ್ ನಡುವೆ ಮುಖಾಮುಖಿ ಡಿಕ್ಕಿಯಾಗಿ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಬೈಕ್ ನ ಹಿಂಬದಿಯ ಸವಾರಳಾದ ಯುವತಿ ನಿರ್ಮಿತಾಗೆ ಗಂಭೀರ ಗಾಯಗಳಾಗಿದ್ದು, ಆಕೆಯನ್ನ ಮಣಿಪಾಲ್ ಆಸ್ಪತ್ರೆಗೆ ದಾಖಲಿಸಲಾಗಿದ್ದು ಚಿಕಿತ್ಸೆ ಫಲ ನೀಡದೆ ಮೃತಪಟ್ಟಿದ್ದಾಳೆ. ಉಡುಪಿ ಜಿಲ್ಲೆಯ ಬಾರ್ಕೂರು ಮೂಲದ ಯುವಕ-ಯುವತಿ ಎಂದು ಗುರುತಿಸಲಾಗಿದೆ. ಆಗುಂಬೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ವೇಗ ಹೆಚ್ಚಳ?!: ಆಗುಂಬೆ ಘಾಟಿಯಲ್ಲಿ ವಾಹನಗಳು…

Read More

ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಗುವಾಹಟಿ ಕಾರ್ಕಳ : ದೇಶದ ಪ್ರತಿಷ್ಠಿತ ಐ.ಐ.ಟಿ ಸಂಸ್ಥೆಯಲ್ಲಿ ಬಿ.ಇ (B.E) ಪದವಿ ಪ್ರವೇಶಕ್ಕೆ ನಡೆಯುವ ರಾಷ್ಟ್ರಮಟ್ಟದ ಅತೀ ಕಠಿಣವಾದ ಜೆ.ಇ.ಇ (JEE) ಅಡ್ವಾನ್ಸ್ಡ್‌ ಪರೀಕ್ಷೆಯಲ್ಲಿ ಕಾರ್ಕಳದ ಕ್ರಿಯೇಟಿವ್‌ ಪದವಿ ಪೂರ್ವ ಕಾಲೇಜಿನ ಉದ್ಭವ್‌ ಎಂ ಆರ್‌, ಜಾಗೃತಿ ಕೆ ಪಿ, ಆದಿತ್ಯ ವಿ ಹೊಳ್ಳ, ಅಭಯ್‌ ಎಸ್‌ ಎಸ್‌, ಕಾರ್ತಿಕ್‌ ಕೃಷ್ಣಮೂರ್ತಿ ಹೆಗಡೆ, ಸೂರಜ್‌ ಕುಮಾರ್‌ ಎನ್‌, ಪ್ರಣವ್‌ ಪಿ ಸಂಜೀ ಉನ್ನತ ರ‍್ಯಾಂಕ್‌ನೊಂದಿಗೆ ತೇರ್ಗಡೆ ಹೊಂದಿದ್ದಾರೆ. ಅದರಲ್ಲಿ ಉದ್ಭವ್‌ ಎಂ ಆರ್‌ PREP-ST ಯಲ್ಲಿ 3 ನೇ ರ‍್ಯಾಂಕ್‌, ಜಾಗೃತಿ ಕೆ ಪಿ 24 ನೇ ರ‍್ಯಾಂಕ್‌ ಗಳಿಸಿ ವಿಶೇಷ ಸಾಧನೆ ಗೈದಿದ್ದಾರೆ. ಪರೀಕ್ಷೆಗೆ ಕುಳಿತ ಕ್ರಿಯೇಟಿವ್‌ ನ ಕೇವಲ 12 ವಿದ್ಯಾರ್ಥಿಗಳಲ್ಲಿ 7 ವಿದ್ಯಾರ್ಥಿಗಳು ತೇರ್ಗಡೆಯಾಗುವ ಮೂಲಕ ದೇಶದ ಪ್ರತಿಷ್ಠಿತ 23 IIT ಗಳ ಪ್ರವೇಶಕ್ಕೆ ನಡೆಯುವ ಆಯ್ಕೆ ಪ್ರಕ್ರಿಯೆಗೆ ಅರ್ಹರಾಗಿದ್ದಾರೆ. ಸಂಸ್ಥೆಯ ಆರಂಭದ ವರ್ಷಗಳಲ್ಲೇ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲೂ ಉನ್ನತ…

Read More

ಶಿವಮೊಗ್ಗ ಎಸ್ಪಿ ಹೇಳಿಕೆ: ಕೋರ್ಟ್ ಮುಂದೆ ಹಾಜರು ಮತ್ತಷ್ಟು ವಿಡಿಯೋ ಶಂಕೆ: ತನಿಖೆ ಜೋರು ಶಿವಮೊಗ್ಗ: ಹಲವು ಯುವತಿಯರ ಜೊತೆಗೆ ಸಲುಗೆಯಿಂದ ಇದ್ದು, ವಿಡಿಯೋಗಳನ್ನು ರೆಕಾರ್ಡ್‌ ಮಾಡಿ ವೈರಲ್‌ ಮಾಡಿದ ಆರೋಪ ಸಂಬಂಧ ಯುವಕನ ವಿರುದ್ಧ ಪ್ರಕರಣ ದಾಖಲಾಗುತ್ತಿದ್ದು ಆತನನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ ಎಂದು ಶಿವಮೊಗ್ಗ ಜಿಲ್ಲಾ ರಕ್ಷಣಾಧಿಕಾರಿ ಮಿಥುನ್‌ ಕುಮಾರ್‌ ಸ್ಪಷ್ಟನೆ ನೀಡಿದ್ದಾರೆ. ತೀರ್ಥಹಳ್ಳಿಯ ಎಬಿವಿಪಿ ಸಂಘಟನೆಯ ನಾಯಕ ಕೆಲವು ಯುವತಿಯರ ಜೊತೆಗೆ ಸಲುಗೆಯಿಂದ ಇರುವ ವಿಡಿಯೋಗಳು ವೈರಲ್‌ ಆಗಿತ್ತು. ಇದರ ಬೆನ್ನಿಗೆ ಯುವಕನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈ ಕುರಿತು ಜಿಲ್ಲಾ ರಕ್ಷಣಾಧಿಕಾರಿ ವಾಟ್ಸಪ್‌ ಮೂಲಕ ಮಾಧ್ಯಮಗಳಿಗೆ ಸ್ಪಷ್ಟನೆ ನೀಡಿದ್ದಾರೆ. ಯುವಕನೊಬ್ಬ ಕೆಲವು ಯುವತಿಯರ ಜೊತೆಗೆ ಲೈಂಗಿಕ ಕ್ರಿಯೆಯಲ್ಲಿ ತೊಡಗಿರುವ ವಿಡಿಯೋ ತೀರ್ಥಹಳ್ಳಿಯಲ್ಲಿ ವೈರಲ್‌ ಆಗಿದೆ. ಯುವಕನನ್ನು ವಶಕ್ಕೆ ಪಡೆದಿದ್ದೇವೆ. ಆತನ ವಿರುದ್ಧ ಎಫ್‌ಐಆರ್‌ ದಾಖಲಿಸಲಾಗುತ್ತಿದೆ. ಯುವಕನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗುತ್ತಿದೆ ಎಂದು ಮಿಥುನ್‌ ಕುಮಾರ್‌, ಜಿಲ್ಲಾ ರಕ್ಷಣಾಧಿಕಾರಿ ವಾಟ್ಸಪ್‌ ಸಂದೇಶದ ಹೇಳಿಕೆ ನೀಡಿದ್ದಾರೆ. ತೀರ್ಥಹಳ್ಳಿಯಲ್ಲಿ ನಡೆದ…

Read More

ತೀರ್ಥಹಳ್ಳಿ ತುಂಗಾ ನದಿಯಲ್ಲಿ ನಾಪತ್ತೆ: ಶೋಧ ಕಾರ್ಯ, ಓರ್ವನ ಶವ ಪತ್ತೆ ಕಾರ್ಕಳ ನಿಟ್ಟೆ ಕಾಲೇಜಿನ ಉಪನ್ಯಾಸಕರು NAMMUR EXPRESS NEWS ತೀರ್ಥಹಳ್ಳಿ: ತುಂಗಾ ನದಿಯಲ್ಲಿ ಈಜಲು ತೆರಳಿದ್ದ ಇಬ್ಬರು ಉಪನ್ಯಾಸಕರು ನಾಪತ್ತೆಯಾಗಿದ್ದಾರೆ. ಈ ಪೈಕಿ ಒಬ್ಬರ ಮೃತದೇಹ ಪತ್ತೆಯಾಗಿದೆ ಎಂದು ಪೊಲೀಸ್‌ ಇಲಾಖೆ ತಿಳಿಸಿದೆ. ತೀರ್ಥಹಳ್ಳಿ ತಾಲೂಕು ತೀರ್ಥ ಮತ್ತೂರು ಗ್ರಾಮದ ಬಳಿ ತುಂಗಾ ನದಿಯಲ್ಲಿ ಘಟನೆ ಸಂಭವಿಸಿದೆ. ಕಾರ್ಕಳದ ನಿಟ್ಟೆ ಕಾಲೇಜಿನ ಉಪನ್ಯಾಸಕರಾದ ಪುನೀತ್‌ (38) ಮತ್ತು ಬಾಲಾಜಿ (36) ತುಂಗಾ ನದಿಯಲ್ಲಿ ಈಜಲು ತೆರಳಿದ್ದರು. ಈ ವೇಳೆ ಇಬ್ಬರು ನಾಪತ್ತೆಯಾಗಿದ್ದು. ರಕ್ಷಣಾ ಕಾರ್ಯಾಚರಣೆ ವೇಳೆ ಒಬ್ಬರ ಮೃತದೇಹ ಪತ್ತೆಯಾಗಿದೆ ಎಂದು ಜಿಲ್ಲಾ ರಕ್ಷಣಾಧಿಕಾರಿ ಮಿಥುನ್‌ ಕುಮಾರ್‌ ತಿಳಿಸಿದ್ದಾರೆ. ಉಪನ್ಯಾಸಕರು ತಮ್ಮ ಸ್ನೇಹಿತರೊಂದಿಗೆ ಪ್ರವಾಸಕ್ಕೆ ಬಂದಿದ್ದರು. ತೀರ್ಥಹಳ್ಳಿಯ ತೀರ್ಥಮತ್ತೂರು ಮಠದ ಸಮೀಪ ಇರುವ ಹೋಂ ಸ್ಟೇಯಲ್ಲಿ ತಂಗಿದ್ದರು. ತೀರ್ಥಹಳ್ಳಿ ಪೊಲೀಸರು ಮತ್ತು ಅಗ್ನಿಶಾಮಕ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದಾರೆ.

Read More

ಕಾರ್ಕಳ‌ : ತಾಲೂಕಿನ ಕೆಲವು ಅಂಗನವಾಡಿ ಕೇಂದ್ರಗಳಲ್ಲಿ ತಾಯಿ ಕಾರ್ಡ್ ಮೂಲಕ ಗರ್ಭಿಣಿ ಮತ್ತು ಬಾಣಂತಿ ಸ್ತ್ರೀಯರಿಗೆ ವಿತರಣೆಯಾಗುವ ಆಹಾರ ಪದಾರ್ಥಗಳ ಗುಣಮಟ್ಟ ಕಳಪೆಯಾಗಿದ್ದು ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕೆಂದು ಪುರಸಭಾ ಸದಸ್ಯ ಶುಭದರಾವ್ ಆಗ್ರಹಿಸಿದ್ದಾರೆ. ಗರ್ಭಿಣಿ ಮತ್ತು ಬಾಣಂತಿ ಸ್ತ್ರೀಯರ ಆರೋಗ್ಯದ ದೃಷ್ಟಿಯಿಂದ ಸರಕಾರವು ಅಕ್ಕಿ , ಬೇಳೆ, ಸಾಂಬಾರು ಹುಡಿ, ಮತ್ತು ‌ಮೊಟ್ಟೆ ಮೊದಲಾದ ಪೋಷಕಾಂಶ ಆಹಾರ ಪದಾರ್ಥಗಳನ್ನು ವಿತರಿಸುತ್ತಿದ್ದು ಈ ಬಾರಿ ವಿತರಣೆಯಾದ ಸಾಬಾಂರು ಹುಡಿಯ ಗುಣಮಟ್ಟ ತೀರ ಕಳಪೆಯಾಗಿದ್ದು ಉಂಡೆಗಳಾಗಿ ಪರಿವರ್ತನೆಯಾಗಿ ಬಳಕೆಗೆ ಅಯೋಗ್ಯವಾಗಿದೆ. ಇಂತಹ ಪದಾರ್ಥಗಳನ್ನು ಸೇವಿಸುವುದರಿಂದ ಸ್ತ್ರೀಯರ ಅರೋಗ್ಯ ಮೇಲೆ ಕೆಟ್ಟ ಪರಿಣಾಮ ಬೀರಿ ಅನಾಹುತವಾಗುವ ಸಾದ್ಯತೆ ಇದೆ ಆಹಾರ ಪದಾರ್ಥಗಳ ವಿತರಣೆಯ ಜವಾಬ್ದಾರಿ ಹೊತ್ತ ಸಂಸ್ಥೆಯ ವಿರುದ್ಧ ಕಠಿಣ ಕ್ರಮವಾಗಬೇಕು ಮತ್ತು ಅವರ ಟೆಂಡರನ್ನು ರದ್ದು ಮಾಡಬೇಕು ಎಂದು ಆಗ್ರಹಿಸುತ್ತೇನೆ. ಈ ಹಿಂದೆಯೂ ಕೊಳೆತ ಮೊಟ್ಟೆ ವಿತರಣೆಯಾಗಿದ್ದು ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಲಿಲ್ಲ, ಈ ಬಗ್ಗೆ…

Read More

ಆಶ್ರಮದಲ್ಲಿ ಮುಂದಿನ ಸಿಎಂ ಜಪ 3 ಉಂಗುರ ಇಟ್ಟು ಗುರೂಜಿ ಹೇಳಿದ್ದೇನು? ಕೊಪ್ಪ : ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಗೌರಿಗದ್ದೆಯಲ್ಲಿರುವ ವಿನಯ ಗುರೂಜಿ ಆಶ್ರಮದಲ್ಲಿ ಡಿಕೆ ಶಿವಕುಮಾರ್ ಮುಂದಿನ ಸಿಎಂ ಕೂಗು ಕೇಳಿಬಂದಿದೆ. ಡಿಕೆ ಶಿವಕುಮಾರ್ ಸಿಎಂ ಆಗಲು ಆಶೀರ್ವದಿಸಿ ಎಂದು ಶಾಸಕ ತಮ್ಮಯ್ಯ ಮನವಿ ಮಾಡಿದ್ದಾರೆ. ಇದಕ್ಕೆ ವಿನಯ್ ಗುರೂಜಿ ಡಿಕೆಶಿ ಮುಂದೆ ಸಿಎಂ ಆಗ್ತಾರೆ ಎಂದು ಹೇಳಿದ್ದಾರೆ. ಡಿ.ಕೆ.ಶಿವಕುಮಾರ್ ನಮಗೆ ಟಿಕೆಟ್ ನೀಡಿ ಸಹಾಯ ಮಾಡಿದ್ದಾರೆ. ರಾಜ್ಯದಲ್ಲಿ ಸರ್ಕಾರ ರಚನೆಯ ಹಿಂದಿನ ಶಕ್ತಿಯೇ ಡಿ.ಕೆ.ಶಿವಕುಮಾರ್. ನಾವು ಬೇರೇನೂ ಕೇಳಲ್ಲ, ಅವರು ಸಿಎಂ ಆಗಲೆಂದು ಆಶೀರ್ವದಿಸಿ ಎಂದು ಶಾಸಕ ತಮ್ಮಯ್ಯ ಮನವಿ ಮಾಡಿದ್ದಾರೆ. ಜೆಡಿಎಸ್ ಎಂಎಲ್ಸಿ ಶರವಣರಿಂದಲೂ ಕೂಡ ಡಿಕೆ ಶಿವಕುಮಾರ್ ಸಿಎಂ ಅಗಲಿ ಎನ್ನುವ ಮೂಲಕ ಹೊಸ ರಾಜಕೀಯಕ್ಕೆ ಕಾರಣರಾಗಿದ್ದಾರೆ. 3 ಉಂಗುರ 3 ಸಿಎಂ!: ಗುರುಗಳು ಮೂರು ಉಂಗುರವನ್ನು ರೆಡಿ ಮಾಡಿ ಇಟ್ಟಿದ್ದರು. ಮಾಜಿ ಸಿಎಂ ಹೆಚ್ಡಿ ಕುಮಾರಸ್ವಾಮಿಗೆ ಒಂದು ಉಂಗುರ ಕೊಟ್ರು, ಮತ್ತೊಂದು ಬಿಜೆಪಿ…

Read More