ಬೆಂಗಳೂರು: ಇಂಜಿನಿಯರಿಂಗ್ ಸೇರಿ ವಿವಿಧ ವೃತ್ತಿಪರ ಕೋರ್ಸುಗಳ ಪ್ರವೇಶಕ್ಕೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಕಳೆದ ತಿಂಗಳು ನಡೆಸಿದ್ದ ಸಿಇಟಿ ಫಲಿತಾಂಶವು ಜೂ.15ರಂದು ಪ್ರಕಟವಾಗಲಿದೆ.
ಸಿಇಟಿ ಪರೀಕ್ಷಾ ಉತ್ತರ ಪತ್ರಿಕೆಗಳ ಮೌಲ್ಯಮಾಪನ ಕಾರ್ಯ ಪೂರ್ಣಗೊಂಡಿದ್ದು, ಪ್ರಸ್ತುತ ಸಿಇಟಿ ಫಲಿತಾಂಶ ಮತ್ತು ದ್ವಿತೀಯ ಪಿಯುಸಿ ಫಲಿತಾಂಶ ಎರಡನ್ನೂ ಆಧರಿಸಿ ರ್ಯಾಂಕ್ ಪಟ್ಟಿ ಸಿದ್ಧಪಡಿಸುವ ಕಾರ್ಯ ನಡೆಯುತ್ತಿದೆ.
ಪ್ರಾಧಿಕಾರವು ಪಲಿತಾಂಶವನ್ನು ಜೂ.12 ಅಥವಾ 14ರಂದು ಫಲಿತಾಂಶ ಪ್ರಕಟಿಸಲು ನಿರ್ಧರಿಸಿತ್ತು. ಆದರೆ, ಉನ್ನತ ಶಿಕ್ಷಣ ಸಚಿವರ ಲಭ್ಯತೆ ಮತ್ತು ಕೆಲವು ತಾಂತ್ರಿಕ ಕಾರಣಗಳಿಂದ ಜೂ.15ರಂದು ಪ್ರಕಟಿಸಲು ನಿರ್ಧರಿಸಿದೆ. ಕಳೆದ ಮೇ 20 ರಿಂದ 22ರ ವರೆಗೆ ನಡೆದಿದ್ದ ಸಿಇಟಿ-2023ಕ್ಕೆ 2.39 ಲಕ್ಷ ವಿದ್ಯಾರ್ಥಿಗಳು ಹಾಜರಾಗಿದ್ದರು.