ವಿಶ್ವೇಶ್ವರಯ್ಯ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ತಂಡಕ್ಕೆ
ರೇಸಿಂಗ್ ಚಾಂಪಿಯನ್ ಶಿಪ್!
– ರಾಷ್ಟ್ರ ಮಟ್ಟದಲ್ಲಿ ಸಾಧನೆ ಮಾಡಿದ “ಟೀಮ್ ಎಲೆಕ್ಟ್ರಿಮೋ”
– 12 ಮಂದಿ ವಿದ್ಯಾರ್ಥಿಗಳ ನಾವೀನ್ಯತೆಯ ಹೆಜ್ಜೆ
NAMMUR EXPRESS NEWS
ಪುಣೆ: ಇತ್ತೀಚೆಗೆ ಪುಣೆಯಲ್ಲಿ ನಡೆದ ನ್ಯಾಷನಲ್ ಲೆವೆಲ್ ಆಟೋ ಇಂಡಿಯಾ ರೇಸಿಂಗ್ ಚಾಂಪಿಯನ್ ಶಿಪ್ (AIRC)ನಲ್ಲಿ ಭಾಗವಹಿಸಿದ ಬೆಂಗಳೂರಿನ ಯಲಹಂಕದಲ್ಲಿರುವ ಸರ್ ಎಂ ವಿಶ್ವೇಶ್ವರಯ್ಯ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಕಾಲೇಜಿನ ಎಲೆಕ್ಟ್ರಿಕಲ್ ವಿಭಾಗದಿಂದ ಪ್ರತಿನಿಧಿಸಿದ “ಟೀಮ್ ಎಲೆಕ್ಟ್ರಿಮೋ” Team Electrimo ತಂಡದ 6ನೇ ಸೆಮ್ ಎಲೆಕ್ಟ್ರಿಕಲ್ ಇಂಜಿನಿಯರಿಂಗ್ ವಿದ್ಯಾರ್ಥಿಗಳು electrical Go kart car ತಯಾರಿಸಿದ್ದು ರಾಷ್ಟ್ರ ಮಟ್ಟದ ಸ್ಪರ್ಧೆಯಲ್ಲಿ ಹಲವಾರು ರಾಜ್ಯಗಳಿಂದ ಸುಮಾರು 40 ತಂಡಗಳು ಭಾಗವಹಿಸಿದ್ದು E kart ವಿಭಾಗದಲ್ಲಿ Team Electrimo ತಂಡ ಚಾಂಪಿಯನ್ಸ್ ಆಗಿದ್ದಾರೆ. ಈ ತಂಡಕ್ಕೆ ತೀರ್ಥಹಳ್ಳಿಯ ನ್ಯಾಷನಲ್ ಗೋಲ್ಡ್ ಅಂಡ್ ಡೈಮಂಡ್ ಇವರು ಪ್ರೋತ್ಸಾಹಿಸಿ ವಿದ್ಯಾರ್ಥಿಗಳಿಗೆ ಬೆಂಬಲಿಸಿದ್ದಾರೆ. ಯುವ ಪ್ರತಿಭೆಗಳಿಗೆ ಅನೇಕ ಸಂಘಟನೆಗಳು, ಜನತೆ ಅಭಿನಂದಿಸಿದ್ದಾರೆ. 30 ವಿದ್ಯಾರ್ಥಿಗಳ ತಂಡದಲ್ಲಿ 12 ಮಂದಿ ಭಾಗವಹಿಸಿದ್ದರು.
12 ಮಂದಿ ತಂಡದಲ್ಲಿ ಯಾರ್ಯಾರು?
ಡ್ರೈವರ್ ಪುನೀತ್ ಎಂ ಆರ್ ಬೆಂಗಳೂರು, ಎರಡನೇ ಡ್ರೈವರ್ ಪ್ರತೀಕ್ ಡಿ ತೀರ್ಥಹಳ್ಳಿ, ತಂಡದ ಕ್ಯಾಪ್ಶನ್ ಮನು ಪಾಟೀಲ್ ಬಾಗಲಕೋಟೆ, ಮ್ಯಾನೇಜರ್ ಆದ ಧನುಷ್ ಆರ್ ತರೀಕೆರೆ, ವೈಭವಿ ಡಿ ತಾಂಡೆಲ್ ಬೆಂಗಳೂರು, ಇಂದುಮತಿ ಕೆ ಹಿರೇಮಠ್ ಶಿರಾಳಕೊಪ್ಪ, ಸರಸ್ವತಿ ಶಿರೂರು ಗುಳೇದಗುಡ್ಡ, ಸುಹಾಸ್ ಆರ್ ಕೆ ಬೆಂಗಳೂರು, ಸುಮಿತ್ ಎಚ್ ವಿ ಶಿಕಾರಿಪುರ, ಸಚಿನ್ ಎಸ್ ಕೆ ಹಿರೇಕೆರೂರು, ನಿಖಿಲ್ ಮಹೇಶ್ ಪಾಟೀಲ್ ಪುಣೆ, ಸ್ಫೂರ್ತಿ ಸೀತಾನದಿ ಹೆಬ್ರಿ ಇವರು ತಂಡದಲ್ಲಿದ್ದರು.
ಡಾ. ಮಹೇಶ್ ಕೆ ಅವರ ನೇತೃತ್ವದಲ್ಲಿ ತಂಡ ಭಾಗವಹಿಸಿತ್ತು.
7 ವಿಶೇಷ ಪ್ರಶಸ್ತಿಗಳನ್ನು ಪಡೆದ ತಂಡ!
ಡಾ. ಮಹೇಶ್ ಅವರಿಗೆ ದ್ರೋಣಾಚಾರ್ಯ ಅವಾರ್ಡ್( ಪ್ಯಾಕಲ್ಟಿ ಅಡ್ವವೈಸರ್)
ಸೋಷಿಯಲ್ ಮೀಡಿಯಾ ಅವಾರ್ಡ್
ಕಾಸ್ಟ್ ಅಂಡ್ ಬಿಸಿನೆಸ್ ಪ್ಲಾನ್ ಅವಾರ್ಡ್
ಡಿಸೈನ್ ಅಂಡ್ ಕೇರ್ ಅವಾರ್ಡ್
ಇನ್ನೋವೆಷನ್ ಅವಾರ್ಡ್
ಬೆಸ್ಟ್ ಡ್ರೈವರ್ ಅವಾರ್ಡ್
ಸೇಫ್ಟಿ ಅವಾರ್ಡ್
ನ್ಯಾಷನಲ್ ಗೋಲ್ಡ್ ಅಂಡ್ ಡೈಮಂಡ್ ಪ್ರೋತ್ಸಾಹ
ತೀರ್ಥಹಳ್ಳಿಯ ನ್ಯಾಷನಲ್ ಗೋಲ್ಡ್ ಅಂಡ್ ಡೈಮಂಡ್ ಸಂಸ್ಥೆಯ ಪ್ರಮುಖರಾದ ಅಬ್ದುಲ್ ಕಲಾಂ ಅವರು ಈ ತಂಡವನ್ನು ಪ್ರೋತ್ಸಾಹಿಸಿ ವಿದ್ಯಾರ್ಥಿಗಳಿ