ಕರಾವಳಿಯಲ್ಲಿ ಭಾರೀ ಮಳೆ ಅಲರ್ಟ್!
– ಜೂನ್ 25ಕ್ಕೆ ಭಾರೀ ಮಳೆ,ಯೆಲ್ಲೋ ಅಲರ್ಟ್ ಘೋಷಣೆ
– ಕಾಪುವಿನಲ್ಲಿ ಜಾಸ್ತಿ, ಕಾರ್ಕಳದಲ್ಲಿ ಕಡಿಮೆ ಮಳೆ!
NAMMUR EXPRESS NEWS
ಉಡುಪಿ: ಕರಾವಳಿ ಜಿಲ್ಲೆಗಳಲ್ಲಿ ಮುಂದಿನ ನಾಲ್ಕು ದಿನಗಳಲ್ಲಿ ಭಾರೀ ಮಳೆಯಾಗುವ ಕುರಿತು ಉಡುಪಿ ಜಿಲ್ಲಾಡಳಿತ ಮಾಹಿತಿಯನ್ನು ನೀಡಿದೆ. ಜೂನ್ 25 ರಂದು ಭಾರೀ ಮಳೆ ಸುರಿಯುವ ಸಾಧ್ಯತೆಯ ಹಿನ್ನೆಲೆಯಲ್ಲಿ ಜಿಲ್ಲೆಯಾದ್ಯಂತ ಯೆಲ್ಲೋ ಅಲರ್ಟ್ ಘೋಷಣೆ ಮಾಡಿದೆ.
ಜೂನ್ 21 ರಿಂದ ಜೂನ್ 24ರ ವರೆಗೆ ಉಡುಪಿ ಜಿಲ್ಲೆಯಲ್ಲಿ ಹಗುರ/ ಸಾಧಾರಣ ಮಳೆಯಾಗಲಿದೆ. ಕರಾವಳಿಯ ಕೆಲವು ಕಡೆಗಳಲ್ಲಿ ಗರಿಷ್ಠ ಉಷ್ಣಾಂಶವು ಸಾಮಾನ್ಯಕ್ಕಿಂತ 3 ರಿಂದ 4 ಡಿಗ್ರಿ ಸೆಲ್ಸಿಯಸ್ ನಷ್ಟು ಹೆಚ್ಚಾಗುವ ಸಾಧ್ಯತೆಯಿದೆ. ಕನಿಷ್ಠ ಉಷ್ಣಾಂಶ 25.7 ಡಿಗ್ರಿ ಸೆಲ್ಸಿಯಸ್ ಇದ್ದು, ಗರಿಷ್ಠ ಉಷ್ಣಾಂಶ 32.6 ಡಿಗ್ರಿ ಸೆಲ್ಸಿಯಸ್ ಇರಲಿದೆ.
ಉಡುಪಿ ಜಿಲ್ಲೆಯಲ್ಲಿ ಮಂಗಳವಾರ ಸರಾಸರಿ 3.9 ಮಿ.ಮೀ. ಮಳೆ ಸುರಿದೆ. ಅದ್ರಲ್ಲೂ ಕಾಪುವಿನಲ್ಲಿ ಅತೀ ಹೆಚ್ಚು ಪ್ರಮಾಣದಲ್ಲಿ ಮಳೆ ಸುರಿದಿದೆ. ಕಾಪುವಿನಲ್ಲಿ 1.8 ಮಿ.ಮೀ ಮಳೆಯಾಗಿದ್ದರೆ, ಹೆಬ್ರಿಯಲ್ಲಿ 9.7 ಮಿ.ಮೀ, ಬೈಂದೂರು 3.2 ಮಿ.ಮೀ, ಕುಂದಾಪುರ 2.7 ಮೀ.ಮೀ, ಬ್ರಹ್ಮಾವರ 2.4 ಮಿ.ಮೀ, ಉಡುಪಿ 1.7 ಮೀ.ಮೀ ಮಳೆಯಾಗಿದ್ದರೆ, ಕಾರ್ಕಳದಲ್ಲಿ ಅತೀ ಕಡಿಮೆ 0.8 ಮೀ.ಮೀ. ಮಳೆಯಾಗಿದೆ.
ಮುಂದಿನ 24 ಗಂಟೆಗಳ ಅವಧಿಯಲ್ಲಿ ರಾಜ್ಯದ ಹಲವು ಕಡೆಗಳಲ್ಲಿ ಗುಡುಗು ಸಹಿತ ಮಳೆಯಾಗಿದ್ದು, ಗಂಟೆಗೆ 40 ರಿಂದ 45 ಕಿ.ಮೀ. ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆಯಿದೆ. ಈ ಹಿನ್ನೆಲೆಯಲ್ಲಿ ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಜಿಲ್ಲಾಡಳಿತ ಎಚ್ಚರಿಕೆಯನ್ನು ನೀಡಿದೆ.