ಕ್ರಿಯೇಟಿವ್ ಕಾಲೇಜಲ್ಲಿ ಯೋಗ ದಿನದ ರಂಗು
– ಯೋಗಾಭ್ಯಾಸದಿಂದ ಆತ್ಮವಿಶ್ವಾಸ ಹೆಚ್ಚಳ: ವಿದ್ವಾನ್ ಗಣಪತಿ ಭಟ್
– ರೋಗ ಮುಕ್ತಿಗೆ ಯೋಗವೂ ಮದ್ದು: ಅಶ್ವತ್.ಎಸ್.ಎಲ್
NAMMUR EXPRESS NEWS
ಕಾರ್ಕಳ: ಯೋಗಾಭ್ಯಾಸದಿಂದ ಸದೃಢ ದೇಹ ಮತ್ತು ಆತ್ಮವಿಶ್ವಾಸ ಹೆಚ್ಚುತ್ತದೆ ಎಂದು ಕ್ರಿಯೇಟಿವ್ ಪಿಯು ಕಾಲೇಜಿನಲ್ಲಿ ಪ್ರಾಂಶುಪಾಲರಾದ ವಿದ್ವಾನ್ ಗಣಪತಿ ಭಟ್ ಹೇಳಿದ್ದಾರೆ.
ಕಾರ್ಕಳ ಕ್ರಿಯೇಟಿವ್ ಪಿ ಯು ಕಾಲೇಜಿನಲ್ಲಿ ನಡೆದ ವಿಶ್ವ ಯೋಗ ದಿನದಲ್ಲಿ ಪಾಲ್ಗೊಂಡು ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿದ ಅವರು, ಪ್ರತಿನಿತ್ಯ ಯೋಗ ಮತ್ತು ಸೂರ್ಯ ನಮಸ್ಕಾರಗಳನ್ನು ಮಾಡುವುದರಿಂದ ಶರೀರ ಮತ್ತು ಮನಸ್ಸು ಪ್ರಫುಲ್ಲಗೊಳ್ಳುವುದರ ಜೊತೆಗೆ ಆತ್ಮವಿಶ್ವಾಸ, ಏಕಾಗ್ರತೆ ಹೆಚ್ಚುತ್ತದೆ. ಇದರಿಂದ ಸ್ವಸ್ಥ ಮನಸ್ಸು, ಸುಂದರ ಬದುಕು, ರೋಗ ರಹಿತ ಜೀವನ ನಡೆಸಬಹುದಾಗಿದೆ ಎಂದರು.
ಜೂನ್ 21ನ್ನು ಅಂತರಾಷ್ಟ್ರೀಯ ಯೋಗದಿನವನ್ನಾಗಿ ಆಚರಿಸುವ ಮೂಲಕ ಇಡೀ ಜಗತ್ತೇ ಯೋಗವನ್ನು ಒಪ್ಪಿಕೊಂಡಿದೆ. ಇದರಿಂದ ಆರೋಗ್ಯಪೂರ್ಣ ವ್ಯಕ್ತಿತ್ವದೊಂದಿಗೆ, ವ್ಯಕ್ತಿಯ ವಯಕ್ತಿಕ ರೋಗ ಮುಕ್ತಿಯೂ ಆಗುವುದರಿಂದ ಎಲ್ಲರೂ ಯೋಗವನ್ನು ಪ್ರತಿದಿನ ಮಾಡುವಂತಾಗಬೇಕು ಎಂದು ಸಂಸ್ಥಾಪಕರಾದ ಅಶ್ವತ್.ಎಸ್.ಎಲ್ ಕರೆ ನೀಡಿದರು.
ಈ ಸಂದರ್ಭದಲ್ಲಿ ಕ್ರಿಯೇಟಿವ್ ಕಾಲೇಜಿನ ಉಪನ್ಯಾಸಕರು, ವಿದ್ಯಾರ್ಥಿ ನಿಲಯ ಪಾಲಕರು, ಉಪನ್ಯಾಸಕೇತರ ವರ್ಗದವರು ಯೋಗ ದಿನದಲ್ಲಿ ಪಾಲ್ಗೊಂಡರು.
ಇದನ್ನೂ ಓದಿ : ಗೃಹಜ್ಯೋತಿ ಅರ್ಜಿ ನೋಂದಣಿಗೆ ಹೊಸ ಲಿಂಕ್!
HOW TO APPLY : NEET-UG COUNSELLING 2023