ಪತ್ನಿಯ ಪ್ರಿಯಕರನ ಕತ್ತು ಸೀಳಿ ರಕ್ತ ಕುಡಿದ ಪತಿ.!
– ಪತ್ನಿ ಜತೆ ಅಕ್ರಮ ಸಂಬಂಧಕ್ಕೆ ಪ್ರತೀಕಾರ
– ಪೊಲೀಸ್ ಠಾಣೆಯಲ್ಲೇ ಸಾವಿಗೆ ಶರಣಾದ ಆರೋಪಿ: ಇಬ್ಬರು ಪೊಲೀಸರು ಅಮಾನತು
NAMMUR EXPRESS NEWS
ಚಿಕ್ಕಬಳ್ಳಾಪುರ: ರಾಜ್ಯದಲ್ಲಿ ಕ್ರೂರ ಹತ್ಯೆ ಯತ್ನವೊಂದು ನಡೆದಿದೆ. ವ್ಯಕ್ತಿಯೋರ್ವನ ಕತ್ತು ಸೀಳಿ ರಕ್ತ ಕುಡಿದ ನರಹಂತಕ ಕೃತ್ಯವು ಚಿಕ್ಕಬಳ್ಳಾಪುರದ ಚಿಂತಾಮಣಿ ತಾಲೂಕಿನ ಸಿದ್ದೇಪಲ್ಲಿ ಕ್ರಾಸ್ ಬಳಿ ನಡೆದಿದೆ.
ಕತ್ತು ಸೀಳಲ್ಪಟ್ಟ ಹಿನ್ನೆಲೆಯಲ್ಲಿ ಒದ್ದಾಡುತ್ತಿದ್ದ ವ್ಯಕ್ತಿಯ ರಕ್ತವನ್ನು ಹೀರಿ ಕ್ರೌರ್ಯ ಮೆರೆದಿದ್ದಾನೆ. ಆ ಕುರಿತ ವಿಡಿಯೋ ವೈರಲ್ ಆಗುತ್ತಿದ್ದಂತೆ ಕತ್ತು ಸೀಳಿ ವ್ಯಕ್ತಿ ಪರಾರಿಯಾಗಿ ತಲೆಮರೆಸಿಕೊಂಡಿದ್ದಾನೆ.
ರಕ್ತ ಹೀರಿದ ವ್ಯಕ್ತಿ ಚಿಂತಾಮಣಿಯ ಬಟ್ಲಹಳ್ಳಿ ಗ್ರಾಮದ ನಿವಾಸಿ ವಿಜಯ್ ಎಂದು ಮತ್ತು ಕತ್ತು ಸೀಳಲ್ಪಟ್ಟು ಒದ್ದಾಡುತ್ತಿದ್ದ ವ್ಯಕ್ತಿ ಚೇಳೂರು ತಾಲೂಕಿನ ಮಾಡೇಂಪಲ್ಲಿ ನಿವಾಸಿ ಮಾರೇಶ್ ಎಂದು ಗುರುತಿಸಲಾಗಿದೆ.
ಹಲ್ಲೆಗೊಳಗಾದ ವ್ಯಕ್ತಿ ಮಾರೇಶ್ ವಿಜಯ್ ಪತ್ನಿ ಮಾಲಾ ಜೊತೆ ಅನೈತಿಕ ಸಂಬಂಧ ಹೊಂದಿದ್ದಾನೆ ಎಂಬ ಆರೋಪ ಕೇಳಿಬಂದಿತ್ತು.ಈ ಹಿನ್ನೆಲೆಯಲ್ಲಿ ವಿಜಯ್, ಮಾರೇಶ್ನನ್ನು ಸಿದ್ದೇಪಲ್ಲಿ ಕ್ರಾಸ್ ಬಳಿ ಕರೆಸಿಕೊಂಡು ಚಾಕುವಿನಿಂದ ಕತ್ತು ಸೀಳಿ ರಕ್ತ ಕುಡಿದಿದ್ದಾನೆ. ಅಷ್ಟೇ ಅಲ್ಲದೇ ಈ ದೃಶ್ಯ ಮೊಬೈಲ್ನಲ್ಲಿ ಸೆರೆಯಾಗಿದ್ದು, ಸದ್ಯ ಈ ಭೀಭತ್ಸ ಕೃತ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಕೂಡಲೇ ಆರೋಪಿ ವಿಜಯನ್ನು ಕೆಂಚಾರ್ಲಹಳ್ಳಿ ಪೊಲೀಸರು ಬಂಧಿಸಿದ್ದಾರೆ. ಹಲ್ಲೆಗೊಳಗಾದ ಮಾರೇಶ್ ಚಿಕಿತ್ಸೆ ಪಡೆದಿದ್ದಾನೆ.
ಪೊಲೀಸ್ ಠಾಣೆಯಲ್ಲೇ ಸಾವಿಗೆ ಶರಣಾದ ಆರೋಪಿ ; ಪಿಐ, ಪಿಎಸ್ಐ ಸೇರಿ ಐವರು ಅಮಾನತು.!
ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ಪೊಲೀಸ್ ಠಾಣೆಯ ಪಿಐ, ಪಿಎಸ್ಐ ಸೇರಿ ಐವರನ್ನು ಅಮಾನತು ಮಾಡಲಾಗಿದೆ. ಠಾಣೆಯ ಪಿಐ ಮಂಜುನಾಥ್, ಠಾಣೆಯ ಕ್ರೈ ಪಿಎಸ್ಐ ಮಂಜೇಶ್ವರ್ ಚಂದಾವರ, ಪೊಲೀಸ್ ಸಿಬ್ಬಂದಿಗಳಾದ ಮಹಾವೀರ, ರಮೇಶ್, ಸಂತೋಷ್ ಅಮಾನತುಗೊಂಡಿದ್ದಾರೆ.
ಆದರೆ ದಿಲೀಪ್ ಮಂಡಲ್ ಎಂಬಾತ ವಿಷ ಸೇವಿಸಿ ಹೊನ್ನಾವರ ಪೊಲೀಸ್ ಠಾಣೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಐವರನ್ನು ಅಮಾನತು ಮಾಡಲಾಗಿದೆ.
ಪಾಲಿಶ್ ಮಾಡಿ ಕೊಡುವ ನೆಪದಲ್ಲಿ ಬಂಗಾರ ಕದಿಯುತ್ತಿದ್ದ ಆರೋಪದ ಮೇಲೆ ಬಿಹಾರ ಮೂಲದ ಇಬ್ಬರನ್ನು ಹೊನ್ನಾವರ ಠಾಣೆ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದರು. ಬಳಿಕ ಪೊಲೀಸರು ಇಬ್ಬರು ಆರೋಪಿಗಳನ್ನು ವಿಚಾರಣೆಗೆಂದು ಠಾಣೆಗೆ ಕರೆದುಕೊಂಡು ಬಂದಿದ್ದರು. ಆ ವೇಳೆ ನೀರು ಕುಡಿಯುತ್ತೇನೆ ಎಂದು ಹೇಳಿ ಬ್ಯಾಗಿನಲ್ಲಿದ್ದ ವಿಷ ಕುಡಿದಿದ್ದ. ಕೂಡಲೇ ಆತನನ್ನು ಪೊಲೀಸರು ಆಸ್ಪತ್ರೆಗೆ ಕರೆದೊಯ್ದರು ಸಹ, ದುರದೃಷ್ಟವಶಾತ್ ಅಷ್ಟರಾಗಲೇ ಆರೋಪಿ ಮೃತಪಟ್ಟಿದ್ದ. ಆರೋಪದ ಮೇಲೆ ಹೊನ್ನಾವರ ಠಾಣೆಯ ಪಿಐ, ಪಿಎಸ್ಐ ಸೇರಿ ಐವರನ್ನು ಅಮಾನತು ಮಾಡಲಾಗಿದೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ : ಗೃಹಜ್ಯೋತಿ ಅರ್ಜಿ ನೋಂದಣಿಗೆ ಹೊಸ ಲಿಂಕ್!
HOW TO APPLY : NEET-UG COUNSELLING 2023