ತೀರ್ಥಹಳ್ಳಿ ಹನಿಟ್ರ್ಯಾಪ್ ಪ್ರಕರಣ: ಮೂವರು ಅರೆಸ್ಟ್!
– ಫೋಟೋ ನೆಪದಲ್ಲಿ ಅಧಿಕಾರಿ ಜತೆ ಮಹಿಳೆ ಸಲುಗೆ
– ಮಂಗಳೂರು: ಯುವತಿ ಹಿಂದೆ ಬಂದಿದ್ದು ಪ್ರಶ್ನಿಸಿದ್ದಕ್ಕೆ ಚಾಕು ಇರಿತ!
– ಅಪಘಾತದಲ್ಲಿ ಕಾಲು ಕಳೆದುಕೊಂಡರಾ ಯುವ ನಟ?
NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿಯಲ್ಲಿ ಯುವತಿಯೊಬ್ಬಳನ್ನು ಮುಂದೆ ಬಿಟ್ಟು ಆಮಿಷವೊಡ್ಡಿ ಅಧಿಕಾರಿಗಳಿಂದ ಹಣ ವಸೂಲಿ ಮಾಡಿದ ಪ್ರಕರಣದಲ್ಲಿ ಮೂವರನ್ನು ಪೊಲೀಸರು ಬಂಧಿಸಿದ್ದಾರೆ.
ಅರಣ್ಯ ಇಲಾಖೆಯ ಅಧಿಕಾರಿಗೆ ಕರೆ ಮಾಡಿದ ಮಹಿಳೆಯೋರ್ವಳು ನೀವು ನಮ್ಮ ಸ್ಟುಡಿಯೋದಲ್ಲಿ ಫೋಟೊ ತೆಗೆಸಿಕೊಂಡಿದ್ದು ಫೋಟೋ ತೆಗೆದುಕೊಂಡು ಹೋಗಿ ಎಂದು ಕರೆ ಮಾಡಿರುತ್ತಾಳೆ.
ಈ ಸಣ್ಣಕರೆ ಅಧಿಕಾರಿ ಮತ್ತು ಮಹಿಳೆಯ ಜೊತೆ ಸಲುಗೆಯಿಂದ ಇರುವಂತೆ ಮಾಡಿದೆ. ಹತ್ತಿರಕ್ಕೆ ಕರೆಸಿದೆ. ಒಂದು ಮನೆಯಲ್ಲಿದ್ದಾಗ ಈ ಮಹಿಳೆ ಸ್ನೇಹಿತರ ಮತ್ತೊಂದು ಗ್ಯಾಂಗ್ ಬಂದು ಕದ ತಟ್ಟಿದ್ದಾರೆ. ಆಗ ಅಧಿಕಾರಿಯ ನಗ್ನ ಫೋಟೊ ತೆಗೆದು ಅಧಿಕಾರಿಗೆ ಹಣದ ಬೇಡಿಕೆ ಇಟ್ಟಿದೆ. 15 ಲಕ್ಷದ ಬೇಡಿಕೆ ಇಟ್ಟಿದೆ ಎನ್ನಲಾಗಿದೆ.
ಹಂತ ಹಂತವಾಗಿ ಅಧಿಕಾರಿಗಳು ಹಣ ನೀಡಿದ್ದಾರೆ. ಗ್ಯಾಂಗ್ ಹಣದ ವಸೂಲಿ ಅಧಿಕಾರಿಯನ್ನ ಜಿಗುಪ್ಸೆಗೆ ಒಳಪಡಿಸಿದೆ. ನಂತರ ತೀರ್ಥಹಳ್ಳಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಈ ವಿಚಾರದಲ್ಲಿ ಧನುಷ್, ಅನ್ಸರ್, ಕಾರ್ತಿಕ್, ಪುಂಡ, ಸಿದ್ದಿಕಿ ಮೋಹಿತ್ ಹಾಗೂ ಅನನ್ಯ ಯಾನೆ ಸೌರಭ ಎಂಬುವರ ವಿರುದ್ಧ ದೂರು ದಾಖಲಾಗಿದೆ. ಅನನ್ಯ, ಮೋಹಿತ್ ಹಾಗೂ ಸಿದ್ದಿಕ್ ಎಂಬುವರನ್ನ ಬಂಧಿಸಲಾಗಿದೆ. ಏಳುಜನರಲ್ಲಿ ಮೂವರು ಬಂಧಿತರಾಗಿದ್ದು ಉಳಿದ ನಾಲ್ವರು ತಲೆಮರೆಸಿಕೊಂಡಿದ್ದಾರೆ.
ಹುಡುಗಿಯನ್ನು ಹಿಂಬಾಲಿಸಿದ ವ್ಯಕ್ತಿ :
ಪ್ರಶ್ನಿಸಿದ್ದಕ್ಕೆ ಚೂರಿ ಇರಿದ!: ಹುಡುಗಿಯನ್ನು ಹಿಂಬಾಲಿಸಿಕೊಂಡು ಬಂದ ವ್ಯಕ್ತಿಯನ್ನು ಪ್ರಶ್ನಿಸಿದ್ದಕ್ಕೆ ಚೂರಿ ಇರಿದು ಪರಾರಿಯಾದ ಘಟನೆ ಪಣಂಬೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಚೂರಿ ಇರಿದ ಆರೋಪಿಯನ್ನು ತಣ್ಣೀರುಬಾವಿ ನಿವಾಸಿ ಸಾದಿಕ್ ಎಂದು ಗುರುತಿಸಲಾಗಿದೆ. ಭವಿತ್ ಎಂಬ ಯುವಕನಿಗೆ ಚೂರಿ ಇರಿದಿದ್ದಾನೆ. ಕೀರ್ತಿ ಎಂಬಾಕೆ ಮನೆಗೆ ಹೋಗುತ್ತಿದ್ದ ಸಂದರ್ಭ ಆರೋಪಿ ಸಾದಿಕ್ ಹುಡುಗಿಯನ್ನು ಹಿಂಬಾಲಿಸಿಕೊಂಡು ಬಂದಿದ್ದು, ಆಕೆ ಭಯಗೊಂಡು ಧನುಷ್ ಎಂಬಾತನ ಮನೆಗೆ ಹೋಗಿ ಭವಿತ್ ಗೆ ಕರೆ ಮಾಡಿ ತಿಳಿಸಿದ್ದಾರೆ. ಸ್ಥಳಕ್ಕೆ ಬಂದ ಭವಿತ್ ಸಾದಿಕ್ ನನ್ನು ಪ್ರಶ್ನಿಸಿದಾಗ ಸಾದಿಕ್ ಕೆಟ್ಟದಾಗಿ ಬೈದು ಕೊಲ್ಲುವ ಉದ್ದೇಶದಿಂದ ಚೂರಿ ಇರಿದಿದ್ದಾನೆ ಎನ್ನಲಾಗಿದೆ. ಘಟನೆಯಿಂದ ತೀವ್ರ ಗಾಯಗೊಂಡ ಭವಿತ್ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದು ನಂತರ ದೂರು ನೀಡಿದ್ದಾರೆ.
ಅಪಘಾತದಲ್ಲಿ ಕಾಲು ಕಳೆದುಕೊಂಡ ನಟ!
ವರನಟ ಸಾರ್ವಭೌಮ ಡಾ. ರಾಜ್ ಕುಮಾರ್ ಅವರ ಪತ್ನಿ, ಕನ್ನಡ ಚಿತ್ರರಂಗದ ನಿರ್ಮಾಪಕಿಯಾಗಿ ಗುರುತಿಸಿಕೊಂಡಿದ್ದ ಪಾರ್ವತಮ್ಮ ರಾಜ್ಕುಮಾರ್ ಅವರ ತಮ್ಮನ ಮಗ, ಯುವ ನಟ ಧೀರಜ್ಗೆ ಅಪಘಾತವಾಗಿದ್ದು ಕಾಲು ಕಳೆದುಕೊಂಡಿದ್ದಾರೆ.
ಮೈಸೂರು ನಂಜನಗೂಡು ರಸ್ತೆಯಯಲ್ಲಿ ಅಪಘಾತ ನಡೆದಿದ್ದು , ಯುವ ನಟ ಬಲಕಾಲನ್ನೇ ಕಳೆದು ಕೊಂಡಿದ್ದಾರೆ.ಬೈಕ್ನಲ್ಲಿ ಹೋಗುತ್ತಿದ್ದ ಸಂದರ್ಭದಲ್ಲಿ ಅಪಘಾತವಾಗಿದ್ದು ಧೀರಜ್ ಬಲ ಕಾಲಿನ ಮೇಲೆ ಟಿಪ್ಪರ್ ಹರಿದಿದೆ. ಧೀರಜ್ ಬಲಗಾಲಿಗೆ ಗಂಭೀರ ಗಾಯ ಆಗಿದ್ದ ಕಾರಣ ವೈದ್ಯರು ಮಂಡಿವರೆಗೂ ಬಲಗಾಲನ್ನು ಕತ್ತರಿಸಿ ತೆಗೆದಿದ್ದಾರೆ. ಸದ್ಯ ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ಧೀರಜ್ ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಧೀರಜ್ ನೋಡಲು ನಟ ಶಿವರಾಜ್ ಕುಮಾರ್, ನಿರ್ಮಾಪಕ ಚಿನ್ನೆಗೌಡ ಅವರು ಮೈಸೂರಿಗೆ ತೆರಳಿದ್ದರು. ಧೀರಜ್ ಭಗವಾನ್ ಶ್ರೀ ಕೃಷ್ಣ ಪರಮಾತ್ಮ ಪರಮಾತ್ಮ ಸಿನಿಮಾದಲ್ಲಿ ನಟಿಸಿದ್ದಾರೆ
ಇದನ್ನೂ ಓದಿ : ಗೃಹಜ್ಯೋತಿ ಅರ್ಜಿ ನೋಂದಣಿಗೆ ಹೊಸ ಲಿಂಕ್!
HOW TO APPLY : NEET-UG COUNSELLING 2023