ಆನ್ಲೈನ್ ವಂಚನೆ ಹೆಚ್ಚಾಯ್ತು: ಮಹಿಳೆಯರೇ ಟಾರ್ಗೆಟ್!?
– ಆನ್ಲೈನ್ ಅಲ್ಲೇ ತೀರ್ಥಹಳ್ಳಿ ಮಹಿಳೆ 11 ಲಕ್ಷ ಕಳೆದುಕೊಂಡಳು!
– ಮಂಗಳೂರಲ್ಲಿ 1.12 ಲಕ್ಷ ಪೀಕಿದ ಆನ್ಲೈನ್ ವಂಚಕ!
– ಮಂಗಳೂರಲ್ಲಿ ಹನಿ ಟ್ರ್ಯಾಪ್: 8 ಮಂದಿ ಅರೆಸ್ಟ್
NAMMUR EXPRESS NEWS
ತೀರ್ಥಹಳ್ಳಿ/ ಮಂಗಳೂರು: ಇತ್ತೀಚಿಗೆ ಆನ್ಲೈನ್ ವಂಚನೆ ಹೆಚ್ಚಾಗಿದೆ. ದಿನೇ ದಿನೇ ಆನ್ಲೈನ್ ವಂಚನೆ ಪ್ರಕರಣಗಳು ಬೆಳಕಿಗೆ ಬರುತ್ತಿವೆ. ಈಗ ಕೆಲ ಆನ್ಲೈನ್ ಖದೀಮರು ಉದ್ಯೋಗ, ಹೂಡಿಕೆ, ಚಟವನ್ನೇ ತಮ್ಮ ದಾಳವನ್ನಾಗಿಸಿಕೊಂಡಿದ್ದಾರೆ.
ಹೂಡಿಕೆ ಮಾಡಿ ಮಹಿಳೆ ಹಣ ಕಳೆದುಕೊಂಡಳು!:
ಪಾರ್ಟ್ ಟೈಮ್ ಉದ್ಯೋಗ ಹುಡುಕುತ್ತಿದ್ದ ಮಹಿಳೆಯೊಬ್ಬರು ಆನ್ಲೈನ್ ವಂಚಕರ ಜಾಲಕ್ಕೆ ಸಿಲುಕಿ 11 ಲಕ್ಷ ರೂ. ಹಣ ಕಳೆದುಕೊಂಡಿರುವ ಘಟನೆ ಬೆಳಕಿಗೆ ಬಂದಿದೆ.
ತೀರ್ಥಹಳ್ಳಿ ತಾಲೂಕಿನ ಮಹಿಳೆಯೊಬ್ಬರಿಗೆ (ಹೆಸರು ಗೌಪ್ಯ ವಾಗಿಡಲಾಗಿದೆ) ಟೆಲಿಗ್ರಾಂ ಆಪ್ನಲ್ಲಿ ಪಾರ್ಟ್ ಟೈಮ್ ಉದ್ಯೋಗವಿದೆ, ಹೂಡಿಕೆ ಮಾಡಿ ಅಧಿಕ ಲಾಭ ಪಡೆಯಿರಿ ಎಂದು ಮೆಸೇಜ್ ಬಂದಿತ್ತು. ಮೆಸೇಜ್ ನಂಬಿದ ಮಹಿಳೆ ಹಣ ಹೂಡಿಕೆ ಮಾಡಿದ್ದರು. ಮೊದಲಿಗೆ 10 ಸಾವಿರ ರೂ. ಹೂಡಿಕೆ ಮಾಡಿದ್ದು, ಆ ಕಡೆಯಿಂದ ಮೊದಲ ಟಾಸ್ಕ್ ನೀಡಿದ್ದರು.
ಅದನ್ನು ಮಹಿಳೆ ಕಂಪ್ಲಿಟ್ ಮಾಡಿದ್ದಾರೆ. ಕೂಡಲೆ ಮಹಿಳೆಯ ಖಾತೆಗೆ 16,847 ರೂ. ಹಣ ಜಮೆಯಾಗಿದೆ. ಇದನ್ನು ನಂಬಿದ ಮಹಿಳೆ ದೊಡ್ಡ ಮೊತ್ತದ ಲಾಭಾಂಶ ದೊರೆತಿದ್ದರಿಂದ ಖುಷಿಯಾಗಿ ಜೂ.20 ರಿಂದ 26ರವರೆಗೆ ವಿವಿಧ ಹಂತದಲ್ಲಿ ಹಣ ಹೂಡಿಕೆ ಮಾಡಿದ್ದಾರೆ. ಬರಿ ಒಂದು ವಾರದಲ್ಲಿ ಬರೋಬ್ಬರಿ 11,03,139 ರೂ. ಹಣ ಹೂಡಿಕೆ ಮಾಡಿ, ವಿವಿಧ ಟಾಸ್ ಪೂರೈಸಿದ್ದಾರೆ. ಆದರೆ ಅಸಲು ಮತ್ತು ಲಾಭದ ಹಣ ಮಾತ್ರ ಮಹಿಳೆಯ ಬ್ಯಾಂಕ್ ಖಾತೆಗೆ ಬರಲಿಲ್ಲ. ಇದರಿಂದ ಅನುಮಾನಗೊಂಡು ವಿಚಾರಿಸಿದಾಗ ವಂಚನೆಗೊಳಗಾಗಿರುವುದು ಗೊತ್ತಾಗಿದೆ.
ಈ ಸಂಬಂಧ ಶಿವಮೊಗ್ಗದ ಸಿಇಎನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಉದ್ಯೋಗ ಕೊಡಿಸುವುದಾಗಿ 1.12 ಲಕ್ಷ ವಂಚನೆ!
ಉದ್ಯೋಗ ನೀಡುವುದಾಗಿ ನಂಬಿಸಿ ಹಣ ವರ್ಗಾಯಿಸಿಕೊಂಡು ವಂಚಿಸಿರುವ ಬಗ್ಗೆ ಮಂಗಳೂರಿನ ಸೆನ್ ಅಪರಾಧ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ದೂರುದಾರರ ಇ-ಮೇಲ್ಗೆ TELEPHONE SKYPE ಎಂಬ ಅಪರಿಚಿತನೋರ್ವ [email protected] ನಿಂದ ಮಾ. 18ರಂದು ವಿದೇಶದಲ್ಲಿ ಉದ್ಯೋಗದ ಬಗ್ಗೆ ಸಂದೇಶ ಕಳುಹಿಸಿದ್ದ. ಅನಂತರ ಆಫರ್ ಲೆಟರ್ ಕಳುಹಿಸಿದ್ದ. ಅನಂತರ ನೇಮಕಾತಿ ಸಂಬಂಧವಾಗಿ ಠೇವಣಿ ಹಣ ನೀಡಬೇಕೆಂದು ತಿಳಿಸಿ ಹಂತ ಹಂತವಾಗಿ ಒಟ್ಟು 1,12,760 ರೂ.ಗಳನ್ನು ವರ್ಗಾಯಿಸಿಕೊಂಡು ವಂಚಿಸಿದ್ದಾನೆ ಎಂದು ದೂರಲಾಗಿದೆ.
ಮಂಗಳೂರು ಹನಿಟ್ರ್ಯಾಪ್: 8 ಮಂದಿ ಅರೆಸ್ಟ್!
ಹನಿಟ್ರ್ಯಾಪ್ಗೆ ಒಳಗಾಗದ ವ್ಯಕ್ತಿ ಬೆದರಿಕೆಯೊಡ್ಡಿರುವ ಪ್ರಕರಣದಲ್ಲಿ ಸಿಸಿಬಿ ಪೊಲೀಸರು ಕಾರ್ಯಾಚರಣೆ ನಡೆಸಿ ಯುವತಿ ಸೇರಿ ಎಂಟು ಮಂದಿಯನ್ನು ಬಂಧಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಬೊಂದೇಲ್ ನಿವಾಸಿ ಪ್ರೀತಮ್, ಮೂಡುಶೆಡ್ಡೆ ಪರಿಸರ ನಿವಾಸಿಗಳಾದ ಮುರುಳಿ, ಕಿಶೋರ್, ಸುಶಾಂತ್, ಅಭಿ ಸೇರಿ ಮೂಡುಬಿದಿರೆ ಮೂಲದ ಯುವತಿ ಬಂಧಿತ ಆರೋಪಿಗಳು ಎಂದು ಗುರುತಿಸಲಾಗಿದೆ. ಸಣ್ಣಪುಟ್ಟ ಕೆಲಸ ಮಾಡಿಕೊಂಡಿರುವ ಈ ತಂಡ, ಇದೀಗ ದೊಡ್ಡ ಕಾರ್ಯಾಚರಣೆಗೆ ಕೈ ಹಾಕಿ ಸಿಕ್ಕಿ ಬಿದ್ದಿದೆ.
ಯುವಕ ತಂಡ ಪದೇ ಪದೇ ಕರೆ ಮಾಡಿ ತೊಂದರೆ ನೀಡಿದ್ದು, ಮೂರು ತಿಂಗಳಲ್ಲಿ ಸುಮಾರು ಹತ್ತು ಲಕ್ಷಕ್ಕೂ ಅಧಿಕ ಹಣವನ್ನು ಇವರ ಬೆದರಿಕೆಗೆ ಹೆದರಿ ಕಳೆದುಕೊಂಡಿದ್ದಾರೆ. ಸದ್ಯ ಉದ್ಯಮಿ ಹನಿಟ್ರ್ಯಾಪ್ಯಿಂದ ಬೇಸತ್ತ ಉದ್ಯಮಿ ಕಾವೂರು ಠಾಣೆಗೆ ತೆರಳಿ ದೂರು ನೀಡಿದ್ದರು.
ಇದನ್ನೂ ಓದಿ : ನಾಯಿ ವೇದಿಕೆ ಮೇಲೆ ಪ್ರಶಸ್ತಿ ಪಡೆಯಿತು!!
HOW TO APPLY : NEET-UG COUNSELLING 2023