ಚಾರ್ಲಿ ನಾಯಿ ಆಯ್ತು, ಈಗ ಕುರಿ ಆಕ್ಟಿಂಗ್!
– ಟಗರು ಪಲ್ಯದಲ್ಲಿ 7 ಸ್ಟಾರ್ ಸುಲ್ತಾನ ಹೆಸರಿನ ಟಗರು
– ಮಜಾ ಭಾರತ ಕಾರ್ತಿಕ್ ಲೀಡ್ ರೋಲ್
– ಡಾಲಿ ಧನಂಜಯ ನಿರ್ಮಾಣದ ಸಿನಿಮಾ!
ಸಿನಿಮಾ ಡೆಸ್ಕ್: ನಮ್ಮೂರ್ ಎಕ್ಸ್ ಪ್ರೆಸ್
ಕನ್ನಡ ಸಿನಿಮಾ ರಂಗದಲ್ಲಿ ಕುತೂಹಲ ಮೂಡಿಸಿರುವ ‘ಟಗರು ಪಲ್ಯ’ ಸಿನಿಮಾಗೆ ಈಗ ಟಗರು ಎಂಟ್ರಿಯಾಗಿದೆ. ಸಿನಿಮಾಗಳಲ್ಲಿ ನಾಯಿ, ಹಸು, ಕುದುರೆ ಮುಂತಾದ ಸಾಕುಪ್ರಾಣಿಗಳು ಪ್ರಮುಖ ಪಾತ್ರ ನಿರ್ವಹಿಸುವುದು ಸಾಮಾನ್ಯ, ಈಗ ಟಗರು ಪಲ್ಯ’ ಸಿನಿಮಾದಲ್ಲಿ 7 ಸ್ಟಾರ್ ಸುಲ್ತಾನ ಎಂಬ ಟಗರು ಮುಖ್ಯ ಪಾತ್ರದಲ್ಲಿ ನಟಿಸಿದೆ. ಈವರೆಗೆ ತೆರೆಯ ಮೇಲೆ ಕೆಲವು ದೃಶ್ಯಗಳಷ್ಟೇ ಬಂದು ಹೋಗುತ್ತಿದ್ದ ಟಗರು ಇದೇ ಮೊದಲ ಬಾರಿಗೆ ಸಿನಿಮಾ ಪೂರ್ತಿ ಇರುತ್ತದೆ. ಶಿವನಸಮುದ್ರದ ಬಳಿ ಇಡೀ ಸಿನಿಮಾದ ಚಿತ್ರೀಕರಣ ನಡೆಸಲಾಗಿದೆ. ಕಳೆದ ವರ್ಷ ನಾಯಿ ನಟನೆಯ ಚಾರ್ಲಿ ಸಿನಿಮಾಕ್ಕೆ ಭಾರೀ ರೆಸ್ಪಾನ್ಸ್ ಸಿಕ್ಕ ಬೆನ್ನಲ್ಲೇ ಈ ಸಿನಿಮಾಕ್ಕೆ ಟಗರು ನಟನೆ ಮಾಡಲಿದೆ.
‘ನಮ್ಮ ಸಿನಿಮಾದ ಕಥೆಯ ಮುಖ್ಯ ಅಂಶವೇ 7 ಸ್ಟಾರ್ ಸುಲ್ತಾನ, ಅದು ಬಹಳ ಅದ್ಭುತವಾಗಿ ನಟಿಸಿದೆ. ನನಗೆ ಆರಂಭದಲ್ಲಿ ಭಯವಿತ್ತು. ಪ್ರಾಣಿಯೊಂದಿಗೆ ಹೇಗೆ ಚಿತ್ರೀಕರಣ ಮಾಡುವುದು ಮತ್ತು ಚಿತ್ರಕರಣ ತಡವಾಗಬಹುದು ಎಂದು ಅನಿಸಿತ್ತು. ಆದರೆ ನನ್ನ ಕಥೆಗೆ ತಕ್ಕಂತೆ ಆ ಟಗರು ನಟಿಸಿತು. ಕೊನೆಗೆ ಅದು ನಮ್ಮ ಚಿತ್ರತಂಡಕ್ಕೆ ಫ್ರೆಂಡ್ ಆಯಿತು ಎಂದುಹೇಳಿದ್ದಾರೆ ನಿರ್ದೇಶಕ ಉಮೇಶ್ ಕೆ. ಕೃಷ್ಣ.
ಮಂಡ್ಯದ ಹಳಿಗಳಲ್ಲಿ ನಡೆಯುವ ಆಚರಣೆಯ ಸುತ್ತ ನಡೆಯುವ ಈ ಸಿನಿಮಾದಲ್ಲಿ ನಾಗಭೂಷಣ್ ಮತ್ತು ಅಮೃತಾ ನಾಯಕ, ನಾಯಕಿಯರಾಗಿ ನಟಿಸಿದ್ದಾರೆ. ತಾರಾ, ಶರತ್ ಲೋಹಿತಾಶ್ವ, ರಂಗಾಯಣ ರಘು, ಮಜಾ ಭಾರತ ಕಾರ್ತಿಕ್ ಸೇರಿದಂತೆ ದೊಡ್ಡ ತಾರಾಬಳಗವಿದೆ.
ಟಗರು ಪಲ್ಯ’ ಸಿನಿಮಾಗೆ ವಾಸುಕಿ ವೈಭವ್ ಟ್ಯೂನ್ ಮಾಡಿದ್ದು, ಎನ್. ಕೆ. ರಾವ್ ಕ್ಯಾಮೆರಾ ಹಿಡಿದಿದ್ದಾರೆ. ಇದರ ಶೂಟಿಂಗ್ ಮುಗಿಸಿರುವ ಚಿತ್ರತಂಡ ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ಬಿಝಿಯಾಗಿದೆ.
ಲಕ್ಷಾಧಿಪತಿ ಸುಲ್ತಾನ ಟಗರು!
ಬಾಗಲಕೋಟೆ ತಾಲೂಕಿನ ಯುನೀಸ್ ಬಕ್ರೀದ್ ಹಬ್ಬಕ್ಕೆ ಕುರ್ಬಾ ಕೊಡಲೆಂದೇ ಎರಡೂವರೆ ವರ್ಷದ ಹಿಂದೆ 7 ಸ್ಟಾರ್ ಸುಲ್ತಾನ ಟಗರನ್ನು 1 ಲಕ್ಷ 88 ಸಾವಿರದ ಐನೂರು ರೂ.ಗೆ ಖರೀದಿಸಿದ್ದರು. ಆದರೆ ಕುರ್ಬಾನಿಗೂ ಮುನ್ನ ಅದನ್ನು ಕಾಳಗಕ್ಕೆ ಇಳಿಸಲಾಗಿತ್ತು. ಇಲ್ಲಿಯವರೆಗೆ ಅದು 34 ಕಣಗಳಲ್ಲಿ ಪ್ರಥಮ ಬಹುಮಾನ ಗಳಿಸಿದ್ದು, ಸುಮಾರು 20 ಲಕ್ಷದಷ್ಟು ಹಣ, ಬೆಳ್ಳಿ, ಬಂಗಾರ, ಬೈಕ್ಗಳನ್ನು ಗೆದ್ದಿದೆ.
ಇದನ್ನೂ ಓದಿ : ನಾಯಿ ವೇದಿಕೆ ಮೇಲೆ ಪ್ರಶಸ್ತಿ ಪಡೆಯಿತು!!
HOW TO APPLY : NEET-UG COUNSELLING 2023