ಹೊಸೂರು ಗುಡ್ಡೇಕೇರಿಗೆ ಸರ್ಕಾರಿ ಪ್ರೌಢಶಾಲೆ ಬಹುಮಾನ
– ಫಲಿತಾಂಶದಲ್ಲಿ ಉತ್ತಮ ಸಾಧನೆ: ಇಲಾಖೆಯಿಂದ 25 ಸಾವಿರ ನಗದು ಮತ್ತು ಪಾರಿತೋಷಕ
– ಶೇ.100 ಫಲಿತಾಂಶ ದಾಖಲು ಮಾಡಿದ್ದಕ್ಕೆ ಗೌರವ
NAMMUR EXPRESS NEWS
ತೀರ್ಥಹಳ್ಳಿ: ಸರ್ಕಾರಿ ಪ್ರೌಢಶಾಲೆ ಹೊಸೂರು ಗುಡ್ಡೇಕೇರಿಗೆ ಎಸ್.ಎಸ್.ಎಲ್.ಸಿ ಅತ್ಯುತ್ತಮ ಗುಣಮಟ್ಟದ ಫಲಿತಾಂಶಕ್ಕಾಗಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯಿಂದ 25 ಸಾವಿರ ನಗದು ಮತ್ತು ಪಾರಿತೋಷಕ ಲಭಿಸಿದೆ.
ಶಿಕ್ಷಣ ಇಲಾಖೆಯ ಬಹುಮಾನದ ಚೆಕ್ ಮತ್ತು ಪಾರಿತೋಷಕವನ್ನು ಶಿವಮೊಗ್ಗ ಡಿ ಡಿ ಪಿ ಐ ಪರಮೇಶ್ವರಪ್ಪ ವಿತರಣೆ ಮಾಡಿದರು.
ಇತ್ತೀಚಿನ ವರ್ಷಗಳಲ್ಲಿ ತಾಲ್ಲೂಕಿನ ಶೈಕ್ಷಣಿಕ, ಕ್ರೀಡೆ, ಸಹ ಪಠ್ಯ ಚಟುವಟಿಕೆಗಳ ಮೂಲಕ ಗಮನ ಸೆಳೆದಿರುವ, ಸರ್ಕಾರಿ ಪ್ರೌಢಶಾಲೆ ಹೊಸೂರು ಗುಡ್ಡೇಕೇರಿ, ಮತ್ತೊಮ್ಮೆ ಗಮನ ಸೆಳೆದಿದೆ..
2021-22 ನೇ ಸಾಲಿನ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ 100 % ಫಲಿತಾಂಶ ದಾಖಲಿಸಿದ್ದು , ಗುಣಮಟ್ಟದ ಶಿಕ್ಷಣದಲ್ಲೂ ಅತ್ಯುತ್ತಮ ಸಾಧನೆ ಮಾಡಿತ್ತು, ಎಸ್ ಎಸ್ ಎಲ್ ಸಿ ಮಕ್ಕಳ ಕಲಿಕಾ ಪ್ರೋತ್ಸಾಹಕ್ಕಾಗಿ ರಾತ್ರಿ ವಿಶೇಷ ತರಗತಿಯ ಆಯೋಜನೆ ಮಾಡಿದ್ದು ಶಾಲೆ ಸಾಧನೆ ಮಾಡಿದೆ..
ಶಾಲೆಯ ಕೀರ್ತಿ ಹೆಚ್ಚಿಸಿದ ಶಿಕ್ಷಕರ ಬಳಗಕ್ಕೆ, ಮಕ್ಕಳಿಗೆ, ಎಸ್ ಡಿ ಎಂ ಸಿ ತಂಡಕ್ಕೆ, ಪೋಷಕರಿಗೆ, ಜನಪ್ರತಿನಿಧಿಗಳಿಗೆ, ಕೇರ್ ವರ್ಕ್ಸ್ ಪೌಂಡೇಷನ್ ಬೆಂಗಳೂರು, ಹಾಗೂ ಪ್ರತ್ಯಕ್ಷ ಪರೋಕ್ಷವಾಗಿ ಸಹಕರಿಸಿದ ಪ್ರತಿಯೊಬ್ಬರಿಗೆ, ತುಂಬು ಹೃದಯದ ಕೃತಜ್ಞತೆಗಳನ್ನು ಮುಖ್ಯ ಶಿಕ್ಷಕ ಮಂಜು ಬಾಬು ಹೆಚ್ ಪಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ..
ಇದನ್ನೂ ಓದಿ : ನಾಯಿ ವೇದಿಕೆ ಮೇಲೆ ಪ್ರಶಸ್ತಿ ಪಡೆಯಿತು!!
HOW TO APPLY : NEET-UG COUNSELLING 2023