ಸಾಯಿ ಬಾಬಾ ಮಂದಿರಕ್ಕೆ ಕನ್ನ ಹಾಕಿದ ಕಳ್ಳರು!
– ಬೀಗ ಮುರಿದು ಕಾಣಿಕೆ ಹುಂಡಿ ದೋಚಿದರು
– ಎರಡನೇ ಬಾರಿ ಸಾಯಿ ಬಾಬಾ ಮಂದಿರ ಕಳ್ಳತನ
– ತಿಜೂರಿಯನ್ನು ಒಡೆದ ಕಳ್ಳರು
– ಅತಿ ಹೆಚ್ಚು ಭಕ್ತ ವರ್ಗ ಇರುವ ದೇವಸ್ಥಾನವನ್ನೇ ಟಾರ್ಗೆಟ್ ಮಾಡಿದ ಖದೀಮರು
NAMMUR EXPRESS NEWS
ಸಿಂದಗಿ: ಸಿಂದಗಿ ಪಟ್ಟಣದ ಸಾಯಿ ಬಾಬಾ ಮಂದಿರಕ್ಕೆ ಸೋಮವಾರ ತಡರಾತ್ರಿ ನುಗ್ಗಿದ ಖದೀಮರ ತಂಡ ಕಾಣಿಕೆ ಪೆಟ್ಟಿಗೆ ಒಡೆದು ಹಣ ದೋಚಿದ್ದಾರೆ. ಹೊರಗಿನ ಗೇಟ್ ಬೀಗ ಒಡೆದು ಹಾಕಿ ಮಂದಿರದ ಒಳಗಿನ ತೀಜೂರಿಯನ್ನು ಕೂಡ ಒಡೆದು ಹಾಕಿದ್ದಾರೆ. ಅಂದಾಜು 30 ಸಾವಿರ ಕಾಣಿಕೆ ಹಣ ಕಳುವಾಗಿದೆ ಹಾಗೂ 4 ವರ್ಷಗಳ ಹಿಂದೆ ಇದೇ ಮಂದಿರದಲ್ಲಿ ಕಾಣಿಕೆ ಪೆಟ್ಟಿಗೆ ಹೊತ್ತೊಯ್ದು ಹಣ ದೋಚಿ ದೂರದಲ್ಲಿ ಬಿಸಾಡಿ ಹೋಗಿದ್ದರು.
ಆ ಪ್ರಕರಣದ ಕುರಿತು ಸರಿಯಾದ ತನಿಖೆ ಆಗಿಲ್ಲ ಹಾಗೂ ಕಳ್ಳರನ್ನು ಬಂಧಿಸಿಲ್ಲ ಈ ಬಾರಿಯಾದರೂ ಸೂಕ್ತ ತನಿಖೆ ನಡೆಸಿ ಸರಿಯಾದ ಕೈಗೊಳ್ಳಬೇಕು ಎಂದು ಮಂದಿರದ ಅರ್ಚಕ ಬಮ್ಮಲಿಂಗಯ್ಯ ಚಿಕ್ಕಮಠ ಮಾದ್ಯಮಕ್ಕೆ ಹೇಳಿಕೆ ನೀಡಿದ್ದಾರೆ. ಈ ಕುರಿತು ಸಿಂದಗಿ ದೂರು ನೀಡುತ್ತೇವೆ. ಎಂದು ಸೇವಾ ಸಮಿತಿ ಸದಸ್ಯರು ತಿಳಿಸಿದ್ದಾರೆ. ಸ್ಥಳಕ್ಕೆ ಸಿಂದಗಿ ಪೊಲೀಸ್ ಠಾಣಾ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಇದನ್ನೂ ಓದಿ : ಲಕ್ಷಕ್ಕೆ ಬರುತ್ತಾ ಅಡಿಕೆ ದರ?
HOW TO APPLY : NEET-UG COUNSELLING 2023