ಸಿಂದಗಿ ತಾಲೂಕಲ್ಲಿ ಶಾಲೆಗಳ ಅವ್ಯವಸ್ಥೆ!
– ಶಿಥಿಲಾವಸ್ಥೆ ತಲುಪಿದ ಶಾಲೆಯ ನೀರಿನ ಟ್ಯಾಂಕ್
– ಅನಾಹುತಕ್ಕೆ ಕಾದು ಕುಳಿತ ಓವರ್ ಹೆಡ್ ಟ್ಯಾಂಕ್
– 415 ವಿದ್ಯಾರ್ಥಿಗಳಿಗೆ ಶಾಲೆಯಲ್ಲಿ ಭಯ ಭಯ!
NAMMUR EXPRESS NEWS
ಸಿಂದಗಿ: ಸಿಂದಗಿ ತಾಲೂಕಿನ ಬ್ಯಾಕೋಡ ಗ್ರಾಮದಲ್ಲಿರುವ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಓವರ್ ಹೆಡ್ ಟ್ಯಾಂಕ್ ಶಿಥಿಲಾವಸ್ಥೆ ತಲುಪಿದ್ದು ಅನಾಹುತಕ್ಕೆ ಕಾದು ಕುಳಿತಿದೆ.
ಸುಮಾರು ವರ್ಷಗಳಿಂದ ಶಿಥಿಲಾವಸ್ಥೆ ಈ ಟ್ಯಾಂಕ್ ನ್ನು ತೆರವುಗೊಳಿಸಿದ ಹಿನ್ನಲೆ ನೂರಾರು ಮಕ್ಕಳು ಕಲಿಯುವ ಶಾಲೆಯಲ್ಲಿ ಆತಂಕದ ವಾತಾವರಣವನ್ನು ಸೃಷ್ಟಿಸಿದೆ. ಈ ಕುರಿತು ಮಾಧ್ಯಮಕ್ಕೆ ಪ್ರತಿಕ್ರಿಯಿಸದ ಶಿಕ್ಷಕರು ಬ್ಯಾಕೋಡ ಗ್ರಾ. ಪಂ ವತಿಯಿಂದ ಹಲವು ವರ್ಷಗಳ ಹಿಂದೆಯೇ ಈ ಟ್ಯಾಂಕನ ತೆರವಿಗೆ ಆದೇಶವಾದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಹೇಳಿದರು.
ಈ ಬಗ್ಗೆ ಮಾತನಾಡಿದ ಶಾಲಾ ಮಕ್ಕಳು ಈ ಟ್ಯಾಂಕನ್ನು ನೋಡಿದರೆ ಭಯ ಆಗುತ್ತದೆ ಆದಷ್ಟು ಬೇಗ ಅದನ್ನು ತೆರವುಗೊಳಿಸಬೇಕು ಎಂದು ಹೇಳಿದರು.
ಮಕ್ಕಳ ಪೋಷಕರು ಮಾತನಾಡಿ, ನಾವು ಕೂಡ ಆ ಶಾಲೆಯಲ್ಲಿ ಕಲಿಯುವ ಸಮಯದಿಂದ ಈ ನೀರಿನ ಟ್ಯಾಂಕ್ ಅಲ್ಲಿದ್ದು ಈಗ ಹಲವು ವರ್ಷಗಳಿಂದ ಶಿಥಿಲಾವಸ್ಥೆ ತಲುಪಿದೆ ಈ ಕುರಿತು ಹಲವು ಬಾರಿ ಗ್ರಾಂ.ಪಂ ಅಧಿಕಾರಿಗಳಿಗೆ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ ನಮ್ಮ ಮಕ್ಕಳು ಭಯದ ವಾತಾವರಣದಲ್ಲಿ ಕಲಿಯುವ ಪರಿಸ್ಥಿತಿ ಎದುರಾಗಿದೆ ಎಂದು ಹೇಳಿದರು.
ಈ ಕುರಿತು ಪಂಚಾಯಿತಿ ಅಧಿಕಾರಿಗಳಿಗೆ ಮಾಹಿತಿ ಕೇಳಿದಾಗ ಸುಮಾರು 8 ತಿಂಗಳ ಹಿಂದೆ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಗೆ ತೆರವುಗೊಳಿಸುವದರ ಕುರಿತು ಪತ್ರವನ್ನು ಬರೆದಿದ್ದೇವೆ. ಇಲ್ಲಿನ ಸದಸ್ಯರು ಹಾಗೂ ಗ್ರಾಂ.ಪಂ ಅಧಿಕಾರಿಗಳ ಸಾಮಾನ್ಯ ಸಭೆ ವೇಳೆ ಜೆಜೆಎಂ ಕಾಮಗಾರಿ ಶುರುವಾದ ಕೂಡಲೇ ತೆರವುಗೊಳಿಸುವ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಏಕೆಂದರೆ ಕಾಮಗಾರಿ ಮುನ್ನವೇ ತೆರವುಗೊಳಿಸಿದರೆ ಗ್ರಾಮಕ್ಕೆ ನೀರಿನ ಕೊರತೆ ಉಂಟಾಗುತ್ತದೆ. ತೆರವು ಕಾರ್ಯ ಪ್ರಾರಂಭವಾಗಿಲ್ಲ ಎಂದು ಹೇಳುತ್ತಾರೆ. ಈ ಗೊಂದಲದ ನಡುವೆ ಶಿಥಿಲಾವಸ್ಥೆ ತಲುಪಿದ ಓವರ್ ಹೆಡ್ ವಾಟರ್ ಟ್ಯಾಂಕ್ ಯಾವಾಗ ಬೀಳುತ್ತದೆ ಎಂಬುದು ಗೊತ್ತಿಲ್ಲದಂತೆ ಆಗಿದೆ ಶಾಲೆಯ 415 ಮಕ್ಕಳು ಹಾಗೂ ಶಿಕ್ಷಕರು ಜೀವ ಕೈಯಲ್ಲಿ ಹಿಡಿದುಕೊಂಡು ಶಾಲೆಗೆ ಹೋಗುವಂತಹ ಪರಿಸ್ಥಿತಿ ಎದುರಾಗಿದೆ. ಏನಾದರೂ ಅನಾಹುತ ಸಂಭವಿಸಿದರೆ ಇದಕ್ಕೆ ಹೊಣೆ ಗ್ರಾಂ.ಪಂ ಅಧಿಕಾರಿಗಳೋ ? ಅಥವಾ ಗ್ರಾಮ ಪಂಚಾಯತ್ ಸದಸ್ಯರೋ? ಎಂದು ಸ್ಥಳೀಯರು ಪ್ರಶ್ನೆ ಮಾಡುತ್ತಾರೆ.
ಇದನ್ನೂ ಓದಿ : ಲಕ್ಷಕ್ಕೆ ಬರುತ್ತಾ ಅಡಿಕೆ ದರ?
HOW TO APPLY : NEET-UG COUNSELLING 2023