ಕರಾವಳಿಯಲ್ಲಿ ಮಳೆಗೆ ಮತ್ತೆರಡು ಬಲಿ!
– 3 ದಿನ ರಾಜ್ಯದಲ್ಲಿ ಭಾರೀ ಮಳೆ ಅಲರ್ಟ್!
– ಕಾರ್ಕಳದಲ್ಲಿ ಆಲದ ಮರ ಬಿದ್ದು ಬೈಕ್ ಸವಾರ ಸಾವು
– ದಕ್ಷಿಣ ಕನ್ನಡದ ನಂದಾವರದಲ್ಲಿ ಗುಡ್ಡ ಕುಸಿದು ಸಾವು
NAMMUR EXPRESS NEWS
ಮಂಗಳೂರು/ ಬೆಂಗಳೂರು: ಭಾರತೀಯ ಹವಾಮಾನ ಇಲಾಖೆಯ ಮುನ್ಸೂಚನೆಯಂತೆ ಕರಾವಳಿ ಮತ್ತು ಮಲೆನಾಡು ಭಾಗದಲ್ಲಿ ಮುಂದಿನ ಮೂರು ದಿನಗಳ ಕಾಲ ಹೆಚ್ಚಿನ ಮಳೆಯಾಗುವ ಸಾಧ್ಯತೆ ಇದೆ. ಈ ನಡುವೆ ಕರಾವಳಿಯ ಉಡುಪಿ ಮತ್ತು ದಕ್ಷಿಣ ಕನ್ನಡದಲ್ಲಿ ಮತ್ತೆರಡು ಸಾವು ಸಂಭವಿಸಿದೆ.
ಗುಡ್ಡ ಕುಸಿದು ಸಾವು: ಮನೆ ಮೇಲೆ ಗುಡ್ಡ ಕುಸಿದು ತಾಯಿ ಸಾವನ್ನು ಕಂಡಿದ್ದು ಮಗಳ ರಕ್ಷಣೆ ಮಾಡಲಾಗಿದೆ.
ಬಂಟ್ವಳ ತಾಲೂಕಿನ ಸಜೀಪಮುನ್ನೂರು ಸಮೀಪದ ನಂದಾವರದಲ್ಲಿ ನಡೆದಿದೆ.ಘಟನೆಯಲ್ಲಿ ಮೃತಪಟ್ಟ ಮಹಿಳೆಯನ್ನು ನಂದಾವರ ನಿವಾಸಿ ಮುಹಮ್ಮದ್ ರವರ ಪತ್ನಿ ಝರೀನಾ (47) ಎಂದು ಗುರುತಿಸಲಾಗಿದೆ.
ಕಳೆದ ಒಂದು ವಾರಗಳಿಂದ ಜಿಲ್ಲೆಯಲ್ಲಿ ಬೀಸುತ್ತಿರುವ ಭೀಕರ ಮಳೆಗೆ ಮನೆಯ ಹಿಂಬದಿಯ ಗುಡ್ಡ ಜರಿದು ಝರೀನಾ ರವರ ಮನೆ ಮೇಲೆ ಬಿದ್ದಿದ್ದು ಮನೆಯೊಳಗಿದ್ದ ತಾಯಿ ಮತ್ತು ಮಗಳು ಶಫಾ(20) ರವರ ಮೇಲೇಯೂ ಗುಡ್ಡ ಜರಿದು ಬಿದ್ದಿದ್ದು ಇಬ್ಬರು ಮಣ್ಣಿನಡಿಗೆ ಸಿಲುಕಿದ್ದರು.ಅವರಲ್ಲಿ ಶಫಾ ರವರನ್ನು ತಕ್ಷಣವೇ ರಕ್ಷಣೆ ಮಾಡಿ ಹೊರ ತೆಗೆಯಲಾಗಿದ್ದು.ಗಂಭೀರ ಗಾಯಗೊಂಡ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.ಆದರೆ ಝರೀನಾ ರವರನ್ನು ಹೊರ ತೆಗಿಯುವ ವೇಳೆ ಮೃತಪಟ್ಟಿದ್ದಾಗಿ ತಿಳಿದು ಬಂದಿದೆ.
ಕಾರ್ಕಳದಲ್ಲಿ ಮರ ಬಿದ್ದು ಸಾವು:
ಕಾರ್ಕಳದಲ್ಲಿ ಚಲಿಸುತ್ತಿದ್ದ ಬೈಕ್ ಮೇಲೆ ಬೃಹತ್ ಮರ ಉರುಳಿ ಬಿದ್ದು ಬೈಕ್ ಸವಾರ ಸಾವನ್ನು ಕಂಡ ಘಟನೆ ಬೆಳ್ಮಣ್ ಪೇಟೆಯಲ್ಲಿ ನಡೆದಿದೆ. ಘಟನೆಯಲ್ಲಿ ಬೈಕ್ ಸವಾರ ಮರದಡಿಯಲ್ಲಿ ಸಿಲುಕಿಕೊಂಡಿದ್ದು ಕೂಡಲೇ ಸ್ಥಳೀಯರು ಆಸ್ಪತ್ರೆಗೆ ಸಾಗಿಸುವ ವೇಳೆ ಮೃತಪಟ್ಟಿದ್ದಾನೆ. ಮೃತರನ್ನು ಪ್ರವೀಣ್ ಆಚಾರ್ಯ ಎಂದು ಗುರುತಿಸಲಾಗಿದೆ.
ಮೂರು ದಿನ ಭಾರೀ ಮಳೆ!:
ಮೂರು ದಿನ ಆರೆಂಜ್ ಅಲರ್ಟ್ ಇದ್ದು ವ್ಯಾಪಕವಾಗಿ ಮಳೆ ಆಗುವ ಸಾಧ್ಯತೆ ಇದೆ. ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರ ಮುಂಜಾಗ್ರತ ಕ್ರಮ ವಹಿಸಬೇಕಾಗಿರುವುದರಿಂದ ಸಾರ್ವಜನಿಕರಿಗೆ ಸೂಚನೆಗಳನ್ನು ನೀಡಲಾಗಿದೆ. ಸಾರ್ವಜನಿಕರು ಪ್ರವಾಸಿಗರು ನದಿಗೆ ಅಥವಾ ತಗ್ಗು ಪ್ರದೇಶಗಳಿಗೆ ಇಳಿಯದಂತೆ ಕಟ್ಟೆಚರವಹಿಸುವುದು ಅಪಾಯಕಾರಿ ವಿದ್ಯುತ್ ಕಂಬ, ಕಟ್ಟಡ, ಮರಗಳ ಹತ್ತಿರ ಕೆಳಗೆ ನಿಲ್ಲದೆ ಸುರಕ್ಷಿತ ಸ್ಥಳಗಳನ್ನು ತಲುಪುವುದು, ವಿದ್ಯಾರ್ಥಿಗಳ ಪೋಷಕರು, ಶಾಲಾ ಮುಖ್ಯಸ್ಥರು, ವಿದ್ಯಾರ್ಥಿಗಳು ನೀರು ಇರುವ ತಗ್ಗು ಪ್ರದೇಶ ಕೆರೆ, ನದಿ ತೀರಕ್ಕೆ ಹೋಗದಂತೆ ಜಾಗೃತೆ ವಹಿಸಬೇಕು. ಹಿರಿಯ ನಾಗರಿಕರು, ವಯಸ್ಕರು ಕೆರೆ, ನದಿ ತೀರಕ್ಕೆ ಹೋಗದಂತೆ ಜಾಗೃತಿ ವಹಿಸುವುದು, ಹೊರಗೆ ತೆರಳುವುದು ಅನಿವಾರ್ಯವಿದ್ದಲ್ಲಿ ಕುಟುಂಬದ ಸದಸ್ಯರೊಂದಿಗೆ ತೆರಳತಕ್ಕದ್ದು, ಸಾರ್ವಜನಿಕರು ಯಾವುದೇ ಅಪಾಯಕಾರಿ ಘಟನೆಗಳಿಗೆ ಅವಕಾಶ ಕೊಡದೆ ಜಿಲ್ಲಾಡಳಿತದೊಂದಿಗೆ ಸಹಕಾರ ನೀಡಲು ತಿಳಿಸಿದೆ.
ಇದನ್ನೂ ಓದಿ : ಅಡಿಕೆ ದರ ಎಷ್ಟಿದೆ..ಕಾಳು ಮೆಣಸು ದರ ಎಷ್ಟು?
HOW TO APPLY : NEET-UG COUNSELLING 2023