2.5 ಲಕ್ಷ ರೂ.ಮೌಲ್ಯದ ಟೊಮೋಟೊ ಕದ್ದ ಕಳ್ಳರು!?
– ಹಾಸನದ ಬೇಲೂರು ತಾಲೂಕಿನ ಗೋಣಿ ಸೋಮನಹಳ್ಳಿಯಲ್ಲಿ ಘಟನೆ
– ಟೋಮೋಟೋ ದರ ಏರಿಕೆ ಹಿನ್ನಲೆ ಕಳ್ಳತನ
– ಭಿಕ್ಷೆ ಬೇಡಲು ಮಹಿಳೆಯಾದ ಪುರುಷ!
– ಸಾರ್ವಜನಿಕರ ಕೈಗೆ ಸಿಕ್ಕಿ ಬಿದ್ದ ವೇಷಧಾರಿ!
NAMMUR EXPRESS NEWS
ಹಾಸನ: ರೈತ ಮಹಿಳೆಯೊಬ್ಬರು ತಮ್ಮ ಜಮೀನಿನಿಂದ 2.5 ಲಕ್ಷ ರೂಪಾಯಿ ಮೌಲ್ಯದ ಟೊಮೆಟೊಗಳನ್ನು ಕಳವು ಮಾಡಿದ್ದಾರೆ ಎಂದು ಆರೋಪಿಸಿದ್ದು ಟೋಮೋಟೋ ದರ ಹೆಚ್ಚಳ ನಡುವೆ ಈ ಘಟನೆ ಕುತೂಹಲ ಮೂಡಿಸಿದೆ.
ಹಾಸನ ಜಿಲ್ಲೆಯ ಬೇಲೂರು ತಾಲೂಕಿನ ಗೋಣಿ ಸೋಮನಹಳ್ಳಿ ಗ್ರಾಮದ ರೈತ ಮಹಿಳೆಯ ಕೃಷಿ ಜಮೀನಿನಲ್ಲಿ ಮಂಗಳವಾರ ರಾತ್ರಿ ಕಳ್ಳರು 50-60 ಚೀಲ ಟೊಮೇಟೊಗಳೊಂದಿಗೆ ಪರಾರಿಯಾಗಿದ್ದಾರೆ.
ರೈತ ಮಹಿಳೆ ಧಾರಿಣಿ ಮತ್ತು ಅವರ ಕುಟುಂಬ ಸದಸ್ಯರು ಎರಡು ಎಕರೆ ಜಮೀನಿನಲ್ಲಿ ಟೊಮೆಟೊ ಬೆಳೆದಿದ್ದು, ಮುಂದಿನ ವಾರ ಇಳುವರಿಯನ್ನು ಮಾರುಕಟ್ಟೆಗೆ ಸಾಗಿಸಲು ಯೋಜಿಸಿದ್ದರು. ಆದರೆ ಅಷ್ಟರಲ್ಲಾಗಲೇ ಕಳ್ಳರು ಟೊಮೆಟೊಗಳನ್ನು ಕಳ್ಳತನ ಮಾಡಿದ್ದಾರೆ. ಟೊಮೆಟೊ ಬೆಲೆಗಳು ಗಗನಕ್ಕೇರಿರುವುದೇ ಈ ಕೃತ್ಯಕ್ಕೆ ಕಾರಣ ಎನ್ನಲಾಗಿದೆ. ಹಳೇಬೀಡು ಪೊಲೀಸ್ ಠಾಣೆಯಲ್ಲಿ ಕಳ್ಳತನ ಪ್ರಕರಣ ದಾಖಲಾಗಿದೆ.
ಮಹಿಳೆಯ ವೇಷ ಧರಿಸಿ ಭಿಕ್ಷೆ ಬೇಡಿ ಸಿಕ್ಕಿಬಿದ್ದ!
ಮಹಿಳೆಯ ವೇಷ ಧರಿಸಿ ಬಸ್ ನಿಲ್ದಾಣದಲ್ಲಿ ಓಡಾಡುತ್ತಿದ್ದ ವ್ಯಕ್ತಿಯೋರ್ವನನ್ನು ಸಾರ್ವಜನಿಕರು ಪತ್ತೆ ಹಚ್ಚಿ, ತೀವ್ರವಾಗಿ ತರಾಟೆಗೆತ್ತಿಕೊಂಡ ಘಟನೆ ಹುಬ್ಬಳ್ಳಿ ಧಾರವಾಡಡ ಕು೦ದಗೋಳ ತಾಲೂಕಿನ ಸಂಶಿ ಬಸ್ ನಿಲ್ದಾನದಲ್ಲಿ ನಡೆದಿದೆ. ಗುರುವಾರ ಬೆಳಗ್ಗೆ ಬಸ್ ನಿಲ್ದಾಣದಲ್ಲಿ ಬುರ್ಖಾ ಧರಿಸಿ ವ್ಯಕ್ತಿ ಕುಳಿತಿದ್ದು, ಮಹಿಳೆಯ ವೇಷದ೦ತೆ ಕ೦ಡು ಅನುಮಾನಗೊಂಡ ಸಾರ್ವಜನಿಕರು ಬುರ್ಖಾ ತೆಗೆಸಿದಾಗ, ಪುರುಷ ಮಹಿಳೆಯ ವೇಷ ಧರಿಸಿರುವುದು ಪತ್ತೆಯಾಗಿದೆ.
ವ್ಯಕ್ತಿಯನ್ನು ವಿಚಾರಿಸಿದಾಗ, ತಾನು ವೀರಭದ್ರಯ್ಯ ನಿಂಗಯ್ಯ ಮಠಪತಿ ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕು ಘೋಡಗೋರಿ ನಿವಾಸಿ ಎಂದು ಒಪ್ಪಿಕೊಂಡಿದ್ದು, ಬುರ್ಖಾ ಧರಿಸಿ ಮಹಿಳೆಯ ವೇಷದಲ್ಲಿ ಈತ ಭಿಕ್ಷೆ ಬೇಡುತ್ತಿರುವುದಾಗಿ ತಿಳಿಸಿದ್ದಾನೆನ್ನಲಾಗಿದೆ. ಹೆಚ್ಚಿನ ಜನರು ಈತ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಇರುವ ಕಾರಣ ಮಹಿಳೆಯ ವೇಷ ಧರಿಸಿ ಬಂದಿದ್ದಾನೆ ಎಂದೇ ಭಾವಿಸಿದ್ದರು, ಆದ್ರೆ ಭಿಕ್ಷಾಟನೆಗೆ ಈ ವೇಷ ಧರಿಸಿರುವುದು ತಿಳಿಯುತ್ತಿದ್ದಂತೆಯೇ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದು. ಇನ್ನೂ ವ್ಯಕ್ತಿಯ ಬಳಿಯಲ್ಲಿ ಮುಸ್ಲಿಮ್ ಮಹಿಳೆಯ ಆಧಾರ್ ಕಾರ್ಡ್ ಝರಾಕ್ಸ್ ಕೂಡ ಇದ್ದು, ಹಲವು ಸಂಶಯಗಳಿಗೆ ಕಾರಣವಾಗಿದೆ.
ಇದನ್ನೂ ಓದಿ : ಅಡಿಕೆ ದರ ಎಷ್ಟಿದೆ..ಕಾಳು ಮೆಣಸು ದರ ಎಷ್ಟು?
HOW TO APPLY : NEET-UG COUNSELLING 2023