ಎಲ್ಲೆಂದರಲ್ಲಿ ಪೂಲಾಗುತ್ತಿರುವ ಕುಡಿಯುವ ನೀರು
– ನಿವಾಸಿಗಳ ಮನೆಗಳಿಗೆ ಪೂರೈಕೆಯಾಗದ ನೀರು
– ರಸ್ತೆ ಪಾಲಾಗುತ್ತಿರುವ ಕುಡಿಯುವ ನೀರು : ಸಾರ್ವಜನಿಕರ ಆಕ್ರೋಶ
– 15 ದಿನಗಳಿಂದ ಪಟ್ಟಣದ ಹಲವಾರು ಮನೆಗಳಿಗೆ ನೀರು ಪೂರೈಕೆ ಸ್ಥಗಿತ
– ಸಂಕಷ್ಟದಲ್ಲಿ ಸ್ಥಳೀಯ ನಿವಾಸಿಗಳು
NAMMUR EXPRESS
ಸಿಂದಗಿ : ಪಟ್ಟಣದ ನಿವಾಸಿಗಳು ಕುಡಿಯುವ ನೀರಿನ ಅಭಾವ ಎದುರಿಸುತ್ತಿದ್ದಾರೆ. ಪುರಸಭೆ ವತಿಯಿಂದ ಮನೆಗಳಿಗೆ ಪೂರೈಕೆಯಾಗುವ ಕುಡಿಯುವ ನೀರು ರಸ್ತೆ ಪಾಲಾಗುತ್ತಿದ್ದು . ಮೊದಲೇ 15 ದಿನಕ್ಕೊಮ್ಮೆ ನಲ್ಲಿಯಲ್ಲಿ ನೀರು ಬರುತ್ತಿದ್ದು ಆ ನೀರು ಸಹ ರಸ್ತೆ ಪಾಲಾಗುತ್ತಿದೆ. ಈ ಕುರಿತು ಸ್ಥಳೀಯ ನಿವಾಸಿಗಳು ಪುರಸಭೆ ಆಡಳಿತದ ಕೆಂಡಾಮಂಡಲವಾಗಿದ್ದ್ದಾರೆ. ಮೇಲಾಧಿಕಾರಿಗಳಿಗೆ ದೂರು ನೀಡಿದರು ಪ್ರಯೋಜನ ಆಗಿಲ್ಲ ಎಂದು ಆಕ್ರೋಶ ವ್ಯಕ್ತ ಪಡಿಸುತ್ತಿದ್ದಾರೆ. ಸಿಂದಗಿ ಕೆರೆಯಲ್ಲಿ ನೀರಿನ ಮಟ್ಟವು ಮಳೆಯಾಗದ ಹಿನ್ನಲೆ ಕಡಿಮೆಯಾಗುತ್ತಿದೆ. ಇಷ್ಟೆಲ್ಲದರ ನಡುವೆ ಅಲ್ಪ ಸ್ವಲ್ಪ ಪೂರೈಕೆಯಾಗುವ ನೀರು ರಸ್ತೆ ಪಾಲಾಗುತ್ತಿದೆ. ಕಾರಣ ಸಾರ್ವಜನಿಕರು ಪುರಸಭೆ ಆಡಳಿತ ವೈಪೈಲ್ಯ ಕುರಿತು ಟೀಕಾ ಪ್ರಹಾರ ನಡೆಸಿದ್ದಾರೆ.
ಇದನ್ನೂ ಓದಿ : ಯಾವ ಊರಲ್ಲಿ ಜು.9ಕ್ಕೆ ಅಡಿಕೆ ದರ ಎಷ್ಟು ?
HOW TO APPLY : NEET-UG COUNSELLING 2023