ಹ್ಯಾಪಿ ಬರ್ತ್ ಡೇ ಶಿವಣ್ಣ…!
– ಹ್ಯಾಟ್ರಿಕ್ ಹೀರೋ ಶಿವಣ್ಣಗೆ ಜನ್ಮ ದಿನದ ಸಂಭ್ರಮ!
– ರಾಜ್ಯದ ಅಭಿಮಾನಿಗಳಿಂದ ಶುಭಾಶಯಗಳು
– ಸರಳತೆ, ಸಜ್ಜನಿಕೆಯ ಮೂಲಕ ಹೆಸರು ಮಾಡಿದ ನಟ
NAMMUR EXPRESS NEWS
ಕನ್ನಡದ ಖ್ಯಾತ ನಟ, ತನ್ನ ಹೃದಯವಂತಿಕೆ ಮೂಲದ ಕರುನಾಡ ಜನರ ಮನ ಗೆದ್ದ ಡಾ. ಶಿವರಾಜ್ಕುಮಾರ್ ಅವರಿಗೆ ಜನ್ಮ ದಿನದ ಸಂಭ್ರಮ. ಕನ್ನಡದ ಚಿತ್ರನಟ. ಡಾ.ರಾಜ್ಕುಮಾರ್ ಅವರ ಹಿರಿಯಪುತ್ರ. ಶಿವಣ್ಣ ಎಂದೇ
ಹೆಸರಾದ ಶಿವರಾಜ್ಕುಮಾರ್, ನಟಿಸಿದ ಮೊದಲ ಮೂರೂ ಚಿತ್ರಗಳು 100 ದಿನ ಪ್ರದರ್ಶನ ಕಂಡು ಹ್ಯಾಟ್ರಿಕ್ ಹೀರೋ ಬಿರುದು ಪಡೆದ ಹಿರಿಮೆ ಇವರದ್ದು.
ಶಿವರಾಜ್ಕುಮಾರ್ 1962ರ ಜುಲೈನಲ್ಲಿ ಮದ್ರಾಸ್ ನಗರದಲ್ಲಿ ಡಾ. ರಾಜ್ಕುಮಾರ್ ಮತ್ತು ಪಾರ್ವತಮ್ಮ ದಂಪತಿಗಳಿಗೆ ಜನಿಸಿದರು. ಡಾ. ರಾಜ್ಕುಮಾರ್ ಮಗನಿಗೆ ಶಿವಪುಟ್ಟಸ್ವಾಮಿ ಎಂದು ತಮ್ಮ ತಂದೆ ಸಿಂಗಾನಲ್ಲೂರು ಪುಟ್ಟಸ್ವಾಮಯ್ಯನವರ ಜ್ಞಾಪಕಾರ್ಥವಾಗಿ ಅವರ ಹೆಸರನ್ನೇ ಮಗನಿಗೆ ಇಟ್ಟರು. ಬಾಲ್ಯದಿಂದಲೇ ಶಿಸ್ತು ಮತ್ತು ಸಂಯಮಗಳನ್ನು ರೂಢಿಸಿಕೊಂಡ ಶಿವರಾಜ್ಕುಮಾರ್, ಕ್ರೀಡಾಚಟುವಟಿಕೆಗಳಲ್ಲಿ ಹೆಸರು ಮಾಡಿದರು. ಮುಂಬೈನಲ್ಲಿ ಅಭಿನಯದ ತರಬೇತಿ ಪಡೆದ ಶಿವರಾಜ್ಕುಮಾರ್, 1986ನೇ ಇಸವಿಯಲ್ಲಿ ಆನಂದ್ ಚಿತ್ರದ ಮೂಲಕ ಚಿತ್ರರಂಗ ಪ್ರವೇಶ ಮಾಡಿದರು. ಚಿ. ಉದಯಶಂಕರ್ ಪುತ್ರ ಚಿ. ಗುರುದತ್, ನಟಿ ಸುಧಾರಾಣಿ ಇವರಿಬ್ಬರ ಮೊದಲ ಚಿತ್ರವೂ ಆನಂದ್ ಆಗಿತ್ತು.
ರಥಸಪ್ತಮಿ ಮತ್ತು ಮನಮೆಚ್ಚಿದ ಹುಡುಗಿ ಕೂಡ ಶತದಿನ ಪ್ರದರ್ಶನ ಕಂಡವು. 1994ರಲ್ಲಿ ಉಪೇಂದ್ರ ನಿರ್ದೇಶನದ ಓಂ ಚಿತ್ರ ಶಿವರಾಜ್ಕುಮಾರ್ ಅವರಿಗೆ ಭಿನ್ನ ಇಮೇಜ್ ನೀಡಿತು. ಭೂಗತ ಪಾತಕಿ ಸ್ಟೇಷನ್ ಸತ್ಯ ಬದುಕನ್ನು ಆಧರಿಸಿದ ಆ ಚಿತ್ರ ಜನಮನ್ನಣೆ, ಯಶಸ್ಸು ಮತ್ತು ಕೀರ್ತಿ ತಂದಿತು. 1995ರಲ್ಲಿ ಜನುಮದ ಜೋಡಿ ಮತ್ತು ನಮ್ಮೂರ ಮಂದಾರ ಹೂವೆ ಚಿತ್ರಗಳ ಅಭೂತಪೂರ್ವ ಯಶಸ್ಸು ಹಿವರಾಜ್ಕುಮಾರ್ ರಿಗೆ ಅಗ್ರ ಸ್ಥಾನದತ್ತ ತಂದೊಯ್ದಿತು. ಆ ರೀತಿಯ ಗೆಲುವನ್ನು
ಕಾಣಲು, 1999ರಲ್ಲಿ ತೆರೆಕಂಡ ಎಕೆ 42 ಚಿತ್ರದವರೆಗೆ ಶಿವರಾಜ್ಕುಮಾರ್ ಕಾಯಬೇಕಾಯಿತು. ತಮ್ಮ ಸಜ್ಜನಿಕೆ, ಸರಳತೆ ಮತ್ತು ಆತ್ಮೀಯತೆ ಮೂಲಕ ನಿರ್ಮಾಪಕರುಗಳಿಗೆ ಮಿನಿಮಂ ಗ್ಯಾರಂಟಿ ಹೀರೋ ಆದರು. ಹತ್ತಾರು ರಾಷ್ಟ್ರೀಯ, ರಾಜ್ಯ ಪ್ರಶಸ್ತಿಗಳು ಶಿವಣ್ಣ ಅವರನ್ನು ಅರಸಿ ಬಂದಿವೆ. ಕನ್ನಡದ ಟಾಪ್ ನಟರಾಗಿ ಸಾವಿರಾರು ಕಲಾವಿದರಿಗೆ ಪ್ರೇರಣೆಯಾಗಿರುವ ಶಿವಣ್ಣ ಅವರ ಕಲಾ ಸೇವೆ ಹೀಗೆ ಮುಂದುವರಿಯಲಿ..
ಹ್ಯಾಪಿ ಬರ್ತ್ ಡೇ ಶಿವಣ್ಣ…!
ಇದನ್ನೂ ಓದಿ : ಯಾವ ಊರಲ್ಲಿ ಜು.9ಕ್ಕೆ ಅಡಿಕೆ ದರ ಎಷ್ಟು ?
HOW TO APPLY : NEET-UG COUNSELLING 2023