ಹಿಂದೂಗಳ ರಕ್ಷಣೆಗಾಗಿ ಹೋರಾಟ!
– ಸಿಂದಗಿಯಲ್ಲಿ ಹಿಂದೂಪರ ಸಂಘಟನೆಗಳ ಪ್ರತಿಭಟನೆ
NAMMUR EXPRESS SINDAGI
ಸಿಂದಗಿ: ಜು. ೮ ರಂದು ಟಿ.ನರಸೀಪುರದಲ್ಲಿ ಹಿಂದೂ ಕಾರ್ಯಕರ್ತ ಹಾಗೂ ಯುವ ಬ್ರಿಗೇಡ್ ಸದಸ್ಯ ವೇಣು ಗೋಪಾಲರವರನ್ನು ಹಾಗೂ ಕಳೆದ ೩ ದಿನದ ಹಿಂದೆ ಚಿಕ್ಕೋಡಿಯಲ್ಲಿ ಜೈನ ಮುನಿಗಳ ಬರ್ಬರ ಹತ್ಯೆಯನ್ನು ಖಂಡಿಸಿ ಹಿಂದೂ ಪರ ಸಂಘಟನೆಗಳು ಹಿಂದೂಗಳ ರಕ್ಷಣೆಗಾಗಿ ತಹಶೀಲ್ದಾರ್ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿದ್ದಾರೆ.
ಪಟ್ಟಣದ ತಾಲೂಕು ಆಡಳಿತ ಸೌಧದಲ್ಲಿ ಮನವಿ ಸಲ್ಲಿಸಿ ಮಾತನಾಡಿದ ಯುವಾ ಬ್ರಿಗೇಡ್ ಸಂಚಾಲಕ ರಾಜು ಪಾಟೀಲ ಅಹಿಂಸೆಯೇ ನನ್ನ ಧರ್ಮ ಎನ್ನುವ ಜೈನ ಮುನಿಯನ್ನು ಹತ್ಯೆ ಮಾಡಿದ್ದು ಬಹು ದೊಡ್ಡ ಅಪರಾಧ ಪೋಲಿಸ್ ಪ್ರಕರಣದಲ್ಲಿ ದುಡ್ಡಿನ ವ್ಯವಹಾರ ಎಂದು ಹೇಳಲಾಗುತ್ತಿದೆ.
ಅಲ್ಲಿನ ಶಾಸಕರು ಹೇಳುವ ಹಾಗೆ ಜೈನ ಮುನಿಗಳು ಯಾವುದೇ ರೀತಿಯ ವ್ಯವಹಾರ ಇಟ್ಟುಕೊಂಡಿಲ್ಲ ಈ ಕುರಿತು ಸೂಕ್ತ ತನಿಖೆ ಮಾಡಿ ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸಬೇಕು ಮತ್ತು ಹನುಮ ಜಯಂತಿ ಆಚರಿಸಿ ಹಿಂದೂ ಕಾರ್ಯಕರ್ತನನ್ನು ಬಾಟಲಿಯಿಂದ ಹೊಡೆದು ಹತ್ಯೆ ಮಾಡಲಾಗಿದೆ. ಈ ರೀತಿಯ ಘಟನೆಗಳು ಸಮಾಜದ ವ್ಯವಸ್ಥೆಯನ್ನು ಹಾಳು ಮಾಡುತ್ತವೆ ಮೃತ ವ್ಯಕ್ತಿಯ ಕುಟುಂಬಕ್ಕೆ ಸರ್ಕಾರ ೨೫ ಲಕ್ಷ ರೂಪಾಯಿ ಘೋಷಣೆ ಮಾಡಬೇಕು ಎಂದು ಆಗ್ರಹಿಸಿದರು.
ಮಾತನಾಡಿದ ರಾಕೇಶ ಮಠ ಹಿಂದಿನ ಸರ್ಕಾರ ಇದ್ದಾಗಲೂ ಹಿಂದೂಗಳ ಕೊಲೆಯಾಗಿವೆ. ಇಂದಿನ ಸರ್ಕಾರ ಇದ್ದಾಗಲೂ ಕೊಲೆಗಳು ನಡೆಯುತ್ತಲೇ ಇವೆ. ಹಿಂದೂಗಳು ಒಗ್ಗಾಟ್ಟಾಗಿ ಇದ್ದರೆ ಇಂತಹ ಪ್ರಕರಣಗಳು ನಡೆಯುವುದಿಲ್ಲ ಎಂದು ಹೇಳಿದರು.
ಮಾತನಾಡಿದ ಅಶೋಕ ನೇಗಿನಾಳ ಹಿಂದೂ ಕಾರ್ಯಕರ್ತ ಹಾಗೂ ಜೈನ ಮುನಿ ಸನ್ಯಾಸಿಯನ್ನು ಹತ್ಯೆ ಮಾಡಿರುವುದು ಖಂಡನೀಯ ಸರ್ಕಾರ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣ ಸಿ ರಾಜ್ಯದಲ್ಲಿ ಮತ್ತೊಮ್ಮೆ ಇಂತಹ ಅಹಿತಕರ ಘಟನೆ ನಡೆಯದಂತೆ ನೋಡಿಕೊಳ್ಳಬೇಕು ಎಂದರು. ವಿಶ್ವ ಹಿಂದೂ ಪರಿಷತ್ ತಾಲೂಕು ಅಧ್ಯಕ್ಷ ಶೇಖರಗೌಡ ಹರನಾಳ ಮಾತನಾಡಿದರು. ಈ ವೇಳೆ ಮಡಿವಾಳ ವಾಲಿಕಾರ, ಪ್ರಶಾಂತ ಬಗಲಿ, ಪರಶುರಾಮ ಭಜಂತ್ರಿ, ಶಿವಾನಂದ ಬಿರಾದಾರ, ಮಂಜು ನಾಟಿಕಾರ, ಶ್ರೀಶೈಲ ಕಲಬುರಗಿ, ನಿಖೀಲ ಬಿರಾದಾರ, ಮೌನೇಶ ಕಟ್ಟಿಮನಿ, ಮಹೇಶ ಉಪ್ಪಾರ, ಸಿದ್ದು ಬಿರಾದಾರ, ವಿಶಾಲ ನಾಯ್ಕೋಡಿ, ಲಕ್ಷಿö್ಮಕಾಂತ ನಾಯ್ಕೋಡಿ, ಆಕಾಶ ಕುಂಬಾರ ಇದ್ದರು.
ಇದನ್ನೂ ಓದಿ : ಯಾವ ಊರಲ್ಲಿ ಜು.9ಕ್ಕೆ ಅಡಿಕೆ ದರ ಎಷ್ಟು ?
HOW TO APPLY : NEET-UG COUNSELLING 2023